ಘಟಪ್ರಭಾ:2.70 ಕೋಟಿ ರೂ.ಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಮಗಾರಿಗೆ ಚಾಲನೆ
2.70 ಕೋಟಿ ರೂ.ಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಮಗಾರಿಗೆ ಚಾಲನೆ
ಘಟಪ್ರಭಾ ಜ 28 : ಇಲ್ಲಿಯ ಮಲ್ಲಾಪೂರ ಪಿ.ಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂದಾಜು ಮೊತ್ತ 2.70 ಕೋಟಿ ರೂ.ಗಳ ಹೆಚ್ಚುವರಿ ಕಾಮಗಾರಿಯ ಅಡಿಗಲ್ಲು ಸಮಾರಂಭವನ್ನು ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಶನಿವಾರದಂದು ನೆರವೇರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಮ್.ದಳವಾಯಿ, ಸುಭಾಸ ಹುಕ್ಕೇರಿ, ಪ.ಪಂ ಅಧ್ಯಕ್ಷೆ ಸುಜಾತಾ ಪೂಜೇರಿ, ಗ್ರಾ.ಪಂ ಅಧ್ಯಕ್ಷ ಎಸ್.ಐ ಬೆನವಾಡೆ, ತಾ.ಪಂ ಸದಸ್ಯ ಲಗಮನ್ನಾ ನಾಗನ್ನವರ, ಗ್ರಾಮಸ್ಥರಾದ ಮಡಿವಾಳಪ್ಪ ಮುಚಳಂಬಿ, ಜಯಶೀಲ ಶೇಟ್ಟಿ, ರಮೇಶ ತುಕ್ಕಾನಟ್ಟಿ ಸುಧೀರ ಜೋಡಟ್ಟಿ, ಗುರಸಿದ್ದ ಅಂಗಡಿ, ಜಾಕೀರ ಬಾಡಕರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಸುರೇಶ ಪೂಜಾರಿ, ಶಿವಪುತ್ರ ಕುಗನೂರ, ನಾಗರಾಜ ಜಂಬ್ರಿ, ಎಮ್.ಡಿ.ತಟಗಾರ, ಭೀರಪ್ಪ ಡಬಾಜ, ಮಾರುತಿ ವಿಜಯನಗರ, ವಿಠ್ಠಲ ಭಂಗಿ, ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ಕೋಳಿ, ಇಮ್ರಾನ್ ಬಟಕುರ್ಕಿ, ನಾಗರಾಜ ಚಚಡಿ, ಈರಣ್ಣ ಕಲಕುಟಗಿ, ರಾಮಣ್ಣ ನಾಯಿಕ, ಮಾರುತಿ ಹುಕ್ಕೇರಿ, ಪ್ರವೀಣ ಮಟಗಾರ, ಪ,ಪಂ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಶಿಂದಿಕುರಬೇಟ, ಪಾಮಲದಿನ್ನಿ, ಧುಪದಾಳ ಗ್ರಾಮಸ್ಥರು ಸೇರಿದಂತೆ ಅನೇಕರು ಇದ್ದರು.