ಮೂಡಲಗಿ: ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ
ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ
ಮೂಡಲಗಿ ಮೇ 21: ನಮ್ಮ ದೇಶದ ಬೆನ್ನಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ವರ್ಗದವರ ಕಾರ್ಯ ಶ್ಲಾಘನೀಯ ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಅವರು ರವಿವಾರದಂದು ಕರ್ನಾಟಕ ಸ್ವರಾಜ್ ಸಂಘ ಬೆಳಗಾವಿ ಮತ್ತು ಗುರುಮಾರ್ಗ ಶೈಕ್ಷಣಿಕ ಮಾಸ ಪತ್ರಿಕೆಯ ಸಂಯುಕ್ತಾಶ್ರಯದಲ್ಲಿ ಮೂಡಲಗಿ ಪಟ್ಟಣದ ಸೋನವಾಲ್ಕರ ಕಲ್ಯಾಣ ಮಂಟಪದಲ್ಲಿ ಕಾರ್ಮಿಕರ ದಿನಾಚಾರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಮಿಕರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಕುಟುಂಬ ಬಲಿಷ್ಟ ವಾಗ ಬೇಕಾದರೆ ನಮ್ಮ ದುಡಿಮೆ ಮತ್ತು ದೈನಂದಿನ ಚಟುವಟಿಕೆಗಳು ಜೀವನದಲ್ಲಿ ಬಹುದೊಡ್ಡ ಪಾತ್ರ ವಹಿಸಿವೆ ಕಾರ್ಮಿಕ ಬಂಧುಗಳು ತಮ್ಮ ದುಡಿಮೆಯ ಬಹು ಭಾಗವನ್ನು ಮಕ್ಕಳ ಶಿಕ್ಷಣಕ್ಕೆ ವ್ಯಹಿಸಿ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಣಮಡಿ,ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡುವ ನೀಟ್ಟಿನಲ್ಲಿ ಕಾರ್ಯಪ್ರವೃತವಾದರೆ ಮಾತ್ರ ಭವಿಷ್ಯದಲ್ಲಿ ಒಳ್ಳೆಯ ನೆಲೆ ಕಂಡುಕೊಳ್ಳಲು ಸಾಧ್ಯ ವೆಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಂಡಿಗಣಿಯ ಪೂಜ್ಯಶ್ರೀ ಚಕ್ರವರ್ತಿ ದಾನೇಶ್ವರ ದೇವರು ವಹಿಸಿ ಆರ್ಶಿವಚನ ನೀಡಿದರು.
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು, ಸರಕಾರಿ ನೌಕರರನ್ನು ಸತ್ಕಾರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯರಾದ ಸೋನವಾಲ್ಕರ, ಮೂಡಲಗಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ, ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ಶ್ರೀಮತಿ ರಜನಿ ಜೀರಗ್ಯಾಳ, ಕಲಾವಿದ ರಿಯಾಜ ಚೌಗಲಾ ವಿರೇಂದ್ರ ಪದಕಿ,ಕರ್ನಾಟಕ ಸ್ವರಾಜ್ ಸಂಘಟನೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.