RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಂಸ್ಕೃತಿಕ ಲೋಕಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ-ರಂಗನಾಥ ಡಿ.ಕೆ

ಗೋಕಾಕ:ಸಂಸ್ಕೃತಿಕ ಲೋಕಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ-ರಂಗನಾಥ ಡಿ.ಕೆ 

ಸಂಸ್ಕೃತಿಕ ಲೋಕಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ-ರಂಗನಾಥ ಡಿ.ಕೆ.

ಗೋಕಾಕ ಫೆ 22: ಕರ್ನಾಟಕದ ಸಾಂಸ್ಕøತಿಕ ಶ್ರೀಮಂತಿಕೆಯು ನಮ್ಮನ್ನು ಸಂಸ್ಕಾರವಂತರನ್ನಾಗಿಸುತ್ತದೆ. ಅದರಲ್ಲೂ  ಚಿತ್ರ, ರಂಗಭೂಮಿ, ಸಂಗೀತ ಕ್ಷೇತ್ರಗಳಿಗೆ ಉತ್ತರ ಕರ್ನಾಟಕದ ಕೊಡುಗೆ ಅಪಾರವಾದುದು. ಎಂದು ಬೆಂಗಳೂರಿನ ಖ್ಯಾತ ಚಿತ್ರಕಲಾವಿದ ರಂಗನಾಥ ಡಿ. ಕೆ. ಹೇಳಿದರು.
ಇತ್ತಿಚೆಗೆ ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ನಡೆದ ವಣೋತ್ಸವದಲ್ಲಿ “ಗೋಕಾವಿ ವರ್ಣಸಿರಿ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕಲೆಯು ಮನುಷ್ಯನನ್ನು ಪರಿಪೂರ್ಣತೆಯತ್ತ ಕರೆದುಕೊಂಡು ಹೋಗುತ್ತದೆ. ಬೆಳಗಾವಿ ಹಾಗೂ ಸುತ್ತಮುತ್ತಲಿನ ಕಲೆಯ ಪರಿಸರ ನಾಡನ್ನು ಬೆಳಗಿಸುತ್ತಿದೆ ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ಹಂಪಿಯ ಅಧಿಕ್ಷಕ ಗ್ಯಾನಪ್ಪ ಬಡಿಗೇರ ವರ್ಣೋತ್ಸವನ್ನು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಲ್ಲಿ ಲಲಿತ ಕಲೆಗಳ ಅರಿವು ಮೂಡಿಸುವುದರಿಂದ ಬೌದ್ಧಿಕ ಬೆಳವಣಿಗೆ ಹೊಂದಲು ಸಾಧ್ಯವಿದೆ. ಅದರಿಂದ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ ಬಸವರಾಜ ಕಡಕಭಾವಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಹುಕ್ಕೇರಿಯ ಎಂ.ಜಿ ಮಕಾನದಾರ, ಗೋಕಾಕದ ಎಂ. ಆರ್. ಹೊಸಕೋಟಿ, ನಿಡಸೋಶಿಯ ಭೀಮಪ್ಪಾ ಪಾತಾಳಿ, ಘೋಡಗೇರಿಯ ಬಸವರಾಜ ದಾರೋಜಿ, ಬೆಳಗಾವಿಯ ಸಾಕ್ಷಿ ಕೋಳೇಕಾರ, ಗೋಕಾವಿ ವರ್ಣಸಿರಿ ಪ್ರಶಸ್ತಿಯನ್ನು ಹಿರಿಯ ಚಿತ್ರಕಲಾವಿದ ನಿವೃತ್ತ ಶಿಕ್ಷಕ ಎಸ್. ಜಿ. ಮುಂಗರವಾಡಿ ಪ್ರದಾನ ಮಾಡಿದರು.
5ನೇ ವರ್ಷದ ಸತ್ತೆವ್ವ ಕುಮರೇಶಿ, 3ನೇ ವರ್ಷದ ಮಂಜುನಾಥ ಮಡಿವಾಳ ಆದರ್ಶ ವಿದ್ಯಾರ್ಥಿ ಪುರಸ್ಕಾರ ಪಡೆದರು. ಪ್ರಥಮ ವರ್ಷದ ನೀಲಾವತಿ ಹೂಗಾರ, 2ನೇ ವರ್ಷದ ವಿದ್ಯಾ ತೋಂಡಿಕಟ್ಟಿ, 3ನೇ ವರ್ಷದ ನೇತ್ರಾವತಿ ಬೆಳಗಲಿ 4ನೇ ವರ್ಷದ ಬಾಳಗೌಡ ಪಾಟೀಲ, 5ನೇ ವರ್ಷದ ಅನಿಲ ಪತ್ತಾರಗೆ ವರ್ಷದ ಗುಡ್ ವರ್ಕರ್ಸ್ ಅವಾರ್ಡ ನೀಡಲಾಯಿತು.
ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪ್ರಾಥಮಿಕ ಹಾಗೂ ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಅರಳು ರೇಖೆ ಎಂಬ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಮಹಾದೇವಿ ಕಡಖಭಾವಿ, ಪ್ರಾಚಾರ್ಯ ಜಯಾನಂದ ಮಾದರ, ಉಪನ್ಯಾಕಿ ಮಾಲಾ ದಳವಾಯಿ, ಸಾಕ್ಷಿ ಕೋಳೆಕಾರ, ಎಮ್.ಜಿ.ಮಕಾನದಾರ, ಬಸವರಾಜ ದಾರೋಜಿ ಇದ್ದರು.
2 ದಿನಗಳ ಕಾಲ ನಗರದಲ್ಲಿ ನಡೆದ ಹಂಪಿ ದೃಶ್ಯಕಲೆ ಹಾಗೂ ಪೇಂಟಿಂಗ್ ಪ್ರದರ್ಶನದಲ್ಲಿ ಚಿತ್ರ ಕಲಾವಿದರಾದ ರೋಹಿತ ಗಸ್ತಿ, ಲಕ್ಷ್ಮಣ ತಳವಾರ, ಶಹಬಾಜ ಬಾಲಪ್ರವೇಶ, ಮುತ್ತವ್ವ ಪೂಜೇರಿ, ವಿದ್ಯಾ ತೊಂಡಿಕಟ್ಟಿ, ಸಯ್ಯದ ಗಲಗಲಿ, ನೇತ್ರಾವತಿ ಬೆಳಗಲಿ, ಪ್ರವೀಣ ಯಡ್ರಾಂವಿ, ಮಂಜುನಾಥ ಮಡಿವಾಳರ, ವಿಠ್ಠಲ ಮಾಂಗ, ಲಕ್ಕಪ್ಪ ಯಡ್ರಾಂವಿ, ಬಾಳಗೌಡ ಪಾಟೀಲ, ಬಸವರಾಜ ಗದಗಿನ, ಸತ್ತೆವ್ವಾ ಕುಮರೇಶಿ, ಅನಿಲ ಪತ್ತಾರ, ಲಕ್ಷ್ಮಣ ಹಿರೇಕುರಬರ, ನೀಲಾವತಿ ಹೂಗಾರ, ಸವಿತಾ ಪಡಿಮನಿ, ರೇವತಿ ಎಮ್ಮಿ, ಮಹಾಂತೇಶ ತೋಳಿ, ಹಣಮಂತ ಗಂಗಣೆ, ಸತ್ತೆಪ್ಪಾ ಬೊಗೂರಿ, ಪ್ರವೀಣ ಶಿರಗಾವಿ ಭಾಗವಹಿಸಿದ್ದರು

Related posts: