ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ
17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ
ಗೋಕಾಕ ಫೆ 2: ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸತೀಶ ಜಾರಕಿಹೊಳಿ ಫೌಂಡೆಶನ್ ಪ್ರಾಯೋಜಕತ್ವದ 17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ದಿ.01 ರಂದು ನಡೆದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳ ವಿವರ.
ಪ್ರೌಢ ಶಾಲಾ ವಿಭಾಗದ ಬಾಲಕರ ವಿಭಾಗ :
ಕಬಡ್ಡಿ : ಹಾಲಪ್ಪ ದೇಸಾಯಿ ಹಾಗು ತಂಡ( ಜಿಎಚ್ ಎಸ್ ಮೇಕಳಿ ರಾಯಬಾಗ) ಪ್ರಥಮ, ರವಿ ಭಜಂತ್ರಿ ಹಾಗೂ ತಂಡ (ಜಿ ಎಚ್ ಎಸ್ ಕಟಕೋಳ ರಾಮದುರ್ಗ) ದ್ವಿತೀಯ, ಸಾಗರ ಪಾಟೀಲ ಹಾಗೂ ತಂಡ ( ಎಸ್ ಎ ಆಂಗ್ಲ ಮಾಧ್ಯಮ ಶಾಲೆ ಅಂಕಲಗಿ) ತೃತೀಯ.
ಖೋಖೋ : ಸುನೀಲ ಹಳ್ಳೂರ ಹಾಗೂ ತಂಡ (ಜಿಎಚ್‍ಎಸ್ ಮಾಲದಿನ್ನಿ) ಪ್ರಥಮ, ಅಜಯ ಭದ್ರಶೆಟ್ಟಿ ಹಾಗೂ ತಂಡ ಮಹಾಲಿಂಗೇಶ್ವರ ಎಸ್.ಎಸ್. ನಾಗನೂರ) ದ್ವಿತೀಯ, ಸಂಪತ ಯರಗಟ್ಟಿ (ಕ್ರೀಡಾ ಶಾಲೆ ರಾಮದುರ್ಗ) ತೃತೀಯ.
ವ್ಹಾಲಿಬಾಲ್ : ಅಜೀತ ಜನಗೊಂಡ ಹಾಗೂ ತಂಡ (ಕ್ರೀಡಾಶಾಲೆ ಚಂದರಗಿ) ಪ್ರಥಮ, ಯಾಸೀನ ಹಕ್ಕಿ ಹಾಗೂ ತಂಡ (ಎಡಿಎಚ್‍ಎಸ್ ಕೌಜಲಗಿ) ದ್ವಿತೀಯ, ಬಾಳೇಶ ಜಕಮತ್ತಿ (ಜಿಪಿಯುಸಿ ಗೋಕಾಕ ) ತೃತೀಯ.
ಪ್ರೌಢ ಶಾಲಾ ಬಾಲಕಿಯರ ವಿಭಾಗ :
ಕಬಡ್ಡಿ : ರಾಜೇಶ್ವರಿ ತಳಕೇರಿ ಮತ್ತು ತಂಡ (ಲೆ.ಆರ್.ಇ.ಎಸ್.ಪಿಯು ಐನಾಪೂರ) ಪ್ರಥಮ, ಪ್ರೀಯಾ ಶೇಗುಣಸಿ ಮತ್ತು ತಂಡ (ಸಿದ್ರಾಮೇಶ್ವರ ಎಚ್.ಎಸ್.ಮುಗಳಖೋಡ) ದ್ವಿತೀಯ, ಪ್ರಜಾಕ್ಮಾ ಕುಂಬಾರ ಮತ್ತು ತಂಡ ಕಾಡಸಿದ್ದೇಶ್ವರ ಪ್ರೌಢಶಾಲೆ ಬೆನ್ನಾಡಿ) ತೃತೀಯ
ಖೋಖೋ : ಮಾಳವ್ವ ಕೊಳವಿ ಹಾಗೂ ತಂಡ (ಜಿ.ಎಚ್.ಎಸ್ ಮಾಲದಿನ್ನಿ) ಪ್ರಥಮ, ಮಂಜುಳಾ ಕಂಬಾರ ಹಾಗೂ ತಂಡ (ಎಂಡಿಆರ್ ಎಸ್ ಕಟಕೋಳ) ದ್ವಿತೀಯ, ಗರಿಜಾ ಹೊರಟ್ಟಿ ಹಾಗೂ ತಂಡ (ಜಿ.ಎಚ್.ಎಸ್ ಸುಣಧೋಳಿ) ತೃತೀಯ.
ವ್ಹಾಲಿಬಾಲ್ : ಲಕ್ಷ್ಮೀ ಗುಡದಪ್ಪನವರ ಹಾಗೂ ತಂಡ (ಜಿಎಚ್‍ಎಸ್ ಮೈಲೂರ ಕಿತ್ತೂರ) ಪ್ರಥಮ, ಸೌಂದರ್ಯ ಮೆಳವಂಕಿ ಹಾಗೂ ತಂಡ (ಜಿ ಎಚ್ ಎಸ್ ಅಳಗವಾಡಿ ರಾಯಬಾಗ) ದ್ವಿತೀಯ, ಬಾಲಾಕ್ಷಿ ಹೆರೇಕರ ಹಾಗೂ ತಂಡ (ಜಿ ಎಚ್ ಎಸ್ ಮಂಗ್ಯಾನಕೊಪ್ಪ) ತೃತೀಯ.