ಗೋಕಾಕ:ನಾಳೆ ರಿಯಾಜರಿಂದ ಗೋಕಾವಿಯಲ್ಲಿ ಸಿಂಪೋನಿ ಆರ್ಕೇಸ್ಟ್ರಾ : ಸಾರ್ವಜನಿಕರಿಗೆ ಉಚಿತ ಪ್ರವೇಶ
ನಾಳೆ ರಿಯಾಜರಿಂದ ಗೋಕಾವಿಯಲ್ಲಿ ಸಿಂಪೋನಿ ಆರ್ಕೇಸ್ಟ್ರಾ : ಸಾರ್ವಜನಿಕರಿಗೆ ಉಚಿತ ಪ್ರವೇಶ
ಗೋಕಾಕ ಮಾ 3 : ಸತೀಶ ಜಾರಕಿಹೊಳಿ ಪೌಂಡೇಶನ್ ಮತ್ತು ಲೋಕಮಾನ್ಯ ಸಿಂಪೋನಿ ಆರ್ಕೇಸ್ಟ್ರಾ ಸಹಯೋಗದೊಂದಿಗೆ ದೇಶದಲ್ಲಿ ಪ್ರಥಮವಾಗಿ ಮಾರ್ಚ 4ರಂದು ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ವಿವಿಧ ವಾದ್ಯಕಲಾವಿದರನ್ನು ಒಳಗೊಂಡು ಸಿಂಪೋನಿ ಆರ್ಕೆಸ್ಟ್ರಾದಿಂದ ಲೈವ ಗಾಯನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಘಟಕ ರಿಯಾಜ ಚೌಗಲಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸುಮಾರು 300 ವರ್ಷಗಳ ಹಳೆಯ ಇತಿಹಾಸವುಳ್ಳ ಸಿಂಪೋನಿ ವಾದ್ಯಗಳ ವಾದ್ಯಕಲಾವಿದರು ಪ್ರಸ್ತುತ ಮಾಯವಾಗುತ್ತಿದ್ದಾರೆ. ಅದನ್ನು ಮನಗೊಂಡು ಸಮಾಜಕ್ಕೆ ಅವರ ಕಲೆ ಮತ್ತು ನಶಸಿಕೊಳ್ಳುತ್ತಿರುವ ವಾದ್ಯಗಳನ್ನು ಪರಿಚಯಿಸುವ ಮಹತ್ತರ ಉದ್ದೇಶದಿಂದ ಈ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇಡಲಾಗಿದ್ದು. ರವಿವಾರ ದಿ.4ರಂದು ಸಾಯಂಕಾಲ 7-00 ಗಂಟೆಗೆ ನಗರದ ಕೆ.ಎಲ್.ಇ ಶಾಲಾ ಆವರಣದಲ್ಲಿ ನಡೆಯುವ ಈ ಸಂಗೀತ ಕಾರ್ಯಕ್ರಮವನ್ನು ಎ.ಐ.ಸಿ.ಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಆಗಮಿಸುವ ಸುಮಾರು 50ಕ್ಕೂ ನುರಿತ ವಾದ್ಯ ಕಲಾವಿದರು ವಿವಿಧ ವಾದ್ಯಗಳನ್ನು ನುಡಿಸಲಿದ್ದಾರಲ್ಲದೇ ಸುಮಾರು 20ಕ್ಕೂ ಹೆಚ್ಚು ಹೊಸ ಹೊಸ ಮತ್ತು ಹಳೆ ಗೀತೆಗಳನ್ನು ಕಾರ್ಯಕ್ರಮಗಳಲ್ಲಿ ಹಾಡಲಾಗುವುದು. ಕಾರಣ ಎಲ್ಲ ಸಂಗೀತಾಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ರಿಯಾಜ ವಿನಂತಿಸಿದ್ದಾರೆ.