ಖಾನಾಪುರ:ಮಕ್ಕಳು ದೇಶದ ಅಮೂಲ್ಯ ಸಂಪತ್ತು : ಸುಭಾಷ ಗುಳಶೆಟ್ಟಿ
ಮಕ್ಕಳು ದೇಶದ ಅಮೂಲ್ಯ ಸಂಪತ್ತು : ಸುಭಾಷ ಗುಳಶೆಟ್ಟಿ
ಖಾನಾಪುರ ಫೆ 26 : ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವಲ್ಲಿ ತಂದೆ ತಾಯಿ ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದ್ದು ದೇಶದ ಭವಿಷ್ಯ ಮಕ್ಕಳು ಪಡೆಯುವ ಶಿಕ್ಷಣದ ಮೇಲೆ ಅವಲಂಬಿತವಾಗಿದೆ ಎಂದು ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರನ್ಯಾಷನಲ್ ಸ್ಕೂಲದ ಅಧ್ಯಕ್ಷ ಸುಭಾಷ ಗುಳಶೆಟ್ಟಿ ಅಭಿಪ್ರಾಯ ಪಟ್ಟರು.
ತಾಲೂಕಿನ ಇಟಗಿಯಲ್ಲಿ ಶನಿವಾರ ಸಾಯಂಕಾಲ ಜರುಗಿದ ಶ್ರೀ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಪ್ರಸಾರ ಸಮಿತಿಯ ಶ್ರೀ ಬಸವೇಶ್ವರ ಕನ್ನಡ ಕಾನ್ವೆಂಟ್ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಜನತಾ ಶಿಕ್ಷಣ ಪ್ರಸಾರ ಸಮಿತಿಯ ಎಸ್.ಎಸ್.ಕಲ್ಲಪ್ಪಗೌಡರ ಹಿರಿಯ ಪ್ರಾಥಮಿಕ ಶಾಲೆ ಇಟಗಿ 11ನೇ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ದೇಶದ ಅಮೂಲ್ಯ ಸಂಪತ್ತಾಗಿದ್ದು ಅವರ ಅಭಿರುಚಿಗೆ ತಕ್ಕಂತೆ ಅವರನ್ನು ಬೆಳೆಸಲು ಪಾಲಕರು ಮುಂದಾಗಬೇಕು. ಪಾಲಕರಿಗೆ ಮಕ್ಕಳ ಪೋಷಣೆ ಅಷ್ಟೆ ಅಲ್ಲದೆ ಅವರ ಸರ್ವತೋಮುಖ ಅಭಿವೃದ್ದಿಯೂ ಮುಖ್ಯ ಎಂದರು.
ಎಮ್.ಕೆ.ಹುಬ್ಬಳ್ಳಿ ಸಮರ್ಥ ಅಗ್ರಿಕಲ್ಚರ ಮತ್ತು ರೂರಲ್ ಡೆವಲಪಮೆಂಟ್ ಸೊಸೈಟಿಯ ಮಂಜುನಾಥ ಅಳವಣಿ ಮಾತನಾಡಿ ವಿದ್ಯಾರ್ಥಿ ಜೀವನದಿಂದಲೇ ನಿರಂತರ ಶ್ರಮ ಉತ್ತಮ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಉನ್ನತಿ ಸಾಧಿಸಿ ಎಂದರು. ಶಿಕ್ಷಣ ಸಂಯೋಜಕ ಸಿದ್ದಣ್ಣ ಸಾಣಿಕೊಪ್ಪ ಮಾತನಾಡಿದರು.
ಜ.ಪಂ.ಶಿ.ಪ್ರ.ಸಮಿತಿಯ ಚೇರಮನ್ನ ಎಮ್.ಎಸ್.ಸಾಣಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜ.ಶಿ.ಪ್ರ.ಸಮಿತಿಯ ಚೇರಮನ್ನ ವಿ.ಎಮ್.ತುರಮರಿ, ಮುಖ್ಯಾಧ್ಯಾಪಕ ಬಿ.ಬಿ.ಚಂದರಗಿ , ಪ್ರಾಚಾರ್ಯ ಜಿ.ಬಿ. ನಾಯ್ಕರ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.
ಮಾಲಾ ಹೊನ್ನಣ್ಣವರ ಸ್ವಾಗತಿಸಿದರು, ವಿಜಯಲಕ್ಷ್ಮೀ ತುರಮರಿ ವರದಿ ವಾಚಿಸಿದರು, ಶೋಭಾ ಕಾರಕದ ವಂದಿಸಿದರು, ಶೃತಿ ಹೊಸಮಠ ಮತ್ತು ಗಾಯತ್ರಿ ದೇಸಾಯಿ ಹಾಗೂ ನಿರೂಪಿಸಿದರು.