RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ: ವಲಯದ ನಾರಾಯಣಕೇರಿ ಶಾಲೆಗೆ ಜಿಲ್ಲಾ ಮಟ್ಟದ “ಪರಿಸರ ಮಿತ್ರ” ಪ್ರಶಸ್ತಿ

ಗೋಕಾಕ: ವಲಯದ ನಾರಾಯಣಕೇರಿ ಶಾಲೆಗೆ ಜಿಲ್ಲಾ ಮಟ್ಟದ “ಪರಿಸರ ಮಿತ್ರ” ಪ್ರಶಸ್ತಿ 

ಗೋಕಾಕ ವಲಯದ ನಾರಾಯಣಕೇರಿ ಶಾಲೆಗೆ ಜಿಲ್ಲಾ ಮಟ್ಟದ “ಪರಿಸರ ಮಿತ್ರ” ಪ್ರಶಸ್ತಿ
ಗೋಕಾಕ ಫೆ 21: ಜಿಲ್ಲಾಡಳಿತ,ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ವರ್ಷ ಕೊಡಮಾಡುವ ಜಿಲ್ಲಾ ಮಟ್ಟದ ” ಪರಿಸರ ಮೀತ್ರ” ಪ್ರಶಸ್ತಿ ಈ ಭಾರಿ ಗೋಕಾಕ ವಲಯದ ಶಿಂಗಳಾಪೂರ ಟಕ್ಕೆಯ ನಾರಾಯಣಕೇರಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಲಭಿಸಿದೆ .

ಮಂಗಳವಾರ ಚಿಕ್ಕೋಡಿಯ ಅಂಬೇಡ್ಕರ್ ಭವನದಲ್ಲಿ ಜರುಗಿದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ

ಪ್ರಶಸ್ತಿ ಪಡೆಯಲು ಕಾರಣೀಕರ್ತರಾದ ಶಾಲೆಯ ಮುಖ್ಯೋಪಾಧ್ಯಾಯ, ಸಿಬ್ಬಂದಿ ವರ್ಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಕುರ್ಲಕಣಿ, ನಿಕಟಪೂರ್ವ ಬಿಇಓ ಜಿ.ಬಿ ಬಳಗಾರ ಅವರು ಶುಭ ಕೋರಿದ್ದಾರೆ

Related posts: