ಮೂಡಲಗಿ:1.5 ಕೋಟಿ ರೂ ವೆಚ್ಚದ ಬ್ರಿಡ್ಜ್- ಬ್ಯಾರೇಜ್ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶಂಕುಸ್ಥಾಪನೆ
1.5 ಕೋಟಿ ರೂ ವೆಚ್ಚದ ಬ್ರಿಡ್ಜ್- ಬ್ಯಾರೇಜ್ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶಂಕುಸ್ಥಾಪನೆ
ಮೂಡಲಗಿ ಮಾ 6 : ಪಟ್ಟಣದ ಸಾರ್ವಜನಿಕರಿಗೆ ಅಗತ್ಯವಿರುವ ಇಲ್ಲಿಯ ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯು ಎರಡು ತಿಂಗಳೋಳಗೆ ಪೂರ್ಣಗೊಳ್ಳಲಿದೆ. ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು
ಮಂಗಳವಾರ ಸಂಜೆ ಇಲ್ಲಿಯ ಅಮನ ನಗರದ ಹತ್ತಿರ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯಿಂದ 1.50 ಕೋಟಿ ರೂಪಾಯಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಕಾಮಗಾರಿಯ ಅನುಷ್ಠಾನದಿಂದ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ ನಿರ್ಮಾಣದಿಂದ ಪಟ್ಟಣದ ಮತ್ತು ಸುತ್ತಮುತ್ತಲಿನ ಹಳ್ಳಿಗಳಾದ ಮುನ್ಯಾಳ, ರಂಗಾಪೂರ, ಕಮಲದಿನ್ನಿ, ಪಟ್ಟಗುಂದಿ ಸೇರಿದಂತೆ ವಿವಿಧ ಹಳ್ಳಿಗಳ ಸಾರ್ವಜನಿಕ ಸಂಚಾರ, ಸರಕು ಸಂಜಾಮುಗಳನ್ನು ತ್ವರಿತಗತಿಯಲ್ಲಿ ಸಾಗಿಸಲು ಅನುಕೂಲವಾಗುತ್ತದೆ. ಇದರಿಂದ ಸಾರ್ವಜನಿಕರು ಜನದಟ್ಟನೆಯಿಂದ ಪಾರಾಗುವ ಜೋತೆಗೆ ಸಮಯವೂ ಕೂಡಾ ಉಳಿತಾಯವಾಗುತ್ತದೆ. ಇದರಿಂದ ಸಾರ್ವಜನಿಕರ ಬಹುದಿನಗಳ ಬೇಡಿಕೆಯ ಕನಸನ್ನು ನನಸು ಮಾಡಿದಂತಾಗಿದೆ ಎಂದರು.
ಮೂಡಲಗಿ ಪಟ್ಟಣ ತಾಲೂಕು ಕೇಂದ್ರವಾಗಿರುವದರಿಂದ ಇದರ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ, ಹೊಸ ತಾಲೂಕಿನ ಅಭಿವೃದ್ದಿಗಾಗಿ ಸರಕಾರದಿಂದ ಸಾಕಷ್ಟು ಅನುದಾನ ಹರಿದು ಬರಲಿದ್ದು, ವಿವಿಧ ಇಲಾಖೆಗಳ ಅನುದಾನವನ್ನುಪಟ್ಟಣದ ಅಭಿವೃದ್ಧಿಗೆ ಸದ್ಭಳಕೆ ಮಾಡಲಾಗುವದು. ಮೂಡಲಗಿ ಹೊಸ ತಾಲೂಕನ್ನು ಮಾದರಿಯನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ ಎಂದು ಹೇಳಿದರು.
ಮೂಡಲಗಿ ಪುರಸಭೆಗೆ ನಗರೋತ್ಥಾನ ಯೋಜನೆ ಅಡಿ 7.5 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿದ್ದು. ಈ ಅನುದಾನದಲ್ಲಿ ಪಟ್ಟಣದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಶಿವಬೋಧರಂಗ ಮಠದ ಶ್ರೀ ಶ್ರೀಪಾದಬೋಧ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮುಖಂಡರಾದ ವೀರಣ್ಣಾ ಹೊಸೂರ, ನಿಂಗಪ್ಪ ಪಿರೋಜಿ, ಎಮ್.ಎಚ್.ಸೋನವಾಲ್ಕರ, ಬಿ.ಜಿ.ನಿಡಗುಂದಿ, ಆರ್.ಬಿ.ಹಂದಿಗುಂದ, ಶರೀಫ ಪಟೇಲ, ರವಿ ಸಣ್ಣಕ್ಕಿ, ಹಸನ ಥರಥರಿ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಮಲ್ಲು ಢವಳೇಶ್ವರ, ಲಕ್ಷ್ಮಣ ಹಳ್ಳೂರ, ಈರಣ್ಣಾ ಬನ್ನೂರ, ರಮೇಶ ಸಣ್ಣಕ್ಕಿ, ಶಿವು ಚಂಡಕಿ, ಮರೆಪ್ಪ ಮರೇಪ್ಪಗೋಳ, ಅನ್ವರ ನದಾಫ, ಪ್ರಭಾ ಶುಗರ್ಸ ನಿರ್ಧೇಶಕ ಮಲ್ಲಿಕಾರ್ಜುನ ಕಬ್ಬೂರ, ರಮೇಶ ಪ್ಯಾಟಿಗೌಡ್ರ, ಅಸ್ಕರ ಇನಾಮದಾರ, ಹನಮಂತ ತೇರದಾಳ, ಮಾದೇವ ಶೇಕ್ಕಿ, ಮುತ್ತುರಾಜ ಕುಳ್ಳೂರ, ಸಣ್ಣ ನೀರಾವರಿ ಇಲಾಖೆಯ ಜೆ.ಇ ಜೈಭೀಮ ಮುಂತಾದವರು ಉಪಸ್ಥಿತರಿದ್ದರು.
ವರದಿ: ಎಮ್.ಎಲ್.ಮೀಶಿ (ಮೂಡಲಗಿ)