RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಇತಿಹಾಸಕಾರರು ವಿಕೃತ ಸತ್ಯವನ್ನು ದೇಶದ ಜನರಿಗೆ ನೀಡುತ್ತಿದ್ದಾರೆ : ಶ್ರೀ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಜಿ

ಗೋಕಾಕ:ಇತಿಹಾಸಕಾರರು ವಿಕೃತ ಸತ್ಯವನ್ನು ದೇಶದ ಜನರಿಗೆ ನೀಡುತ್ತಿದ್ದಾರೆ : ಶ್ರೀ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಜಿ 

ಇತಿಹಾಸಕಾರರು ವಿಕೃತ ಸತ್ಯವನ್ನು ದೇಶದ ಜನರಿಗೆ ನೀಡುತ್ತಿದ್ದಾರೆ : ಶ್ರೀ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಜಿ

ಗೋಕಾಕ ಫೆ 4: ಇತಿಹಾಸಕಾರರು ಅರ್ಧ ಮತ್ತು ವಿಕೃತ ಸತ್ಯವನ್ನು ದೇಶದ ಜನರಿಗೆ ನೀಡುತ್ತಿದ್ದಾರೆ ಎಂದು ಶ್ರೀ ರಾಮಕೃಷ್ಣ ಆಶ್ರಮ ಗದಗ ಮುನವಳಿ ಪರಮ ಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದರು

ಅವರು ರವಿವಾರ ರಾತ್ರಿ ಇಲ್ಲಿಯ ಶೂನ್ಯ ಸಂಪಾದನ ಮಠದಿಂದ ಜರುಗುತ್ತಿರುವ ಕಾಯಕಯೋಗಿ ಲಿಂ.ಬಸವ ಮಹಾಸ್ವಾಮಿಗಳ 13ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಶರಣ ಸಂಸ್ಕಂತಿ ಉತ್ಸವ ಕಾರ್ಯಕ್ರಮದ ನಾಲ್ಕನೇ ದಿನದ ಸಮಾರೋಪ ಸಮಾರಂಭದ ಸಂಗೀತ ಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು

ವಿದ್ಯೆಯಿಂದ ವಿವಾದ ಸೃಷ್ಠಿಯಾಗಬಾರದು ವಿದ್ಯೆಯಿಂದ ಸತ್ಯವನ್ನು ತಿಳಿದು ಕೊಳ್ಳುವ ವಾತಾವಾರಣ ಸೃಷ್ಠಿಯಾಗಬೇಕಾಗಿದೆ ಆ ದೀಸೆಯಲ್ಲಿ ಇತಿಹಾಸಕಾರು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈಯುತ್ತಿರುವ ಸಾಧಕರನ್ನು ಗೌರವಿಸುತ್ತಿರುವುದು

ತ್ಯಾಗ ಮತ್ತು ಸೇವೆಯಿಂದ ಮಾನವ ಏನುಬೇಕಾದರು ಸಾಧಿಸಬಹುದೆಂದು ಶ್ರೀ ಮಠದ ಶರಣ ಸಂಸ್ಕೃತಿ ಉತ್ಸವ ಸಾಬಿತು ಪಡಿಸಿದೆ ಈ ಮಠದಿಂದ ಇನ್ನು ಹೆಚ್ಚಿನ ಸೇವೆ ಸಮಾಜಕ್ಕೆ ಸಿಗಲಿ ಎಂದು ನಿರ್ಭಯಾನಂದ ಮಹಾಸ್ವಾಮಿಗಳು ಹಾರೈಸಿದರು

ಉತ್ಸವದ ನೇತೃವನ್ನು ವಹಿಸಿ ಮಾತನಾಡಿದ ಮುರಘರಾಜೇಂದ್ರ ಮಹಾಸ್ವಾಮಿಗಳು ಮುಂದಿನ ದಿನಗಳಲ್ಲಿ ಶ್ರೀ ಮಠದಿಂದ ವೃದ್ರಾಶ್ರಮ ಮತ್ತು ಅನಾಥಾಶ್ರಮ ಸ್ಥಾಪಿಸುವ ಗುರಿ ಹೊಂದಲಾಗಿದೆ ಬಸವ ತತ್ವವನ್ನು ನಾಡಿಗೆ ಪರಿಚಯಿಸುವ ಮಹತ್ತರ ಉದ್ದೇಶದಿಂದ ಬಸವ ತತ್ವಗಳನ್ನು ಪ್ರತಿಯೊಬ್ಬರ ಮನೆ ಮತ್ತು ಮನಮನಗಳಲ್ಲಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು .
ಹಿಂದು ,ಮುಸ್ಲಿಂ , ಕ್ರೈಸ್ತ ,ಶಿಖ್ ಎಲ್ಲರೂ ಒಂದಾಗಿ ಮಾನವೀಯತೆಯಿಂದ ಬೆಳೆಯಬೇಕಾಗಿದೆ ಆ ದೀಸೆಯಲ್ಲಿ ಎಲ್ಲರೂ ಒಂದಾಗಬೇಕೆಂದು ಶ್ರೀಗಳು ಹೇಳಿದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಮುಖಂಡ ಅಶೋಕ ಪೂಜೇರಿ , ಎಂ.ಡಿ. ಚುನಮುರಿ ಮಾತನಾಡಿದರು

ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈಯುತ್ತಿರುವ ಸಾಧಕರನ್ನು ಗೌರವಿಸಿ , ಸತ್ಕರಿಸಲಾಯಿತು

ವೇದಿಕೆಯಲ್ಲಿ ಬಿಜೆಪಿ ಮುಖಂಡ ಈರಣ್ಣ ಕಡಾಡಿ , ಎಪಿಎಂಸಿ ಅಧ್ಯಕ್ಷ ಅಡಿವೆಪ್ಪಾ ಕಿತ್ತೂರ , ಪೌರಾಯುಕ್ತ ಜಗದೀಶ್ ಮೇಟಿ , ಡಾ. ಸಿ.ಕೆ.ನಾವಲಗಿ , ಜಯಾನಂದ ಮುನ್ನೋಳಿ , ಅಶೋಕ ಪಾಟೀಲ, ಬಸವರಾಜ ಕಲ್ಯಾಣ ಶೆಟ್ಟಿ , ವಿನಾಯಕ ಚಿಪ್ಪಲಕಟ್ಟಿ , ವಿವೇಕ ಜತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು

ಮಲ್ಲಿಕಾರ್ಜುನ ಈಟಿ ಸ್ವಾಗತಿಸಿದರು ಕಾರ್ಯಕ್ರಮವನ್ನು ಶಿಕ್ಷಣ ಆರ್.ಆಯ್. ಮೀರ್ಜಿ , ಎಸ್.ಕೆ.ಮಠದ ನಿರೂಪಿಸಿ ವಂದಿಸಿದರು

ನಂತರ ನಾಡಿನ ಹೆಸರಾಂತ ಗಾಯಕ ರಿಯಾಜ ಚೌಗಲೋ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕಾಮೇಡಿ ಕಿಲಾಡಿ ಪ್ರವೀಣಕುಮಾರ ಗಸ್ತಿ ಅವರಿಂದ ಹಾಸ್ಯ ಹೋನಲು ಕಾರ್ಯಕ್ರಮ ಜರುಗಿತು

Related posts: