ಗೋಕಾಕ:ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದರೆ ಬದುಕು ಸಾರ್ಥಕ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ
ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದರೆ ಬದುಕು ಸಾರ್ಥಕ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ
ಗೋಕಾಕ ಫೆ 18 : ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ವಿದ್ಯಾರ್ಜನೆ ಮಾಡಿದರೆ ಬದುಕು ಸಾರ್ಥಕವಾಗುವುದು ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು
ಇತ್ತೀಚೆಗೆ ಇಲ್ಲಿಯ ಅಂಬೇಡ್ಕರ್ ನಗರದ ಪಾತೀಮಾ ಉರ್ದು ಹೆಣ್ಣು ಮಕ್ಕಳ ಪ್ರೌಡಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು
ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡಬೇಕು. ಮಕ್ಕಳಲ್ಲಿ ಉನ್ನತ ಅಧಿಕಾರಿಗಳಾಗುವಂತಹ ಕನಸುಗಳಿಂದ ಪ್ರೇರೆಪಿಸಿ ಅವುಗಳ ನನಸಾಗುವಂತಾ ವಾತವರಣ ನಿರ್ಮಿಸಬೇಕು. ಅಲ್ಪ ಸಂಖ್ಯಾತ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಸಮುದಾಯ ಜನ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನಗರಸಭೆ ಸದಸ್ಯ ಎಸ್.ಎ.ಕೋತವಾಲ , ಸಂಸ್ಥೆಯ ಅಧ್ಯಕ್ಷ ಎ.ಎಂ.ಮುನ್ನೋಳಿ , ಜಿ.ಆರ್.ಮಾಳಗಿ , ಎಂ.ಡಿ.ಬೇಗ್, ಜಾಕೀರ ನಧಾಪ , ತಿಮ್ಮವ್ವಗೋಳ , ಸಿಆರಸಿ ಮೋಮಿನ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಎನ್.ಎನ್.ಕಮನಾ ನಿರೂಪಿಸಿದರು ಕೊನೆಯಲ್ಲಿ ಶಿಕ್ಷಣ ಹುಸೇನ ನಧಾಪ ವಂದಿಸಿದರು