ಗೋಕಾಕ:ನಿರೂಪಯುಕ್ತ ಕೊಳವ ಬಾವಿ ಮುಚ್ಚುವಂತೆ ಮನವಿ
ನಿರೂಪಯುಕ್ತ ಕೊಳವ ಬಾವಿ ಮುಚ್ಚುವಂತೆ ಮನವಿ
ಗೋಕಾಕ ಜ 9 : ಗೋಕಾಕ ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿರುವ ನಿರೂಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಸಂಬಧಿಸಿದವರು ಕೊಡಲೇ ಎಚ್ಚತ್ತುಕೊಂಡು ಅಪಾಯ ಸಂಭವಿಸುವ ಮುನ್ನ ಮುಚ್ಚುವಂತೆ ಗೋಕಾಕ ಹೋಬಳಿ ಕಂದಾಯ ನಿರೀಕ್ಷಕ ಎಸ್.ಬಿ.ಕಟ್ಟಿಮನಿ ಹೇಳಿದರು.
ಮಂಗಳವಾರದಂದು ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ವಿಫಲ ಮತ್ತು ನಿರೂಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಆರಂಭಿಸಲಾಗಿದೆ.ಒಂದು ವೇಳೆ ಹಾಗೇ ತೆರೆದ ಸ್ಥಿತಿಯಲ್ಲಿ ಬಿಟ್ಟಿದ್ದು ಗೊತ್ತಾದರೆ ಅಂಥವರ ಮೇಲೆ ಕ್ರೀಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಗೋಕಾಕ ಹೋಬಳಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿಯ ರೈತರಿಗೆ, ನಾಗರಿಕರಿಗೆ ಸೂಚಿಸಿದ್ದಾರೆ. ವಿಫಲ ಮತ್ತು ನಿರೂಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸುವ ಕೆಲಸ ಕೇವಲ ಅಧಿಕಾರಿಗಳಿಂದ ಮಾತ್ರ ಎಂದು ರೈತರು ಮತ್ತು ನಾಗರೀಕರು ಭಾವಿಸಬಾರದು. ತಮ್ಮೂರಿನ ಕಂದಮ್ಮಗಳ ಜೀವರಕ್ಷಣೆಗೋಸ್ಕರಾದರೂ ನಮ್ಮೊಂದಿಗೆ ಎಲ್ಲ ರೈತರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕೆಂದು ಹೇಳಿದರಲ್ಲದೇ ಬೋರವೆಲ್ ಕೊರೆಸುವವರು ಕಡ್ಡಾಯವಾಗಿ ತಮ್ಮ ಗ್ರಾಮದ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದುಕೊಂಡು ಈ ಕಾರ್ಯ ಮಾಡಬೇಕು. ಒಂದು ವೇಳೆ ಅನುಮತಿ ಇಲ್ಲದೇ ಬೋರವೆಲ್ ಕೊರೆಯುವ ವಾಹನ ಮಾಲೀಕರ ಮತ್ತು ಕೊರೆಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.