ಗೋಕಾಕ:ಕ್ರೀಡಾಪಟುಗಳು ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿ : ಶಾಸಕ ಸತೀಶ
ಕ್ರೀಡಾಪಟುಗಳು ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿ : ಶಾಸಕ ಸತೀಶ
ಗೋಕಾಕ ಫೆ 3 : ಕ್ರೀಡಾಪಟುಗಳು ಹೆಚ್ಚಿನ ತರಬೇತಿ ಹಾಗೂ ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿರೆಂದು ಸತೀಶ ಶುಗರ್ಸ್ ಅವಾಡ್ರ್ಸನ ರೂವಾರಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವೀರಾಗ್ರಣಿ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಕ್ರೀಡಾಕ್ಷೇತ್ರದ ಅಭಿವೃದ್ದಿಗಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಈ ಕ್ರೀಡಾಕೂಟದ ಪ್ರೋತ್ಸಾಹದಿಂz ಕ್ರೀಡಾಪಟುಗಳು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಸಂತಸ ತಂದಿದೆ. ಇನ್ನೂ ಹೆಚ್ಚಿನ ಪರಿಶ್ರಮದೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಗೈದು ನಾಡಿನ ಕೀರ್ತಿಯನ್ನು ಹೆಚ್ಚಿಸಿರೆಂದು ಹೇಳಿದರು.
ಈ ಕ್ರೀಡಾಕೂಟದಲ್ಲಿ 5080 ಕ್ರೀಡಾಪಟುಗಳು ಭಾಗವಹಿಸಿದ್ದು 24ಲಕ್ಷ 54 ಸಾವಿರ ರೂ.ನಗದು ಹಾಗೂ 207 ಮೆಡಲ್ ಮತ್ತು 60 ಟ್ರೋಪಿಗಳನ್ನು ನೀಡಲಾಗಿದೆ. ಸಮಗ್ರವೀರಾಗ್ರಣಿ ಪ್ರಶಸ್ತಿ ವಿಜೇತರಿಗೆ ತಲಾ 50 ಸಾವಿರ ರೂ. ನಗದು ಹಾಗೂ ಟ್ರೋಪಿ ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಕ್ರೀಡಾಕೂಟದಲ್ಲಿ ಹಾರೂಗೇರಿಯ ಎಸ್ ವಿ ಎಸ್ ಪ್ರಾಥಮಿಕ ಶಾಲೆಯ ಕಿರಣ ಸಣ್ಣಕಿನವರ, ಚಂದರಗಿ ಕ್ರೀಡಾಶಾಲೆಯ ಸುನೀಲ ನಲವಡೆ ಹಾಗೂ ಹೂಗಾರದ ಹರಿ ವಿದ್ಯಾಲಯದ ಜ್ಯೋತಿ ಮಾನೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರು.
ಸಂಘಟಕರಾದ ಎಸ್.ಎ.ರಾಮಗಾನಟ್ಟಿ, ರಿಯಾಜ ಚೌಗಲಾ, ದೈಹಿಕ ಪರೀವೀಕ್ಷರಾದ ವಿಜಯಕುಮಾರ ಸೋಲೆಗಾವಿ, ಎಸ್.ಎ.ನಾಡಗೌಡರ, ಇಲಿಯಾಸ ಇನಾಮದಾರ, ಶಿವು ಪಾಟೀಲ , ಆರೀಪ್ ಪೀರಜಾದೆ ಸೇರಿದಂತೆ ಇತರರು ಇದ್ದರು.