ಗೋಕಾಕ:ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಕನಕ ಜ್ಯೋತಿ ಸಂಚಾರ : ಡಾ. ರಾಜೇಂದ್ರ ಸಣ್ಣಕ್ಕಿ
ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಕನಕ ಜ್ಯೋತಿ ಸಂಚಾರ : ಡಾ. ರಾಜೇಂದ್ರ ಸಣ್ಣಕ್ಕಿ
ಗೋಕಾಕ ಜ 11: ಶ್ರೀ ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕನಕ ಜ್ಯೋತಿ ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಸಂಚರಿಸಲಿದ್ದು ಭವ್ಯ ಸ್ವಾಗತ ನೀಡಲಾಗುವದೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ತಿಳಿಸಿದರು.
ಗುರುವಾರದಂದು ನಗರದ ಶ್ರೀ ಬೀರೇಶ್ವರ ಸಮುದಾಯ ಭವನದಲ್ಲಿ ರಜತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಫೇಬ್ರುವರಿ 8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ಬೆಳ್ಳೊಡಿಯಲ್ಲಿ ಶ್ರೀ ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವ ಹಾಗೂ ತರಬೇತಿ ಕೇಂದ್ರ ಕಟ್ಟಡದ ಲೋಕಾರ್ಪಣೆ ನಡೆಯಲ್ಲಿದ್ದು ಭವ್ಯ ಸಮಾರಂಭಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕನಕ ಜ್ಯೋತಿ ಜ.23 ರಂದು ಮುಂಜಾನೆ 10 ಗಂಟೆಗೆ ಬೆಳಗಾವಿ ಜಿಲ್ಲೆಯ ಅಥಣಿ, 2 ಗಂಟೆಗೆ ರಾಯಬಾಗ, 5 ಗಂಟೆಗೆ ಚಿಕ್ಕೋಡಿ, ಜ.24 ರಂದು 10 ಗಂಟೆಗೆ ಹುಕ್ಕೇರಿ, 3 ಗಂಟೆಗೆ ಗೋಕಾಕ. ಆ.25 ರಂದು 10 ಗಂಟೆಗೆ ರಾಮದುರ್ಗ, 2 ಗಂಟೆಗೆ ಸವದತ್ತಿ, 5 ಗಂಟೆಗೆ ಬೈಲಹೊಂಗಲ, ಜ.26 ರಂದು 10 ಬೆಳಗಾವಿ, 3 ಗಂಟೆಗೆ ಖಾನಾಪೂರ ಮಾರ್ಗವಾಗಿ ಸಂಚರಿಸಲಿದ್ದು ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜ್ಯೋತಿಯನ್ನು ಸ್ವಾಗತಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಎಸ್.ಎಫ್.ಪೂಜೇರಿ, ತಾಲೂಕಾಧ್ಯಕ್ಷ ಸಿದ್ದಲಿಂಗ ದಳವಾಯಿ, ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ, ಮುಖಂಡರಾದ ಸಿದ್ದಲಿಂಗಪ್ಪ ಕಂಬಳಿ, ಹಣಮಂತ ಅಳಗುಂಡಿ, ಸಂತೋಷ ಕಟ್ಟಿಕಾರ, ಮಾರುತಿ ಜಿಂಗಿ ಸೇರಿದಂತೆ ಅನೇಕರು ಇದ್ದರು.