RNI NO. KARKAN/2006/27779|Monday, December 23, 2024
You are here: Home » breaking news » ಖಾನಾಪುರ:ಕೆಲಸದಿಂದ ವಜಾ ಆದ ಲಿಂಗನಮಠ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಉಳವಪ್ಪಾ ಚವಲಗಿ

ಖಾನಾಪುರ:ಕೆಲಸದಿಂದ ವಜಾ ಆದ ಲಿಂಗನಮಠ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಉಳವಪ್ಪಾ ಚವಲಗಿ 

ಕೆಲಸದಿಂದ ವಜಾ ಆದ ಲಿಂಗನಮಠ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಉಳವಪ್ಪಾ ಚವಲಗಿ

ಖಾನಾಪುರ ಮಾ 6 : ಮಾನ್ಯ ಓಂಬುಡ್ಸಮನ್ ಜಿಪಂ ಬೆಳಗಾವಿ, ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಹಾಗೂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಖಾನಾಪುರ ಇವರುಗಳ ಪತ್ರದ ಅನುಸಾರವಾದ ಮಾಹಿತಿಯನ್ನು ಪರಿಗಣಿಸಿ ಶ್ರೀ ಪಡದಯ್ಯಾ ಹಿರೇಮಠ ವಾಟರಮನ್ ಇವರಿಗೆ ನರೇಗಾ ಯೋಜನೆಯಲ್ಲಿ ಕೂಲಿ ಪಾವತಿ ಹಾಗೂ ವಾಟರಮನ್ ವೇತನವನ್ನು ಒಂದೇ ಅವಧಿಯಲ್ಲಿ ಪಾವತಿಸಿರುವುದು ಡಾಟಾ ಎಂಟ್ರಿ ಆಟರೇಟರ್ ಇವರ ಕೆಲಸದಲ್ಲಿರುವ ನಿರ್ಲಕ್ಷ, ನಿಷ್ಕಾಳಜಿ ತೋರಿಸಿದ್ದೂ ಅವರ ಕೇಲಸವೂ
ಸಮರ್ಪವಾಗಿಲ್ಲವಾದ್ದರಿಂದ “ಲಿಂಗನಮಠ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಉಳವಪ್ಪಾ ಚವಲಗಿ” ಅವರನ್ನು ಕೆಲಸದಲ್ಲಿ ಮುಂದುವರೆಸುವುದು ಸಮಂಜಸವಲ್ಲವೆಂದು ಅಭಿಪ್ರಾಯಪಟ್ಟು ಕರ್ನಾಟಕ ಪಂಚಾಯತ ರಾಜ ಅಧಿನಿಯಮ 1993 ಪ್ರಕರಣ 113 ಉಪ್ರಕರಣ 3ರಂತೆ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಗ್ರಾಪಂ ಲಿ ಇವರಿಗೆ ದಿ.30-12-2017 ರ ಉಲ್ಲೆಖ 1ರಲ್ಲಿನ ಐತಿರ್ಪಿನಲ್ಲಿ ಆದೇಶಿಸಿರುತ್ತಾರೆ. ಉಲ್ಲೇಖ 2ರಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಖಾನಾಪುರ ರವರು ಸದರಿ ಐತಿರ್ಪಿನ ಕುರಿತ ಕ್ರಮಕೈಗೊಂಡು ಉಳವಪ್ಪಾ ಚವಲಗಿ ಡಾಟಾ ಎಂಟ್ರಿ ಆಪರೇಟರ್ ಲಿಂಗನಮಠ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ.

ಸದರಿಯವರಿಗೆ ಸಲ್ಲಬೇಕಾದ ವೇತನವನ್ನು ನಿಯಮಾನುಸಾರ ಕ್ರಮವಹಿಸಿ ಪೂರೈಸಲಾಗುವುದು. ಆದ್ದರಿಂದ ಸದರಿಯವರು ತಮ್ಮ ಬಳಿಯ ಎಲ್ಲಾ ಗ್ರಾಪಂನ ದಾಖಲಾತಿಗಳನ್ನು ಸಂಪೂರ್ಣವಾಗಿ ಗ್ರಾಮ ಪಂಚಾಯತ ಸುರ್ಪದಿಗೆ ವಹಿಸತಕ್ಕದ್ದು ಎಂದು ಲಿಂಗನಮಠ ಗ್ರಾಪಂ ಪಿಡಿಒ ಬಿ.ಪಿ.ಚಂದ್ರ “ನಮ್ಮ ಬೆಳಗಾವಿ ಇ-ವಾರ್ತೆ”ಗೆ ಮಾಹಿತಿಯನ್ನು ನೀಡಿರುತ್ತಾರೆ.

Related posts: