ಮೂಡಲಗಿ:ಕಲಿಕೆಯಲ್ಲಿ ಪಾಲ್ಗೊಳ್ಳುಲು ಬ್ಯಾಗ ರಹಿತ ದಿನ ಪ್ರೇರೆಪಣೆಯಾಗಿದೆ: ಎ.ಸಿ ಗಂಗಾಧರ
ಕಲಿಕೆಯಲ್ಲಿ ಪಾಲ್ಗೊಳ್ಳುಲು ಬ್ಯಾಗ ರಹಿತ ದಿನ ಪ್ರೇರೆಪಣೆಯಾಗಿದೆ: ಎ.ಸಿ ಗಂಗಾಧರ
ಮೂಡಲಗಿ ಜ 22 :ರಾಜ್ಯಾಂದ್ಯಂತ ಮಕ್ಕಳಿಗೆ ಚಟುವಟಿಕೆಯಿಂದ ಯಾವುದೇ ಒತ್ತಡಗಳಿಲ್ಲದೆ ಉತ್ಸಾಹ ಭರಿತರಾಗಿ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಣೆ ನೀಡುವ ವಿನೂತನ ಕಾರ್ಯಕ್ರಮ ಬ್ಯಾಗ ರಹಿತ ದಿನದ ವಿಶೇಷವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಗಂಗಾಧರ ಹೇಳಿದರು.
ಅವರು ಸಮೀಪದ ಕಲ್ಲೋಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಬ್ಯಾಗ ರಹಿತ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಡಿದರು. ಇಂದಿನ ಒತ್ತಡದ ಕಲಿಕಾ ವಾತಾವರಣದಲ್ಲಿ ಮಗುವಿಗೆ ಸ್ವತಂತ್ರ ಕಲಿಕೆಯ ಅವಕಾಶಗಳು ಸಿಗುತ್ತಿಲ್ಲ. ಪ್ರತಿ ದಿನ ಮಗು ಭಾರವಾದ ಶಾಲಾ ಬ್ಯಾಗ ಹೊತ್ತು ಬೆನ್ನಿಗೂ ಭಾರ ಮನಸ್ಸಿಗೂ ಭಾರ ಮಾಡಿಕೊಂಡು ಒತ್ತಡದ ಕಲಿಕೆಯಲ್ಲಿ ಸಿಲುಕಿರುವದು ಮಗುವಿನ ವಿಕಸನಕ್ಕೆ ಮಾರಕವಾಗುವದು. ಪ್ರಸಕ್ತ ಸಾಲಿನಲ್ಲಿ ಇಲಾಖೆಯು ಮಕ್ಕಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ವಿಕಸನದ ದೃಷ್ಠಿಯಿಂದ ಪ್ರತಿ ಶನಿವಾರ ಬ್ಯಾಗ ರಹಿತವಾಗಿ ಚಟುವಟಿಕೆ ಸಹಿತ ಮುಕ್ತ ಮನಸ್ಸಿನಿಂದ ಕಲಿಕೆಯಲ್ಲಿ ಪಾಲ್ಗೊಳ್ಳುವದಾಗಿದೆ.
ಮೂಡಲಗಿ ವಲಯದಲ್ಲಿ ಎಲ್ಲ ಶಾಲೆಗಳಲ್ಲಿ ಈ ಅಭಿಯಾನ ಕೈಗೊಂಡಿದ್ದು, ಶಿಕ್ಷಕರು ಪಾಲಕರು ಚುನಾಯಿತ ಪ್ರತಿನಿಧಿಗಳು ಶಿಕ್ಷಣ ಪ್ರೇಮಿಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೋರಹೊಮ್ಮುವಲ್ಲಿ ಸಹಕಾರಿಯಾಗಬೇಕು. ಮಾನಸಿಕವಾಗಿ ದೈಹಿಕವಾಗಿ ತೊಂದರೆಯಾಗುವ ಕಲಿಕಾ ಮಾರ್ಗಗಳನ್ನು ಬಿಟ್ಟು ಮಗುವಿಗೆ ಆಸಕ್ತಿದಾಯಕ ಕಲಿಕಾ ವಾತಾವರಣ ನಿರ್ಮಾಣ ಮಾಡುವ ಕಾರ್ಯ ನಮ್ಮದಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ರಸ ಪ್ರಶ್ನೆ, ಪ್ರಬಂಧ, ಭಾಷಣ, ಸಂಬಾಷಣೆ, ಕಥೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು ನಡೆದವು.
ಸಮಾರಂಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಕಸ್ತೂರಿ ಕುರಬೇಟ,ಮುಖ್ಯಾಧಿಕಾರಿ ಜೆ ಅರುಣಕುಮಾರ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ದುಂಡಪ್ಪ ಕುರಬೇಟ, ಶಿವಾನಂದ ಹೆಬ್ಬಾಳ, ಸಿ.ಆರ್.ಪಿ ಎಸ್.ಬಿ ಕುಂಬಾರ, ಎಸ್.ಎಮ್ ಲೋಕನ್ನವರ, ಪ್ರಧಾನ ಗುರುಗಳಾದ ಸಿ.ಎಲ್ ಬಡಿಗೇರ, ನಾಯ್ಕೋಡಿ ಹಾಗೂ ಶಿಕ್ಷಕರು, ಎಸ್.ಡಿ.ಎಮ್.ಸಿ ಸದಸ್ಯರು, ಪಾಲಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಗೋಪಾಲ ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಎಮ್.ಎಸ್ ಕುಲ್ಲೋಳಿ ಸ್ವಾಗತಿಸಿ, ಎಸ್.ಆಯ್ ಉಪ್ಪಾರ ವಂದಿಸಿದರು.