RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಮಹಾದಾಯಿ” ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗೋಕಾಕದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ

ಗೋಕಾಕ:ಮಹಾದಾಯಿ” ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗೋಕಾಕದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ 

ಮಹಾದಾಯಿ” ಕಳಸಾ ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗೋಕಾಕದಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ
ಗೋಕಾಕ ಜ 25: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯದ್ಯಂತ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೋಕಾಕದ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಬೀದಿಗಿಳಿದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು
ಗುರುವಾರ ಮುಜಾಂನೆ ನಗರದ ಹೊರ ವಲಯ ನಾಕಾ ನಂ 1 ರಲ್ಲಿ ಸೇರಿದ ಕರವೇ ಕಾರ್ಯಕರ್ತರು ಈ ಯೋಜನೆ ಅನುಷ್ಠಾನಕ್ಕೆ ಮಲತಾಯಿ ದೋರಣೆ ತೊರುತ್ತಿರುವ ಕೇಂದ್ರ ಸರಕಾರ ಮತ್ತು ರಾಜ್ಯಗಳ ಸರಕಾರಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿ ಸುಮಾರು ಒಂದು ಘಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಯಿಸಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಈ ಕೂಡಲೇ ಮಹದಾಯಿ ಯೋಜನೆಯನ್ನು ಅನುಷ್ಠಾನ ಗೋಳಿಸಲು ಸೂಕ್ತ ಕ್ರಮ ಕೈಗೋಳಬೇಕೆಂದು ಆಗ್ರಹಿಸಿ ದರು

ಕರವೇ ಅಧ್ಯಕ್ಷ ಕಿರಣ ಢಮಾಮಗರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ರೈತ ಸಂಘಟನೆಯ ನಾಯಕರು , ಕಾರ್ಯಕರ್ತರು ಉಪಸ್ಥಿತರಿದ್ದರು

ಮೊದಲು ಬಂದ್ ಕರೆಗೆ ಬೆಂಬಲ ವಿಲ್ಲ ವೆಂದು ಹೇಳಿದ ಕರವೇ ಪ್ರವಿಣ ಶೆಟ್ಟಿ ಬಣದ ಕಾರ್ಯಕರ್ತರು ತದ ನಂತರ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು . ಆದರೆ ಕರವೇ ನಾರಾಯಣಗೌಡ ಬಣ , ಕರವೇ ಸ್ವಾಭಿಮಾನಿ ಬಣ , ಸೇರಿದಂತೆ ಉಳಿದ ಕನ್ನಡಪರ ಸಂಘಟನೆಗಳು ಹೋರಾಟದಿಂದ ದೂರ ಉಳಿದಿದ್ದವು

Related posts: