RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ಶರ್ಧೆ : ಭಾವಗೀತೆ ಯಲ್ಲಿ ಶ್ರೇಯಾ ಹಂದಿಗೋಳ , ಜಾನಪದ ನೃತ್ಯದಲ್ಲಿ ಮಯೂರ ಶಾಲಾ ತಂಡ ಪ್ರಥಮ

ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ಶರ್ಧೆ : ಭಾವಗೀತೆ ಯಲ್ಲಿ ಶ್ರೇಯಾ ಹಂದಿಗೋಳ , ಜಾನಪದ ನೃತ್ಯದಲ್ಲಿ ಮಯೂರ ಶಾಲಾ ತಂಡ ಪ್ರಥಮ 

17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ಶರ್ಧೆ : ಭಾವಗೀತೆ ಯಲ್ಲಿ ಶ್ರೇಯಾ ಹಂದಿಗೋಳ , ಜಾನಪದ ನೃತ್ಯದಲ್ಲಿ ಮಯೂರ ಶಾಲಾ ತಂಡ ಪ್ರಥಮ
ಗೋಕಾಕ ಜ 19 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ರಂಗ ಸಜ್ಜಿಕೆಯಲ್ಲಿ 17ನೇ ಸತೀಶ ಶುಗರ್ಸ್ ಅವಾಡ್ರ್ಸ್‍ನ ಗುರುವಾರದಂದು ನಡೆದ ಅಂತಿಮ ಹಂತದ ಸಾಂಸ್ಕಂತಿಕ ಸ್ಪರ್ಧೆಯಲ್ಲಿ ಜಾನಪದ ಗಾಯನ , ಭಾವಗೀತೆ , ಸೋಲೋ ಡಾನ್ಸ್ , ಜಾನಪದ ನೃತ್ಯ ಸ್ವರ್ಧೆಗಳು ಅತ್ಯಂತ ರೋಚಕತೆಯಿಂದ ಜರುಗಿದವು ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಗೋಕಾಕನ ಜೆಎಸ್‍ಎಸ್ ಪಿಯು ಕಾಲೇಜಿನ ಶ್ರೇಯಾ ಹಂದಿಗೋಳ ಪ್ರಥಮ ಸ್ಥಾನ ಪಡೆದರೆ ಪ್ರಾಥಮಿಕ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಗೋಕಾಕನ ಮಯೂರ ಶಾಲೆ ತಂಡ ಪ್ರಥಮ ಸ್ಥಾನ ಪಡೆದು 30 ಸಾವಿರ ರೂಪಾಯಿಯ ಬೃಹತ್ ಮೊತ್ತದ ಬಹುಮಾನವನ್ನು ತಮ್ಮದಾಗಿಸಿಕೊಂಡರು .

ವಿವಿಧ ವಿಭಾಗಳಲ್ಲಿ ವಿಜೇತರ ವಿಧ್ಯಾರ್ಥಿಗಳ ಮಾಹಿತಿ

ಪ್ರೌಢಶಾಲಾ ವಿಭಾಗ, ಜಾನಪದ ಗಾಯನ ಸ್ಪರ್ಧೆ:-ಖಾನಟ್ಟಿಯ ಜಿಎಚ್‍ಎಸ್‍ನ ಐಶ್ವರ್ಯಾ ತಳವಾರ(ಪ್ರಥಮ) ಘಟಪ್ರಭಾ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಮಹಾಲಕ್ಷೀ ದೊಡಮನಿ(ದ್ವೀತಿಯ) ಮೂಡಲಗಿಯ ಕೆಎಚ್‍ಎಸ್‍ಜಿಎಸ್‍ಎಚ್‍ನ ಗೋಪಾಲ ದರೂರ(ತೃತೀಯ)

ಭಾಷಣ ಸ್ಪರ್ಧೆ: ಗೋಕಾಕನ ಜಿಪಿಯುಸಿಯ ಪುಷ್ಪಾ ಪಾಟೀಲ (ಪ್ರಥಮ) ಮೆಳವಂಕಿಯ ಜಿಎಚ್‍ಪಿಎಸ್‍ನ ಪವಿತ್ರಾ ಹತ್ತರವಾಟ(ದ್ವೀತಿಯ) ಬಳೋಬಾಳದ ಜಿಪಿಯುಸಿಯ ರಾಜೇಶ್ವರಿ ಶಿವನಪ್ಪಗೋಳ(ತೃತೀಯ)

ಹಾಸ್ಯಾಭಿನಯ ಸ್ಪರ್ಧೆ: ಗೋಕಾಕನ ಶಂಕರಲಿಂಗ ಪ್ರೌಢಶಾಲೆಯ ಪ್ರಜ್ವಲ್ ಕಡಲಗಿ ತಂಡ(ಪ್ರಥಮ) ಜಿಜಿಎಸ್‍ನ ಯಶೋಧಾ ಪಟೋಳಿ ತಂಡ (ದ್ವೀತಿಯ)ಎನ್‍ಎಸ್‍ಎಫ್ ವಸತಿ ಶಾಲೆಯ ಗಂಗಾಧರ ಮುತ್ತೆನ್ನವರ(ತೃತೀಯ) ಸ್ಥಾನ ಪಡೆದಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗ ಸೋಲೋ ಡ್ಯಾನ್ಸ್ ಸ್ಪರ್ಧೆ: ಗೋಕಾಕನ ಕೆಎಲ್‍ಇ ಶಾಲೆಯ ಹರೀಶ ಸೊಲಬನ್ನವರ(ಪ್ರಥಮ) ಶಪರ್ಢ ಮಿಷನ್ ಶಾಲೆಯ ಕೀರ್ತನಾ ಹುಣಶ್ಯಾಳ(ದ್ವಿತೀಯ) ಜಿಇಎಸ್‍ನ ಐಶ್ವರ್ಯಾ ಬಸನ್ನವರ(ತೃತೀಯ)
ಭಾಷಣ ಸ್ಪರ್ಧೆ: ಗೋಕಾಕನ ಮಯೂರ ಆಂಗ್ಲ ಮಾಧ್ಯಮ ಶಾಲೆಯ ರಕ್ಷೀತಾ ಮಿರ್ಜಿ (ಪ್ರಥಮ) ಶಪರ್ಢ ಮಿಷನ್ ಶಾಲೆಯ ಸ್ಪಪ್ನಾ ಮೊಯಿಲಿ(ದ್ವೀತಿಯ) ಮೆಳವಂಕಿಯ ಎಚ್‍ಪಿಎಸ್‍ನ ಸುಜಾತಾ ಹತ್ತರವಾಟ(ತೃತೀಯ)

ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ 17ನೇ ಸತೀಶ ಶುಗರ್ಸ್ ಅವಾಡ್ರ್ಸ್‍ನ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಗೋಕಾಕನ ಮಯೂರ ಶಾಲೆ ತಂಡ.

ಜಾನಪದ ನೃತ್ಯ ಸ್ಪರ್ಧೆ: ಗೋಕಾಕನ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಭೂಮಿಕಾ ತಂಡ(ಪ್ರಥಮ) ರಾಜಾಪೂರದ ಜ್ಞಾನಗಂಗೋತ್ರಿ ಶಾಲೆಯ ಸೋನಿಯಾ ಹಿರೇಕುಡಿ ತಂಡ(ದ್ವೀತಿಯ) ಕೊಳವಿಯ ಸರ್ಕಾರಿ ಶಾಲೆಯ ಸಾವಿತ್ರಿ ಕವಲಗಿ ತಂಡ (ತೃತೀಯ) ಸ್ಥಾನ ಪಡೆದಿದ್ದಾರೆ.

ಕಾಲೇಜು ವಿಭಾಗದ ಭಾವಗೀತೆ ಸ್ಪರ್ಧೆ: ಗೋಕಾಕನ ಜೆಎಸ್‍ಎಸ್ ಪಿಯು ಕಾಲೇಜಿನ ಶ್ರೇಯಾ ಹಂದಿಗೋಳ(ಪ್ರಥಮ) ಕಲ್ಲೋಳಿಯ ಶ್ರೀ ಬಸವೇಶ್ವರ ಪಿಯು ಕಾಲೇಜಿನ ಕಲ್ಮೇಶ ಉಜ್ಜನಕೊಪ್ಪ(ತೃತೀಯ) ಸ್ಥಾನ ಪಡೆದಿದ್ದಾರೆ.

ಜಾನಪದ ಗಾಯನ, ಭಾವಗೀತೆ, ಸೋಲೋ ಡ್ಯಾನ್ಸ, ಭಾಷಣ, ಹಾಸ್ಯಾಭಿನಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹತ್ತು ಸಾವಿರ ರೂಗಳು ದ್ವೀತಿಯ ಸ್ಥಾನ ಏಳು ಸಾವಿರ, ತೃತೀಯ ಐದು ಸಾವಿರ ರೂಗಳು, ಪ್ರೌಢ ಶಾಲಾ ಭಾಷಣ ಸ್ಫರ್ಧೆಯಲ್ಲಿ ಪ್ರಥಮ ಹದಿನೈದು ಸಾವಿರ, ದ್ವೀತಿಯ ಹದಿಮೂರು ಸಾವಿರ, ತೃತಿಯ ಹತ್ತು ಸಾವಿರ ಹಾಗೂ ಜಾನಪದ ನೃತ್ಯದಲ್ಲಿ ಪ್ರಥಮ ಮೂವತ್ತು ಸಾವಿರ, ದ್ವೀತಿಯ ಇಪ್ಪತ್ತು ಸಾವಿರ, ತೃತೀಯ ಸ್ಥಾನ ಹದಿನೈದು ಸಾವಿರ ರೂಗಳ ನಗದು ಹಾಗೂ ಟ್ರೋಫಿಗಳನ್ನು ನೀಡಲಾಯಿತು.

Related posts: