ಗೋಕಾಕ:ವರದಕ್ಷಣೆ ಕಿರುಕುಳ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು : ಪತಿ ಸಚಿನ್ ಅಂದರ್
ವರದಕ್ಷಣೆ ಕಿರುಕುಳ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು : ಪತಿ ಸಚಿನ್ ಅಂದರ್
ಗೋಕಾಕ ಜ 10: ವರದಕ್ಷಣೆ ಕಿರುಕುಳ ತಾಳಲಾರದೆ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ನಗರದ ಹೊಸಪೇಠ ಓಣಿಯಲ್ಲಿ ನಡೆದಿದೆ
ವಿದ್ಯಾ ಸಚಿನ್ ಶೀರಾಳಕರ (32) ನೇಣಿಗೆ ಶರಣಾದ ದುರ್ಧೈವಿಯಾಗಿದ್ದಾಳೆ
ಕಳೆದ ಹಲವಃ ದಿನಗಳಿಂದ ಮೃತಳ ಗಂಡ ಸಚಿನ್ ಶೀರಾಳಕರ , ಅತ್ತೆ ಗೀತಾಬಾಯಿ ಶೀರಾಳಕರ ಮತ್ತು ಮೈದುನ ಪಾಂಡು ಶೀರಾಳಕರ ಅವರು ವಿದ್ಯಾಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ ಹಣ ತಗೆದುಕೊಂಡು ಬರುವಂತೆ ಪೀಡಿಸುತ್ತಿದ್ದರೆಂದು ಮೃತ ವಿದ್ಯಾಳ ತಂದೆ ಸೂರ್ಯಕಾಂತ ನಾರಾಯಣ ಹಬೀಬ (ಪಟೇಗಾರ) ಅವರು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ಕಲಂ 498(ಎ) 306 ಸಹಕಲಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಪೈಕಿ ಮೃತಳ ಗಂಡ ಸಚಿನ್ ಶೀರಾಳಕರ ಎಂಬುವವನನ್ನು ಬಂಧಿಸಿದ್ದಾರೆ