ಗೋಕಾಕ:17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ : ಸೌಮ್ಯಾ ಪಾಟೀಲ, ಸಿಂಧೂರ ಬಿರ್ಲಾಯಿ , ಸೋಹನ ಮೇಘನಾ ಹಾಗೂ ತಂಡ ಪ್ರಥಮ
17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ : ಸೌಮ್ಯಾ ಪಾಟೀಲ, ಸಿಂಧೂರ ಬಿರ್ಲಾಯಿ , ಸೋಹನ ಮೇಘನಾ ಹಾಗೂ ತಂಡ ಪ್ರಥಮ
ಗೋಕಾಕ ಜ 20 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ರಂಗ ಸಜ್ಜಿಕೆಯಲ್ಲಿ ನಡೆಯುತ್ತಿರುವ 17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ ಕಾರ್ಯಕ್ರಮದ ಅಂತಿಮ ಹಂತದ ಶುಕ್ರವಾರ 2ನೇ ದಿನದಂದು ನಡೆದ ಗಾಯನ, ಭಾವಗೀತೆ, ಸೋಲೋ ಡ್ಯಾನ್ಸ್, ಸಮೂಹ ನೃತ್ಯ, ಜಾನಪದ ಗಾಯನ ಸ್ಪರ್ಧೆಗಳು ಭಾರೀ ಜನಸಮೂಹದ ಮಧ್ಯ ಬೃಹತ್ ಮೊತ್ತದ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಪಿಗಳನ್ನು ಪಡೆದು ವಿದ್ಯಾರ್ಥಿಗಳು ಖುಷಿಪಟ್ಟು ಸಂಭ್ರಮಿಸಿದರು.
ಪ್ರಾಥಮಿಕ ಶಾಲಾ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಧುಪದಾಳ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಸೌಮ್ಯಾ ಪಾಟೀಲ ಪ್ರಥಮ ಸ್ಥಾನ ಪಡೆದರೆ, ಸಮೂಹ ನೃತ್ಯ ಮತ್ತು ಸೋಲೋ ಡ್ಯಾನ್ಸ್ ಸ್ಪರ್ಧೆಯಲ್ಲಿ ತುಕ್ಕಾನಟ್ಟಿ ಪ್ರೌಢಶಾಲೆಯ ಸಿಂಧೂರ ಬಿರ್ಲಾಯಿ ಮತ್ತು ಜಿ.ಪಿ.ಯು.ಸಿ ಗೋಕಾಕಿನ ಸೋಹನ ಮೇಘನಾ ಹಾಗೂ ತಂಡ ಪ್ರಥಮ ಸ್ಥಾನ ಪಡೆದು ಬೀಗಿದರು.
ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಯಾದಿ
ಭಾಷಣ ಸ್ಪರ್ಧೆ ಕಾಲೇಜು ವಿಭಾಗ :
ಬೆಳಗಾವಿಯ ಪ್ರವಿತಾ ಕಡೆವಾಡಿ (ಪ್ರಥಮ), ಸಂಕೇಶ್ವರದ ದರ್ಶನಾ ಕಠಾರೆ (ದ್ವಿತೀಯ), ಗೋಕಾಕಿನ ಸಾವಿತ್ರಿ ಸಣ್ಣಕ್ಕಿ (ತೃತೀಯ)
ಹಾಸ್ಯಾಭಿನಯ ಸ್ಪರ್ಧೆ ಕಾಲೇಜು ವಿಭಾಗ :
ಸರಕಾರಿ ಪ್ರಥಮ ದರ್ಜೆ ಕಾಲೇಜು ಗೋಕಾಕಿನ ಸಾಜೀದ ಹುದಲಿ ಮತ್ತು ತಂಡ (ಪ್ರಥಮ), ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜು ಗೋಕಾಕಿನ ಸೋಹೇಲ ದೇಸಾಯಿ ಮತ್ತು ತಂಡ (ದ್ವಿತೀಯ), ಗೋಕಾಕಿನ ಎಸ್.ಎಸ್.ಪಿ.ಯು ಕಾಲೇಜಿನ ವೆಂಕಟೇಶ ದೇಸಾಯಿ ಮತ್ತು ತಂಡ (ತೃತೀಯ)
ಸೋಲೋ ಡ್ಯಾನ್ಸ್ ಸ್ಪರ್ಧೆ : (ಪ್ರೌಢಶಾಲಾ ವಿಭಾಗ)
ನವಪ್ರಭಾ ಪ್ರಭಾ ಶಾಲೆ ತುಕ್ಕಾನಟ್ಟಿಯ ಸಿಂಧೂರ ಬಿರ್ಲಾಯಿ (ಪ್ರಥಮ), ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಲ್ಲೋಳಿಯ ಅಮೀತ (ದ್ವಿತೀಯ), ಜಿ.ಪಿ.ಯು.ಸಿ ಗೋಕಾಕಿನ ನಿರಂಜನ (ತೃತೀಯ).
ಸಮೂಹ ನೃತ್ಯ ಸ್ಪರ್ಧೆ (ಪ್ರಾಥಮಿಕ ಶಾಲಾ ವಿಭಾಗ)
ಜಿ.ಪಿ.ಯು.ಸಿ ಗೋಕಾಕಿನ ಸೋಹನ ಮೇಘನಾ ಹಾಗೂ ತಂಡ (ಪ್ರಥಮ), ಬಸವೇಶ್ವರ ಪ್ರಾಥಮಿಕ ಶಾಲೆ, ಬಿಲಕುಂದಿಯ ಓಂಕಾರ ಹಾಗೂ ತಂಡ (ದ್ವಿತೀಯ), ಕೊಳವಿಯ ಶಾರದಾ ಕ.ಮಾ.ಪ್ರಾ.ಶಾಲೆಯ ಅಶ್ವಿನಿ ಕೊಳದೂರ ಹಾಗೂ ತಂಡ (ತೃತೀಯ)
ಜಾನಪದ ಗಾಯನ ಸ್ಪರ್ಧೆ : (ಪ್ರಾಥಮಿಕ ಶಾಲಾ ವಿಭಾಗ )
ಪಟಗುಂದಿಯ ಶ್ರೀ ಪಟಗುಂದೇಶ್ವರ ಪ್ರಾ.ಶಾಲೆಯ ಬಾಳಗೌಡ ಪಾಟೀಲ (ಪ್ರಥಮ), ಎಮ್.ಡಿ.ಆರ್.ಎಸ್. ಮಲ್ಲಾಪೂರ ಪಿ.ಜಿಯ ವಿಠ್ಠಲ ಯರಗಟ್ಟಿ (ದ್ವಿತೀಯ), ಗೋಕಾಕಿನ ಶಂಕರಲಿಂಗ ಪ್ರಾ.ಶಾಲೆಯ ಶ್ವೇತಾ ಕಂಠಿ (ತೃತೀಯ)
ಗಾಯನ ಸ್ಪರ್ಧೆ (ಪ್ರಾಥಮಿಕ ಶಾಲಾ ವಿಭಾಗ)
ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಧುಪದಾಳನ ಸೌಮ್ಯಾ ಪಾಟೀಲ (ಪ್ರಥಮ), ಗೋಕಾಕ ಫಾಲ್ಸ್ ಫೋಬ್ರ್ಸ್‍ನ ಅಕ್ಯಾಡೆಮಿಯ ಆದಿತ್ಯಾ ವಣ್ಣೂರ (ದ್ವಿತೀಯ), ಪಟಗುಂದಿಯ ಬಾಳಗೌಡ ಪಾಟೀಲ (ತೃತೀಯ)
ಹಾಸ್ಯಾಭಿನಯ, ಸೋಲೋ ಡ್ಯಾನ್ಸ್, ಜಾನಪದ ಗಾಯನ, ಗಾಯನ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ 10,000/-ರೂ.ಗಳು, ದ್ವಿತೀಯ ಸ್ಥಾನ 7,000/-ರೂ.ಗಳು, ತೃತೀಯ ಸ್ಥಾನ 5,000/-ರೂ.ಗಳು, ಕಾಲೇಜು ವಿಭಾಗ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 15,000/-ರೂ.ಗಳು, ದ್ವಿತೀಯ ಸ್ಥಾನ 13,000/-ರೂ.ಗಳು, ತೃತೀಯ ಸ್ಥಾನ 10,000/-ರೂ.ಗಳು, ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಸಮೂಹನೃತ್ಯ ಸ್ಪರ್ಧೆಯಲ್ಲಿ ಪ್ರಥಮಸ್ಥಾನ 30,000/-ರೂ.ಗಳು, ದ್ವಿತೀಯ ಸ್ಥಾನ 20,000/-ರೂ.ಗಳು, ತೃತೀಯ ಸ್ಥಾನ 15,000/-ರೂ.ಗಳು ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಪಿಗಳನ್ನು ನೀಡಿ ಗೌರವಿಸಲಾಯಿತು.