ಗೋಕಾಕ:ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಹುಮುಖ್ಯ : ಡಿ.ಎಸ್.ಕುರ್ಲಕಣಿ
ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಹುಮುಖ್ಯ : ಡಿ.ಎಸ್.ಕುರ್ಲಕಣಿ
ಗೋಕಾಕ ಮಾ 6: ಗುಣಮಟ್ಟದ ಶಿಕ್ಷಣದ ಜೋತೆಗೆ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬಹುಮುಖ್ಯ ಎಂದು ಗೋಕಾಕ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಸ್.ಕುರ್ಲಕಣಿ ಹೇಳಿದರು
ಮಂಗಳವಾರದಂದು ಇಲ್ಲಿಯ ಶ್ರೀ ಚನ್ನಬಸವೇಶ್ವರ (ವಿದ್ಯಾಪೀಠ) ಶಿಕ್ಷಣ ಸಂಸ್ಥೆಯಲ್ಲಿ ಸ್ಥಳೀಯ ಶಾಸಕರ ಅನುದಾನದಲ್ಲಿ ಮಂಜೂರಾದ ಬಸವ ಜಲ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನೂತನ ಶಾಲಾ ಕಟ್ಟಡದ ಭೂಮಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಶೈಕ್ಷಣಿಕವಾಗಿ ಗೋಕಾಕ ನಗರದಲ್ಲಿ ಮಕ್ಕಳಿಗೆ ಒಳ್ಳೆಯ ವಾತಾವರಣ ನಿರ್ಮಿಸವಲ್ಲಿ ಇಲ್ಲಿಯ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಪರಿಶ್ರಮ ಪಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಶೂನ್ಯ ಸಂಪಾದನ ಮಠದ ಮ.ನಿ.ಪ್ರ ಮುರಘರಾಜೇಂದ್ರ ಸ್ವಾಮೀಗಳು ಆರ್ಶಿವಚನ ನೀಡಿದರು
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಈಟಿ , ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ದೈಹಿಕ ಪರಿವಿಕ್ಷೀಕ ಸೂಲೇಗಾಂವಿ , ವಿವೇಕ ಜತ್ತಿ , ಬಸನಗೌಡ ಪಾಟೀಲ , ಮಲ್ಲಿಕಾರ್ಜುನ ರೊಟ್ಟಿ , ಅಡಿವೇಶ ಗವಿಮಠ , ಮುರಗೇಶ ಹುಕ್ಕೇರಿ , ವೀಣಾ ಹಿರೇಮಠ , ಸುಶ್ಮಾ ಪಾಟೀಲ , ಸುಧಾ ರೊಟ್ಟಿ ಹಾಗೂ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದರು.