RNI NO. KARKAN/2006/27779|Saturday, December 14, 2024
You are here: Home » breaking news » ಖಾನಾಪುರ:ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ರಪಾಟಿ

ಖಾನಾಪುರ:ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ರಪಾಟಿ 

ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ರಪಾಟಿ
ಖಾನಾಪುರ ಫೆ 20 : ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಾಗಿ ಕಳೆದ 18 ವರ್ಷಗಳಿಂದ ಸಕ್ರೀಯವಾಗಿ ಪಕ್ಷ ಸಂಘಟನೆ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ, ಉಪಾಧ್ಯಕ್ಷ , ತಾಲೂಕಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಸ್ತುತ ತಾಲೂಕಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ ಅವರು 2006-11 ರ ಅವಧಿಗೆ ಎಪಿಎಂಸಿ ಸದಸ್ಯ ಮತ್ತು ದಿ.ರೇಮಾಣಿ ಅವರ ಗೆಲುವಿನ ಹಿಂದೆ ತಮ್ಮ ಪರಿಶ್ರಮ ಬಹಳಷ್ಟು ಇದೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜು ರಪಾಟಿ ತಿಳಿಸಿದರು.

ತಾಲೂಕಿನ ಬೀಡಿ ಗ್ರಾಮದ ಹೊರವಲಯದಲ್ಲಿ ಸೋಮವಾರದಂದು ಜರುಗಿದ ಲಿಂಗನಮಠ ಗ್ರಾಮದ ಯುವ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತರಾದ ರಾಜು ಜಯಪಾಲ ರಪಾಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಖಾನಾಪೂರ ತಾಲೂಕು ವಿಶಾಲ ಕ್ಷೇತ್ರ ಹೊಂದಿದ್ದು ಇನ್ನೂ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಮೂಲಭೂತ ಸೌಕರ್ಯಗಳಿಂದ ವಂಚಿತ ಗ್ರಾಮಗಳನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸಬೇಕಿದೆ. ಹೊರಗಿನಿಂದ ಬಂದು ಪಕ್ಷ ಸೇರುವ ಅಭ್ಯರ್ಥಿಗಳಿಗೆ ಪಕ್ಷದ ಟಿಕೇಟ್ ಕೊಡುವುದನ್ನು ವಿರೋಧಿಸಿ, ಬಂಡಾಯ ಸಾರುತ್ತೇವೆ. ಅಭಿವೃದ್ಧಿಯ ಹರಿಕಾರ ಮೋದಿಯವನ್ನು ಬಲಪಡಿಸುವುದು ನಮ್ಮ ಉದ್ದೇಶ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಯಾರಿಗೆ ಟಿಕೇಟ್ ನೀಡಿದರೂ ಒಗ್ಗಟ್ಟಾಗಿ ಶ್ರದ್ಧೆಯಿಂದ ದುಡಿದು ತಾಲೂಕಿನಲ್ಲಿ ಕಮಲ ಅರಳಿಸುವ ಪಣ ತೊಟ್ಟಿದ್ದೇವೆ. ಆದ್ದರಿಂದ 2018ರ ಚುನಾವಣೆಯಲ್ಲಿ ಖಾನಾಪೂರ ತಾಲೂಕಿನ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ತಾನು ಬಿಜೆಪಿ ಅಭ್ಯರ್ಥಿ ಎಂದು ಸ್ಪರ್ಧಿಸಲು ಪ್ರಬಲ ಆಕಾಂಕ್ಷಿ ಆಗಿರುವುದಾಗಿ ರಾಜು ಜಯಪಾಲ ರಪಾಟಿ ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಸೆಕ್ರೇಟರಿ ಮಾರುತಿ ಟಕ್ಕೇಕರ, ಮಾಜಿ ಜನರಲ್ ಸೆಕ್ರೇಟರಿ ಮಹಾಬಳೇಶ್ವರ ಚವಲಗಿ, ಮಾಜಿ ಲಿಂಗನಮಠ ಗ್ರಾ.ಪಂ.ಅಧ್ಯಕ್ಷ ಶಿವಾನಂದ ಗೋಧೊಳ್ಳಿ, ತಾ.ಪಂ.ಮಾಜಿ ಸದಸ್ಯ ಎಂ.ಆರ್.ನದಾಫ, ರೈತ ಮೋರ್ಚಾ ಸೆಕ್ರೇಟರಿ ಮನೋಹರ ಕದಂ, ಬಿಜೆಪಿ ಉಪಾಧ್ತಕ್ಷ ರವಿ ಬನೋಸಿ, ಎಪಿಎಂಸಿ ಸದಸ್ಯ ಬಸವರಾಜ ಮುಗಳಿಹಾಳ, ವಿಠಲ ನಿಡಗಲಕರ, ಮಹಾಂತೇಶ ಸಂಗೊಳ್ಳಿ, ರಾಚಯ್ಯಾ ಚರಂತಿಮಠ, ಮಾರುತಿ ಸತ್ತೆನ್ನವರ, ಅಪ್ಪಾರಾವ ಪಾಟೀಲ, ಸಂಜಯ ಕಂಚಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: