ಘಟಪ್ರಭಾ:ಅರಭಾವಿ ಗ್ರಾಮದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ
ಅರಭಾವಿ ಗ್ರಾಮದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ
ಘಟಪ್ರಭಾ ಜ 15 : ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನುಭಾವ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಪರುಶರಾಮ ಕಲಕುಟಗಿ ಹೇಳಿದರು.
ಅವರು ಸಮೀಪದ ಅರಭಾವಿ ಗ್ರಾಮದಲ್ಲಿ ಸೋಮವಾರದಂದು ಭೋವಿ (ವಡ್ಡರ) ಸಮಾಜದ ಆಶ್ರಯದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ನಿಮಿತ್ಯ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಮನುಷ್ಯನು ಶೃದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಕಾಯಕ ಮಾಡಿದರೆ ಜೀವನ ಪಾವನಮಯವಾಗುತ್ತದೆ. ಅಂದಿನ ಮಹಾನುಭಾವರು ಕಾಯಕದಲ್ಲಿ ಶೃದ್ಧೆ, ನಿಷ್ಠೆಯಿಂದ ನಡೆದವರು. ಸಮಾಜವನ್ನು ಸಂಘಟಿಸಿ ಪ್ರತಿಯೊಬ್ಬರನ್ನು ಶಿಕ್ಷಿತರನ್ನಾಗಿ ಮಾಡುವದರ ಜೊತೆಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದರೆ ಸಮಾಜ ಅಭಿವೃದ್ದಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಬಾಳಬೇಕು. ಭೋವಿ ವಡ್ಡರ ಸಮಾಜದವರು ತಮ್ಮ ಮಕ್ಕಳಿಗೆ ಒಳ್ಳೇ ವಿದ್ಯಾಭ್ಯಾಸ ಕೊಡಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬರುವಂತೆ ಮಾಡುವದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ .ಕಲ್ಲೋಳೆಪ್ಪಾ ಗಾಡಿವಡ್ಡರ , ಶೆಟ್ಟೆಪಾ ಗಾಡಿವಡ್ಡರ , ಭರಮು ಗಾಡಿವಡ್ಡರ, ಗೋವಿಂದ ಗಾಡಿವಡ್ಡರ, ಅನಿಲ ಜಮಖಂಡಿ, ಮೋಹನ ಬಂಡಿವಡ್ಡರ, ಹಣಮಂತ ಗಾಡಿವಡ್ಡರ, ಆನಂದ ಗಾಡಿವಡ್ಡರ ಸೇರಿದಂತೆ ಭೋವಿ (ವಡ್ಡರ) ಸಮಾಜದ ಮುಖಂಡರು ಉಪಸ್ಥಿತರಿದ್ದರು.