RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ರೈತರು ರೇಷ್ಮೆ ಬೆಳೆಯಿಂದ ಒಂದು ಎಕರೆ ಜಮೀನನಲ್ಲಿ 4ರಿಂದ 5 ಲಕ್ಷ ರೂ.ಗಳವರೆಗೆ ವಾರ್ಷಿಕ ಆದಾಯ ಪಡೆಯಬಹುದು : ಉಪ ನಿರ್ದೇಶಕ ಎನ್.ಡಿ.ನಾಯಕ

ಗೋಕಾಕ:ರೈತರು ರೇಷ್ಮೆ ಬೆಳೆಯಿಂದ ಒಂದು ಎಕರೆ ಜಮೀನನಲ್ಲಿ 4ರಿಂದ 5 ಲಕ್ಷ ರೂ.ಗಳವರೆಗೆ ವಾರ್ಷಿಕ ಆದಾಯ ಪಡೆಯಬಹುದು : ಉಪ ನಿರ್ದೇಶಕ ಎನ್.ಡಿ.ನಾಯಕ 

ರೇಷ್ಮೆ ಇಲಾಖೆಯಿಂದ ರೈತರಿಗೆ ರೇಷ್ಮೆ ಸಾಕಾಣಿಕೆ ಮನೆಗೆ ಸಹಾಯಧನದ ಚೆಕ್‍ನ್ನು ತಾ.ಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ ವಿತರಿಸಿದರು.

ರೈತರು ರೇಷ್ಮೆ ಬೆಳೆಯಿಂದ ಒಂದು ಎಕರೆ ಜಮೀನನಲ್ಲಿ 4ರಿಂದ 5 ಲಕ್ಷ ರೂ.ಗಳವರೆಗೆ ವಾರ್ಷಿಕ ಆದಾಯ ಪಡೆಯಬಹುದು : ಉಪ ನಿರ್ದೇಶಕ ಎನ್.ಡಿ.ನಾಯಕ

ಗೋಕಾಕ ಮಾ 16 : ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ರೇಷ್ಮೆ ಬೆಳೆಯಬೇಕು. ರೇಷ್ಮೆ ಸಾಕಾಣಿಕೆಯಿಂದ ಅಧಿಕ ಲಾಭವನ್ನು ಪಡೆಯಬಹುದು ಎಂದು ಬೆಳಗಾವಿ ಜಿ.ಪಂ ರೇಷ್ಮೆ ಉಪ ನಿರ್ದೇಶಕ ಎನ್.ಡಿ.ನಾಯಕ ಹೇಳಿದರು.
ಅವರು ಶುಕ್ರವಾರದಂದು ನಗರದ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರದ ಆವರಣದಲ್ಲಿಜರುಗಿದ ತಾಲೂಕಾ ಮಟ್ಟದ ರೇಷ್ಮೆ ಬೆಳೆಗಾರರ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.
ರೈತರು ರೇಷ್ಮೆ ಬೆಳೆ ಮಾಡುವುದರ ಮೂಲಕ ಒಂದು ಎಕರೆ ಜಮೀನನಲ್ಲಿ 4ರಿಂದ 5 ಲಕ್ಷ ರೂ.ಗಳವರೆಗೆ ವಾರ್ಷಿಕ ಆದಾಯ ಪಡೆಯಬಹುದು. ರೇಷ್ಮೆ ಸಾಕಾಣಿಕೆಗೆ ಮತ್ತು ಉಪಕರಣಗಳಿಗೆ ಸರ್ಕಾರದಿಂದ ಸಹಾಯ ಸಿಗುತ್ತದೆ ಅದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ರೇಷ್ಮೆ ಕೃಷಿಯನ್ನು ಚನ್ನಾಗಿ ಮಾಡಿ ಹೊಸಬರಿಗೂ ಅದರ ಬಗ್ಗೆ ಮಾಹಿತಿ ನೀಡಬೇಕು. ಮುಂಬರುವ ದಿನಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಚಂದ್ರಿಕೆ ಹಾಗೂ ಔಷಧಿಗಳನ್ನು ಸಂಪೂರ್ಣವಾಗಿ ಒದಗಿಸುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಪ್ರತಿಯೊಬ್ಬ ರೈತರು ರೇಷ್ಮೆ ಬೆಳೆಯಲಿಕ್ಕೆ ಹನಿ ನೀರಾವರಿ ಅತೀ ಮುಖ್ಯವಾಗಿದೆ. ಹನಿ ನೀರಾವರಿಗೆ ರೇಷ್ಮೆ ಇಲಾಖೆಯಿಂದ ಸಬ್ಸಿಡಿ ದೊರೆಯುತ್ತಿದೆ. ರೈತರು ಗುಣಮಟ್ಟದ ರೇಷ್ಮೆ ಬೆಳೆಯನ್ನು ಬೆಳೆಯುವ ಮೂಲಕ ಒಂದು ಎಕರೆ ಜಮೀನಿನಲ್ಲಿ ವರ್ಷಕ್ಕೆ 100 ಕೆಜಿ ರೇಷ್ಮೆಯನ್ನು ತೆಗೆಯಬಹುದು. ತಾಂತ್ರಿಕತೆಯಿಂದ ರೇಷ್ಮೆಯ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳನ್ನು ಸಂಪರ್ಕಿಸಿ ಉತ್ತಮ ರೇಷ್ಮೆ ಬೆಳೆಯನ್ನು ಬೆಳೆಯಬೇಕು. ರೇಷ್ಮೆ ಕೃಷಿಯಲ್ಲಿ ಹೆಚ್ಚಾಗಿ ಮಹಿಳಯರು ದುಡಿಯುವ ಮೂಲಕ ರೇಷ್ಮೆ ಬೆಳೆಗೆ ಹೆಚ್ಚಿನ ಮಹತ್ವ ಮೊದಲಿನಿಂದಲೂ ಬಂದಿದೆ. ರೇಷ್ಮೆ ಬೆಳೆಯುವದನ್ನು ರೈತರು ಅಳವಡಿಸಿಕೊಂಡು ಸರ್ಕಾರದ ಲಾಭವನ್ನು ಪಡೆಯಬೇಕು ಎಂದರು.
ಕಾರ್ಯಾಗಾರವನ್ನು ತಾ.ಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ರೇಷ್ಮೆ ಇಲಾಖೆಯಿಂದ ರೈತರಿಗೆ ರೇಷ್ಮೆ ಸಾಕಾಣಿಕೆ ಮನೆಗೆ ಸಹಾಯಧನದ ಚೆಕ್‍ಗಳನ್ನು ವಿತರಿಸಲಾಯಿತು.
ವೇದಿಕೆ ಮೇಲೆ ರಾಜ್ಯ ಘಟಕದ ರೇಷ್ಮೆ ಸಹಾಯಕ ನಿರ್ದೇಶಕ ಎಸ್.ಬಿ ಹುಲ್ಲೋಳಿ, ಉಪನ್ಯಾಸಕರಾದ ನಿವೃತ್ತ ರೇಷ್ಮೆ ಜಂಟಿ ನಿರ್ದೇಶಕ ಜಿ.ಆರ್.ಹುಲಕುಂದ, ನಿವೃತ್ತ ರೇಷ್ಮೆ ಉಪ ನಿರ್ದೇಶಕ ಎಂ.ಸಿ.ಉಪ್ಪಾರ, ಶಂಭುಲಿಂಗ ಮುಕ್ಕನ್ನವರ, ಮುತ್ತುರಾಜ ತಾಂವಶಿ, ಪ್ರಗತಿಪರ ರೈತ ಹೊಳೆಯಾಚೆ, ವಲಯಾಧಿಕಾರಿಗಳಾದ ಎಂ.ಎಚ್.ಮುಚಖಂಡಿ ಪಿ.ಎಲ್.ಕೊಳವಿ, ಯು.ಎಸ್.ಕಂಕಾಳೆ, ಪಿ.ಆರ್.ದನ್ಯಾಳಮಠ ಇದ್ದರು. ರೇಷ್ಮೆ ವಿಸ್ತರಣಾಧಿಕಾರಿ ಆರ್.ಡಿ.ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಿ.ಎಸ್.ಹಿರೇಮಠ ಸ್ವಾಗತಿಸಿ, ನಿರೂಪಿಸಿದರು.

Related posts: