RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಗೋಕಾಕಿನ ಐವರು ಸ್ಥಳದಲ್ಲೇ ಸಾವು

ಗೋಕಾಕ:ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಗೋಕಾಕಿನ ಐವರು ಸ್ಥಳದಲ್ಲೇ ಸಾವು 

ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಗೋಕಾಕಿನ ಐವರು ಸ್ಥಳದಲ್ಲೇ ಸಾವು

ಗೋಕಾಕ ಜ 8: ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ 7:30 ರ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಕಬ್ಬಿಣದ ತಂತಿಗಳನ್ನು ತುಂಬಿದ ಭಾರಿ ಲಾರಿಗೆ ಕ್ರೂಜರ ಡಿಕ್ಕಿ ಹೊಡೆದ ಪರಿಣಾಮವಾಗಿ ಗೋಕಾಕ ತಾಲೂಕಿನ ಖಾನಟ್ಟಿ  ಗ್ರಾಮದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಸಿಬಾರ್ ಗ್ರಾಮದ ಬಳಿ ನಡೆದಿದೆ

ಸಿಬಾರ್‌‌ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್‌‌ನಲ್ಲಿದ್ದವರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ

ಡಿಕ್ಕಿಯಿಂದ ಕ್ರೂಸರ್‌ ನಜ್ಜುಗುಜ್ಜಾಗಿದ್ದು, ಸಿದ್ಧಾರ್ಥ್‌, ರಾಕೇಶ್‌, ಶಿವಲಿಂಗು ವಿನೋದ್‌ ಹಾಗೂ ಕ್ರೂಸರ್‌‌ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಲ್ಲರೂ 18 ರಿಂದ 24 ವಯಸ್ಸಿನವರಾಗಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಖಾನಟ್ಟಿ   ಗ್ರಾಮದವರು ಎಂದು ಗುರುತಿಸಲಾಗಿದೆ

 

ಇವರೆಲ್ಲ ಶನಿವಾರ ಬೆಳಗಾವಿಯಿಂದ ಮೈಸೂರಿಗೆ ಪ್ರವಾಸಕ್ಕೆಂದು ತೆರಳಿದ್ದರು. ನಂತರ ನಿನ್ನೆ ರಾತ್ರಿ ಮೈಸೂರಿನಿಂದ ಬೆಳಗಾವಿಗೆ ವಾಪಸ್‌ ಆಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. 

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಸಿಬಾರ್ ಗ್ರಾಮದ ಸರಹದ್ದಿಗೆ ಒಳಪಡುವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Related posts: