ಗೋಕಾಕ:ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 26 ರಸ್ತೆಗಳ ಅಭಿವೃದ್ಧಿಗೆ 75 ಲಕ್ಷ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ
ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 26 ರಸ್ತೆಗಳ ಅಭಿವೃದ್ಧಿಗೆ 75 ಲಕ್ಷ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ
ಗೋಕಾಕ ಜ 16: ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಅರಭಾವಿ ಮತಕ್ಷೇತ್ರದಲ್ಲಿ ಒಟ್ಟು 26 ರಸ್ತೆಗಳ ಅಭಿವೃದ್ಧಿಗೆ 75 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ಇಲ್ಲಿಗೆ ಸಮೀಪದ ಮೆಳವಂಕಿ ಗ್ರಾಮದ ಬಸವನಗರ ತೋಟದ ಸೀಮೆ ಲಕ್ಷ್ಮೀದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಮೆಳವಂಕಿ ಗೌಡನ ಕ್ರಾಸದಿಂದ ಬಸವನಗರ ತೋಟದ ರಸ್ತೆ ನಿರ್ಮಾಣ ಹಾಗೂ ಚಿಗಡೊಳ್ಳಿ ಕೂಡು ರಸ್ತೆಯಿಂದ ಮೆಳವಂಕಿ ಸಂತಿ ಹಳ್ಳದವರೆಗೆ ತೋಟದ ರಸ್ತೆ ನಿರ್ಮಾಣ ಕಾಮಗಾರಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಸೇರಿವೆ. ಮೆಳವಂಕಿ, ಹಡಗಿನಾಳ, ಚಿಗಡೊಳ್ಳಿ, ಕಲಾರಕೊಪ್ಪ ಹಾಗೂ ಉದಗಟ್ಟಿ ಕೂಡುವ ಮುಖ್ಯ ರಸ್ತೆಗಳನ್ನು ಮಾರ್ಚ ತಿಂಗಳೊಳಗೆ ಅಭಿವೃದ್ಧಿಪಡಿಸುವ ಭರವಸೆ ನೀಡಿದರು.
ಭಾರತೀಯ ಸಂಸ್ಕøತಿ, ಇತಿಹಾಸ ವೈವಿಧ್ಯಮಯದಿಂದ ಕೂಡಿದೆ. ಅನೇಕಾನೇಕ ಧರ್ಮಿಯರು ತಮ್ಮ ಮೂಲ ಆಚಾರ-ವಿಚಾರ ಹಾಗೂ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿರುವುದರಿಂದ ನಮ್ಮ ದೇಶದಲ್ಲಿ ಎಲ್ಲರೂ ಏಕತೆಯಿಂದ ಸಮಾನಮನಸ್ಕರಾಗಿ ಬಾಳಿ ಬದುಕುತ್ತಿದ್ದಾರೆ. ಎಲ್ಲ ಸಮಾಜಗಳ ಬಾಂಧವರು ಸೌಹಾರ್ದಯುತವಾಗಿ ಸಹೋದರತ್ವ ಭಾವನೆಯಿಂದ ನಡೆಯುತ್ತಿರುವುದು ದೇಶವು ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾನತಾಡಿ, ಮೆಳವಂಕಿ ಜಿಪಂ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಮಂಡಳ ಪಂಚಾಯತ ಮಾಜಿ ಪ್ರಧಾನ ಮಹಾದೇವಪ್ಪ ಪತ್ತಾರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಈರಪ್ಪ ಬೀರನಗಡ್ಡಿ, ಭೀಮಶೆಪ್ಪ ಚಿಪ್ಪಲಕಟ್ಟಿ, ಸತ್ತೆಪ್ಪ ಬಬಲಿ, ರಾಯಪ್ಪ ಪೂಜೇರಿ, ಭೀಮಶೆಪ್ಪ ಹಡಗಿನಾಳ, ಮಹಾದೇವ ಕರಿಗಾರ, ಕಾಮಶೆಪ್ಪ ಕಿತ್ತೂರ, ನಾಗಪ್ಪ ಮಂಗಿ, ದೊಡ್ಡಪ್ಪ ಕಾಪಸಿ, ಈರಪ್ಪ ಕಾಪಸಿ, ಅಲ್ಲಪ್ಪ ಕರಿಗಾರ, ಲಕ್ಷ್ಮಣ ಕರಿಗಾರ, ನಿಂಗಪ್ಪ ಕಾಪಸಿ, ಯಲ್ಲಪ್ಪ ಕಾಪಸಿ, ಪಾಂಡುರಂಗ ಕರಿಗಾರ, ಈರಬಸು ವನಕಿ, ಭೀಮಶೆಪ್ಪ ಕಾಪಸಿ, ಮಲ್ಲಪ್ಪ ಕಾಪಸಿ, ಬಾಳಪ್ಪ ಕಾಪಸಿ, ಪುಂಡಲೀಕ ಬೀರನಗಡ್ಡಿ, ಕೆಂಪಣ್ಣಾ ಕಾಪಸಿ, ಬಸು ಕಾಪಸಿ, ರಮೇಶ ಬೀರನಗಡ್ಡಿ, ಉಪಸ್ಥಿತರಿದ್ದರು.ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮೆಳವಂಕಿ ಬಸವನಗರ ಸೀಮೆ ಲಕ್ಷ್ಮೀದೇವಿ ಜಾತ್ರೆಯಲ್ಲಿ ಗಣ್ಯರು ಸತ್ಕರಿಸುತ್ತಿರುವುದು.