ಗೋಕಾಕ:ಪಿಎಸ್ಐ ಜಾನಾರ , ಗಣಪತಿ ಕಂಗನೋಳ್ಳಿ ವರ್ಗಾವಣೆ
ಪಿಎಸ್ಐ ಜಾನಾರ , ಗಣಪತಿ ಕಂಗನೋಳ್ಳಿ ವರ್ಗಾವಣೆ
ಗೋಕಾಕ ಫೆ 20: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗೋಕಾಕ ಶಹರ ಪಿಎಸ್ಐ ಜಾನಾರ ಮತ್ತು ಗೋಕಾಕ ಗ್ರಾಮೀಣ ಪಿಎಸ್ಐ ಗಣಪತಿ ಕಂಗನೋಳ್ಳಿ ಅವರನ್ನು ವರ್ಗಾವಣೆ ಮಾಡಲಾಗಿದೆ
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 24 ಘಂಟೆಗಳ ಒಳಗಾಗಿ ವರ್ಗಾಯಿಸಿದ ಸ್ಥಳಕ್ಕೆ ವರದಿ ಮಾಡುವಂತೆ ಸೂಚಿಸಿ ಜಿಲ್ಲಾ ಆರಕ್ಷಕ ಮಹಾನಿರೀಕ್ಷಕರು ಆದೇಶಿಸಿದ್ದಾರೆ
ಗೋಕಾಕ ಶಹರ ಠಾಣೆಗೆ ಬಾಗಲಕೋಟೆ ನವ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಸಂತೋಷ ಹಳ್ಳೂರ ಮತ್ತು ಗೋಕಾಕ ಗ್ರಾಮೀಣ ಠಾಣೆಗೆ ಎಸ್.ಎಂ.ಶಿರಗುಪ್ಪಿ ಅವರನ್ನು ವರ್ಗಾಯಿಸಲಾಗಿದ್ದು, ಗೋಕಾಕ ಶಹರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಜಾನಾರ ಅವರನ್ನು ನಿಪ್ಪಾಣಿ ಶಹರ ಬಸವೇಶ್ವರ ಪೊಲೀಸ ಠಾಣೆಗೆ ಮತ್ತು ಗ್ರಾಮೀಣ ಠಾಣೆಯ ಗಣಪತಿ ಕಂಗನೋಳ್ಳಿ ಅವರನ್ನು ಬಾಗಲಕೋಟೆ ಜಿಲ್ಲೆಯ ಗುಳೇದ್ದಗುಡ ಗೆ ವರ್ಗಾಯಿಸಿ ಆದೇಶಿಸಲಾಗಿದೆ