RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ: ಮಾಜಿ ಸಚಿವ ಬಾಲಚಂದ್ರ

ಗೋಕಾಕ:ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ: ಮಾಜಿ ಸಚಿವ ಬಾಲಚಂದ್ರ 

ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ: ಮಾಜಿ ಸಚಿವ ಬಾಲಚಂದ್ರ

ಗೋಕಾಕ ಫೆ 3 : ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರ ರಾತ್ರಿ ಇಲ್ಲಿಯ ಶೂನ್ಯ ಸಂಪಾದನ ಮಠದಿಂದ ಜರುಗುತ್ತಿರುವ ಕಾಯಕಯೋಗಿ ಲಿಂ.ಬಸವ ಮಹಾಸ್ವಾಮಿಗಳ 13ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಶರಣ ಸಂಸ್ಕøತಿ ಉತ್ಸವ ಕಾರ್ಯಕ್ರಮದ ಮೂರನೇ ದಿನದ ಸೈನಿಕ ಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶಕ್ಕೆ ಸೈನಿಕರ ಹಾಗೂ ರೈತರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.
ರಾಷ್ಟ್ರದ ಬೆಳವಣಿಗೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದಾಗಿದೆ. ತಮ್ಮ ಜೀವದ ಹಂಗು ತೊರೆದು ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ದೇಶದ ಆಸ್ತಿಯಾಗಿರುವ ಸೈನಿಕರ ಬಗ್ಗೆ ಎಲ್ಲರೂ ಗೌರವಾಭಿಮಾನ ಬೆಳೆಸಿಕೊಳ್ಳುವಂತೆ ಹೇಳಿದರು.
ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವದಕ್ಕೋಸ್ಕರ ಮತ್ತು ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಅಮೇರಿಕಾದಂತಹ ಪ್ರಗತಿಶೀಲ ರಾಷ್ಟ್ರಗಳು ಸಣ್ಣ ಸಣ್ಣ ದೇಶಗಳಿಗೆ ಜಗಳ ಹಚ್ಚುವ ಕೆಲಸದಲ್ಲಿ ತೊಡಗುತ್ತಿವೆ. ಪಾಕಿಸ್ತಾನ ಹಾಗೂ ಚೀನಾ ದೇಶಕ್ಕಿಂತಲೂ ಅಮೇರಿಕಾ ಹೆಚ್ಚು ಆತಂಕಕಾರಿ ರಾಷ್ಟ್ರವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಭಾರತ ಪ್ರಪಂಚದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿ ಪ್ರಬಲ ರಾಷ್ಟ್ರಗಳಿಗೆ ಸೆಡ್ಡು ಹೊಡೆಯಲಿದೆ ಎಂದು ಹೇಳಿದರು.

ಇಲ್ಲಿಯ ಸಿಬಿವ್ಹಿಪಿ ಮಹಾವಿದ್ಯಾಲಯದ ಆವರಣದಲ್ಲಿ ಶೂನ್ಯ ಸಂಪಾದನ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶರಣ ಸಂಸ್ಕøತಿ ಉತ್ಸವದ ಮೂರನೇ ದಿನದ ಸೈನಿಕ ಗೋಷ್ಠಿ ಕಾರ್ಯಕ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು.

ತಾಯಿ-ತಂದೆಗೆ ಗೌರವ ನೀಡುವ ಮೂಲಕ ಹೆತ್ತವರನ್ನು ದೇವರಂತೆ ಪೂಜಿಸಬೇಕು. ಕಣ್ಣಿಗೆ ಕಾಣುವ ಮೊದಲ ದೇವರೇ ತಾಯಿ-ತಂದೆಯವರು. ಸೈನಿಕರಿಗೆ ಹಾಗೂ ರೈತರಿಗೆ ಗೌರವ ನೀಡುವ ಮೂಲಕ ನಮ್ಮ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೈನಿಕ ಗೋಷ್ಠಿ ಉದ್ಘಾಟಿಸಿದ ಮೇಜರ್ ಪಾಂಡಪ್ಪ ಅವರು ಮಾತನಾಡಿ, ದೇಶದ ಒಳಗಡೆಯೂ ದೇಶ ಪ್ರೇಮಿಯಾಗಿದ್ದ ಸಂಗೊಳ್ಳಿ ರಾಯಣ್ಣನಿಗೆ ಮೋಸ ಮಾಡಿದ ಮಲ್ಲಪ್ಪ ಶೆಟ್ಟಿಯಂತಹ ದೇಶ ದ್ರೋಹಿಗಳೂ ಇದ್ದಾರೆ. ಮೊದಲು ಗಡಿ ಕಾಯುವ ಸೈನಿಕನಿಗೆ ಗೌರವ ನೀಡುವುದನ್ನು ಎಲ್ಲರೂ ಕಲಿಯಬೇಕಿದೆ. ಇಂದಿಗೂ -50 ಡಿಗ್ರಿ ಸೆಲ್ಸಿಯಸ್‍ನಲ್ಲೂ ಸೈನಿಕರು ಹಿಮಪಾತದಲ್ಲಿ ದೇಶದ ರಕ್ಷಣೆಗಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಮಗೆ ಸರ್ಕಾರ ನೀಡುವ ಸಂಬಳಕ್ಕಿಂತ ಭಾರತ ಮಾತೆಯ ಸೇವೆ ಮಾಡುವುದು ಮುಖ್ಯ. ಪ್ರಾಣದ ಹಂಗು ತೊರೆದು ಕುಟುಂಬವನ್ನು ಲೆಕ್ಕಿಸದೇ ದೇಶದ ಹಿತಕ್ಕಾಗಿ ಸಾಯಲು ಸೈನಿಕರು ಸಿದ್ಧರಿದ್ದಾರೆ. ಹನಮಂತ ಕೊಪ್ಪದ ಅವರ ಸೇವೆ ನಮ್ಮಂತಹ ಸೈನಿಕರಿಗೆ ಮಾದರಿಯಾಗಿದ್ದಾರೆ.
ದೇಶಕ್ಕೆ ಸೈನಿಕರು, ರೈತರು ಎಷ್ಟು ಮುಖ್ಯವೋ ಹಾಗೆಯೇ ಸಮಾಜದ ಒಳತಿಗೆ ಸಾಧು-ಸಂತರ ಮಾರ್ಗದರ್ಶನ ಅಗತ್ಯವಾಗಿದೆ. ಉತ್ತಮ ಸಂಸ್ಕಾರವಂತರಾಗಿ ಬದುಕಬೇಕಿದೆ. ಪಾಶ್ಚಾತ್ಯ ವ್ಯಾಮೋಹವನ್ನು ತೊಲಗಿಸಿ ಅಪ್ಪಟ ಭಾರತೀಯ ಸಂಸ್ಕøತಿಗೆ ಒತ್ತು ನೀಡಿ ನಮ್ಮತನವನ್ನು ಪ್ರದರ್ಶಿಸಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೀರಮರಣ ಹೊಂದಿದ ಯೋಧರ ತಾಯಿಯವರಾದ ಬೆಟದೂರಿನ ಬಸವ್ವಾ ರಾಮಪ್ಪಾ ಕೊಪ್ಪದ ಮತ್ತು ನಬಾಪೂರದ ದುಂಡವ್ವಾ ಚನ್ನಪ್ಪ ಪಾಟೀಲ ಅವರಿಗೆ ಸ್ವಾಮೀಜಿಗಳಿಂದ ತುಲಾಭಾರ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಂಡರಗಿ-ಬೈಲೂರು ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಅತಿಥಿಗಳಾಗಿ ಖ್ಯಾತ ಎಲುಬು ಕೀಲು ತಜ್ಞ ಡಾ.ಎಂ.ಜಿ. ಉಮರಾಣಿ, ಈರಣ್ಣಗೌಡ ಹಾದಿಮನಿ, ಉಳವಪ್ಪ ಮಠದ, ರವಿಚಂದ್ರ ಮಾರಿಹಾಳ, ಬಸವರಾಜ ಪಾಟೀಲ, ಮಹಾಲಿಂಗ ಗುಣದಾಳಿ, ಮಲ್ಲಿಕಾರ್ಜುನ ಹೆಗ್ಗನ್ನವರ, ಮಲ್ಲಿಕಾರ್ಜುನ ಈಟಿ ಉಪಸ್ಥಿತರಿದ್ದರು.

Related posts: