RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಜಾತ್ಯಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು : ಶಾಸಕ ಬಾಲಚಂದ್ರ

ಗೋಕಾಕ:ಜಾತ್ಯಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು : ಶಾಸಕ ಬಾಲಚಂದ್ರ 

ಜಾತ್ಯಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು : ಶಾಸಕ ಬಾಲಚಂದ್ರ

ಗೋಕಾಕ ಜ 21 : ಜಾತ್ಯಾತೀತ, ಧರ್ಮಾತೀತ ಹಾಗೂ ಮತಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಭಾನುವಾರದಂದು ನಗರದ ತಾಪಂ ಸಭಾಗೃಹದಲ್ಲಿ ತಾಲೂಕಾಡಳಿತ ಹಾಗೂ ಗಂಗಾಮತಸ್ಥ ಸಮಾಜದ ಆಶ್ರಯದಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ 858ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾನುವಾರದಂದು ಇಲ್ಲಿಯ ತಾಪಂ ಸಭಾಗೃಹದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿರುವುದು.

ವಿಶ್ವ ಮಾನವರಾಗಿರುವ ಅಂಬಿಗರ ಚೌಡಯ್ಯನವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಇವರು ಬಿಟ್ಟುಹೋದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಪರಿಪಾಲನೆ ಮಾಡಿಕೊಂಡು ಸಮಾಜದಲ್ಲಿ ಆದರ್ಶ ಪ್ರಜೆಗಳಾಗಿ ಬದುಕುವಂತೆ ಅವರು ಹೇಳಿದರು.
ನಡೆ-ನುಡಿ ಶುದ್ಧವಾಗಿರಬೇಕೆಂದು ಹಂಬಲಿಸುವ ಚೌಡಯ್ಯ ಜೀವದಯೆಗೆ ಮಾನವೀಯ ಅನುಕಂಪಕ್ಕೆ ಮನ್ನಣೆ ನೀಡುತ್ತಾನೆ. ಮಾತು-ಕೃತಿಗಳಲ್ಲಿ ವ್ಯತ್ಯಾಸ ಕಂಡರೆ ಕೆಂಡಮಂಡಲಾಗುತ್ತಾನೆ. ಕಷ್ಟದಲ್ಲಿ ನಿಟ್ಟುಸಿರು ಬಿಡುವರಿಗೆ ಕೈಲಾದ ಸಹಾಯ ಮಾಡಲು ಅಂಗಲಾಚುವ ಇವರೊಬ್ಬ ಉತ್ತಮ ದಾರ್ಶನಿಕ ಪುರುಷರಾಗಿದ್ದರೆಂದು ಹೇಳಿದರು.
ಅಂಬಿಗರ ಸಮಾಜ ಇಂದು ದೇಶದೆಲ್ಲೆಡೆ ವ್ಯಾಪಿಸಿದೆ. ಕೆಲವು ರಾಜ್ಯಗಳಲ್ಲಿ ಈ ಸಮಾಜಕ್ಕೆ ಅನೇಕ ಹೆಸರುಗಳುಂಟು. ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿ ರಮಾನಾಥ ಕೋವಿಂದ ಅವರು ಈ ಸಮಾಜಕ್ಕೆ ಸೇರಿದವರೆಂಬುದು ಹೆಮ್ಮೆಯ ಸಂಗತಿ. ಈ ಸಮಾಜ ಇನ್ನೂ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂದೆ ಬರಬೇಕಿದೆ. ಸಮಾಜ ಬಾಂಧವರು ಶಿಕ್ಷಣಕ್ಕೆ ಒತ್ತು ನೀಡಿದರೆ ಸಮಾಜದಲ್ಲಿ ಗೌರವ ಸಾಧಿಸಲು ಸಾಧ್ಯವಿದೆ. ಮೀಸಲಾತಿ ಸಂಬಂಧ ನಡೆಯುತ್ತಿರುವ ಹೋರಾಟಕ್ಕೆ ಹಾಗೂ ಸಮಾಜಕ್ಕೆ ಸಿಗಬೇಕಾಗಿರುವ ನ್ಯಾಯಯುತ ಬೇಡಿಕೆಗಳಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಸಾನಿಧ್ಯವನ್ನು ಜಂಗಟಿಹಾಳದ ಚಂದ್ರಶೇಖರ ಮಹಾರಾಜರು ವಹಿಸಿದ್ದರು.
ಅತಿಥಿಗಳಾಗಿ ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ನಗರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಗಂಗಾಮತಸ್ಥ ಸಮಾಜದ ತಾಲೂಕಾ ಅಧ್ಯಕ್ಷ ಮುದಕಪ್ಪ ತಳವಾರ, ತಾಪಂ ಸದಸ್ಯ ಬಸು ಹುಕ್ಕೇರಿ, ಲಕ್ಷ್ಮಣ ಪಾಶ್ಚಾಪೂರ, ಸುಭಾಸ ಗಸ್ತಿ, ಸುರೇಶ ಕೋಳಿ, ತಾಪಂ ಇಓ ಎಫ್.ಜಿ. ಚಿನ್ನನ್ನವರ, ಗ್ರೇಡ್-2 ತಹಶೀಲ್ದಾರ ಕುಲಕರ್ಣಿ, ಲಕ್ಷ್ಮಣ ಯಮಕನಮರಡಿ, ತೋರಗಲ್, ಸಮಾಜದ ಮುಖಂಡರು ಉಪಸ್ಥಿತರಿದ್ದರು. ಉಪನ್ಯಾಸಕರಾಗಿ ಹೊನವಾಡದ ಪ್ರವಚನಕಾರ ಬಾಬುರಾವ್ ಆಗಮಿಸಿದ್ದರು.

Related posts: