RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಶಾಸಕ ಸೇಠಗೆ ಒಲಿದ ಬುಡಾ ಅಧ್ಯಕ್ಷಗಾದಿ

ಬೆಳಗಾವಿ:ಶಾಸಕ ಸೇಠಗೆ ಒಲಿದ ಬುಡಾ ಅಧ್ಯಕ್ಷಗಾದಿ 

ಶಾಸಕ ಸೇಠಗೆ ಒಲಿದ ಬುಡಾ ಅಧ್ಯಕ್ಷಗಾದಿ

ಬೆಳಗಾವಿ  ಫೆ 17: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷ ಸ್ಥಾನವನ್ನು ಬೆಳಗಾವಿ ಉತ್ತರ ಶಾಸಕ ಫೀರೋಜ ಸೇಠ ಅವರಿಗೆ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ

ವಿಧಾನ ಸಭಾ ಚುನಾವಣೆ ಹೊರಸಿಲಿನಲ್ಲಿರುವಾಗಲೇ ರಾಜ್ಯ ಸರಕಾರದ ಈ ಕ್ರಮ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ

ಈ ಹಿಂದೆ ಬುಡಾ ಅಧ್ಯಕ್ಷರಾಗಿದ ಯುವರಾಜ ಕದಂ ಅವರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಈ ಸ್ಥಾನ ಹಲವು ತಿಂಗಳಿನಿಂದ ಕಾಲಿ ಉಳಿದಿತ್ತು ಈ ನೇಮಕ ಸರಕಾರದ ಮಟ್ಟದಲ್ಲಿ ತಲೆನೋವಾಗಿ ಪರಿಣಮಿಸಿತ್ತು

ಕಳೆದ ವರ್ಷದ ಹಿಂದೆ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವಾಕಾಂಕ್ಷೀಯಾಗಿದ್ದ ಸೇಠ್ ಅವರಿಗೆ ಸರಕಾರ ಪ್ರವಾಸೋದ್ಯಮ ನಿಗಮದ ಹೋಣೆ ನೀಡಿ ರಾಜ್ಯ ಸಚಿವ ಸ್ಥಾನ , ಮಾನ ಕಲ್ಪಿಸಿತ್ತು ಆದರೆ ಸೇಠ ಈ ಹುದ್ದೆಗೆ ನಯವಾಗಿಗೆ ರಾಜೀನಾಮೆಯನ್ನು ನೀಡಿ ಎಲ್ಲರ ಹುಬ್ಬೇರಿಸಿದರು

ಅಲ್ಲಿಂದ ಇಲ್ಲಿಯ ವರೆಗೆ ಈ ಹುದ್ದೆಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೆ ನಡೆಯಿತು ಇದರಲ್ಲಿ ಪ್ರಮುಖವಾಗಿ ವಿನಯ ನಾವಲಗಟ್ಟಿ , ರಾಜು ಸೇಠ್ ರ ಹೆಸರು ಹರಿದಾಡುತ್ತಿತು ಆದರೆ ಕೋನೆಯ ಗಳಿಗೆಯಲ್ಲಿ ಸರಕಾರ ಫೀರೋಜ ಸೇಠ ಅವರಿಗೆ ಬುಡಾ ಅಧ್ಯಕ್ಷಗೀರಿಯನ್ನು ದಯಪಾಲಿಸಿ ಇದಕ್ಕೆ ತಾರ್ಕಿಕ ಅಂತ್ಯ ಹಾಡಿದೆ ಸೇಠ ಅವರು ಈ ಹುದ್ದೆಯಲ್ಲಿ ಬರುವ ಮೂರು ವರ್ಷಗಳ ಕಾಲ ಮುನ್ನಡೆಸಲ್ಲಿದ್ದಾರೆ

Related posts: