ಬೆಳಗಾವಿ:ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಹಾಲುಮತ ಮಹಾಸಭಾ ಸದಸ್ಯರ ಆಗ್ರಹ
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಹಾಲುಮತ ಮಹಾಸಭಾ ಸದಸ್ಯರ ಆಗ್ರಹ
ಬೆಳಗಾವಿ ಜ 24 : ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಮತ್ತು ಜನವರಿ 26, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಬಲಿದಾನ ದಿವಸವನ್ನೂ ಸರ್ಕಾರದಿಂದ ಆಚರಣೆ ಮಾಡವಂತೆ ಆಗ್ರಹಿಸಿ ಹಾಲುಮತ ಮಹಾಸಭಾದ ಸದಸ್ಯರು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಿದರು
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬಾರಿ ಬ್ರಿಟೀಷರಿಗೆ ಸೋಲಿನ ರುಚಿಯನ್ನು ತೋರಿಸಿದ ಅಪ್ಪಟ ದೇಶಭಕ್ತ, ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರನ್ನು ಬ್ರಿಟಿಷರು ನೇಣಿಗೆ ಹಾಕಿದ ದಿನ ಜನವರಿ 26, ಅಂದು ಭಾರತ ಗಣರಾಜ್ಯವಾದ ದಿನ. ಜನವರಿ 26ರಂದು ರಾಯಣ್ಣನ ಬಲಿದಾನ ದಿವಸವನ್ನು ಸರ್ಕಾರಿ ಆಚರಣೆ ಮಾಡಿ ಹುತಾತ್ಮ ರಾಯಣ್ಣರಿಗೆ ಗೌರವ ಸಲ್ಲಿಸಬೇಕು ಮತ್ತು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅವರ ಹೆಸರು ವಿಟ್ಟಂತೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವೀರ ಸಂಗೋಳ್ಳಿ ರಾಯಣ್ಣನ ಹೆಸರು ಇಟ್ಟು ಹುತಾತ್ಮ ರಾಯಣ್ಣನಿಗೆ ಗೌರವ ನೀಡಬೇಕೆಂದು ಮಹಾಸಭಾದ ಕಾರ್ಯರ್ತರು ಮನವಿಯಲ್ಲಿ ಆಗ್ರಹಿಸಿದ್ದಾರೆ
ಒಂದು ವೇಳೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣನ ಹೆಸರು ನಾಮಕರಣ ಮಾಡದಿದ್ದಲ್ಲಿ ನಾಡಿನಲ್ಲಿ ಹಾಲುಮತ ಮಹಾಸಭಾ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಸಂಚಾಲಕ ಮಾರುತಿ ಮರಡಿ ಮೌರ್ಯ , ರಾಜ್ಯ ಖಜಾಂಚಿ ಶಂಕರ ಹೆಗಡೆ ,ಲಕ್ಷ್ಮಣ ಲವಟೆ, ಯಲ್ಲಪ್ಪಾ ಚಂದರಗಿ, ಬಸಪ್ಪಾ ವ್ಯಾಪಾರಿ, ಈರಪ್ಪ ಹೆಗಡೆ, ಮಹೇಶ ಚಂದರಗಿ ಸಂಘಟೆನೆ ಪ್ರಮುಖರು ಹಾಜರಿದರು.