ಬೆಳಗಾವಿ:ನಾನು ಕಟ್ಟಿದ ರಾಜ್ಯದಲ್ಲಿ ಅವರು ಮಜಾ ಮಾಡುತ್ತಿದ್ದಾರೆ : ಶಾಸಕ ಸತೀಶ ಗಂಭೀರ ಆರೋಪ
ನಾನು ಕಟ್ಟಿದ ರಾಜ್ಯದಲ್ಲಿ ಅವರು ಮಜಾ ಮಾಡುತ್ತಿದ್ದಾರೆ : ಶಾಸಕ ಸತೀಶ ಗಂಭೀರ ಆರೋಪ
ಬೆಳಗಾವಿ ಫೆ 20:ಚುನಾವಣೆ ಸಮೀಪಿಸುತ್ತಿದ್ದಂತೆ ಸಹೋದರ ಸವಾಲ್ ತಾರಕಕ್ಕೇರುತ್ತಿದೆ ಎಂದೆನೆಸುತ್ತಿದ್ದೆ ನಿನ್ನೆಯಷ್ಟೇ ಚಿಕ್ಕೋಡಿಯಲ್ಲಿ ಶಾಸಕ ಸತೀಶ ಜಾಕಿಹೊಳಿ ಅವರು ಸಹೋದರ ಲಖನ್ , ಬೇಗ ಯಮಕನಮರಡಿ ಬಂದು ಚುನಾವಣಾ ಪ್ರಚಾರ ಶುರು ಮಾಡಲಿ ಎಂದು ಸವಾಲು ಹಾಕಿದ್ದರು ಅದಕ್ಕೆ ಗಂಭೀರವಾಗಿ ಪ್ರತಿಕ್ರಿಯೆ ನೀಡಿ ಆದಷ್ಟು ಬೇಗ್ ಪ್ರಚಾರ ಪ್ರಾರಂಭಿಸುತ್ತೆನೆಂದು ಪ್ರತಿಕ್ರಿಯೆ ನೀಡಿದ ಕಿರಿಯ ಸಹೋದರ ಲಖನ್ ಅವರಿಗೆ ಮತ್ತೆ ಇಂದು ಸಾಯಂಕಾಲ ಸತೀಶ ಜಾಕಿಹೊಳಿ , ಲಖನ್ ಅವರಿಗೆ ಟಾಂಗ್ ನೀಡಿದ್ದಾರೆ ಮಾಧ್ಯಮದವರ ಜೊತೆ ಮಾತನಾಡಿದ ಸತೀಶ
ಲಖನ್ ಜಾರಕಿಹೊಳಿ ಚುನಾವಣೆಗೆ ಸ್ಪರ್ಧಿಸಲಿ, ಚುನಾವಣೆಗೆ ನಿಲ್ಲುತ್ತೇನೆ ನಿಲ್ಲುತೇನೆ ಎಂದು ಹೇಳುತ್ತಿದ್ದಾರೆ. ಬೇಗ ಬಂದು ಯಮಕನಮರಡಿ ಮತಕ್ಷೇತ್ರದಲ್ಲಿ ಪ್ರಚಾರ ಆರಂಭಿಸಲಿ. ನಾನೂ ಲಖನ್ ಜಾರಕಿಹೊಳಿ ಶಕ್ತಿ ಎಷ್ಟಿದೆ ಎಂದು ನೋಡಬೇಕಿದೆ ಎಂದರು.
ಗೋಕಾಕ್‌ದಲ್ಲಿ ನಾನು ಕಟ್ಟಿದ ರಾಜ್ಯದಲ್ಲಿ ಅವರು ಮಜಾ ಮಾಡುತ್ತಿದ್ದಾರೆ. ಒಮ್ಮೆ ಲಖನ್ ಜಾರಕಿಹೊಳಿ ಗೋಕಾಕ ಬಿಟ್ಟು ಹೊರಗೆ ಬರಬೇಕು. ನನ್ನ ವಿರುದ್ಧ ಆರೋಪ ಮಾಡಿದ್ದು ಬಿಟ್ಟರೆ ಗೋಕಾಕ್‌ದಲ್ಲಿ ಇವರೇನು ಜನರಿಗೆ ಕೆಲಸ ಮಾಡಿದ್ದಾರಾ? ಮೊದಲು ಲಖನ್ ತಮ್ಮದು ನೋಡಿಕೊಳ್ಳಲಿ ಎಂದು ಸಹೋದರನಿಗೆ ತಿರುಗೇಟು ನೀಡಿದರು