ಗೋಕಾಕ:ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರಸಭೆ ವತಿಯಿಂದ ಜಾಥಾ
ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರಸಭೆ ವತಿಯಿಂದ ಜಾಥಾ
ಗೋಕಾಕ ಮಾ 10 : ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರಸಭೆ ಆಶ್ರಯದಲ್ಲಿ ಜಾಥಾ ಶುಕ್ರವಾರದಂದು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಭಾರತದ ಚುನಾವನಾ ಆಯೋಗದ ನಿರ್ದೇಶನದಂತೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವದ ಹಾಗೂ ವಿದ್ಯುನ್ಮಾನ ಮತಯಂತ್ರ ಮತ್ತು ವ್ಹಿ.ವ್ಹಿ.ಪ್ಯಾಟ್ ಬಳಸಿ ನಿಮ್ಮ ಮತವನ್ನು ಚಲಾಯಿಸುವುದು ಹೇಗೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕುರಿತು ಜಾಥಾ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭವಾಗಿ ಕುರುಬರ ಫೂಲ, ಕೊಳಚೆ ಪ್ರದೇಶದಲ್ಲಿ ಹಾಗೂ ನಗರದ ವಿವಿಧ ಓಣಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಜಾಥಾದಲ್ಲಿ ಜ್ಞಾನ ಭಾರತಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ನಗರಸಭೆಯ ಪೌರಾಯುಕ್ತರಾದ ವ್ಹಿ.ಸಿ.ಚಿನ್ನಪ್ಪಗೌಡರ, ಕಂದಾಯ ಅಧಿಕಾರಿ ಶಿವಕುಮಾರ ಹಳ್ಳೂರ, ಕಚೇರಿ ವ್ಯವಸ್ಥಾಪಕ ಎಂ. ಎಚ್. ಅತ್ತಾರ, ಹಿರಿಯ ಆರೋಗ್ಯ ನಿರೀಕ್ಷಕ ಕುಮಾರ ಕೋಳಿ ಸಿಬ್ಬಂದಿ ಪಾಲ್ಗೊಂಡಿದ್ದರು.