ಗೋಕಾಕ:ಸಚಿವರ ಮಾರ್ಗದರ್ಶನದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ : ಶ್ರೀಮತಿ ಜಮಖಂಡಿ
ಸಚಿವರ ಮಾರ್ಗದರ್ಶನದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ : ಶ್ರೀಮತಿ ಜಮಖಂಡಿ
ಗೋಕಾಕ ಮಾ 19 ;- ಜನರ ಆಶೀರ್ವಾದ ಹಾಗೂ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿರುವುದಾಗಿ ನಗರಸಭೆ ಸದಸ್ಯೆ ಚಂದ್ರವ್ವಾ ಶಿವಲಿಂಗಪ್ಪಾ ಜಮಖಂಡಿ ಹೇಳಿದರು.
ಅವರು, ಭಾನುವಾರದಂದು ಸಂಜೆ ಇಲ್ಲಿಯ ಸೋಮವಾರ ಪೇಟೆಯಲ್ಲಿರುವ ಅಂಭಾಭವಾನಿ ದೇವಸ್ಥಾನದಲ್ಲಿ ನಗರದ 29ನೇ ವಾರ್ಡಿನ ಸಾರ್ವಜನಿಕರು ನೀಡಿದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ನಗರದ ಅಭೀವೃದ್ಧಿಗಾಗಿ ಸಚಿವರು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಆ ಯೋಜನೆಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳೋಣ. ಅಭಿವೃದ್ಧಿ ಕಾರ್ಯಗಳಿಗೆ ನಿಮ್ಮೆಲ್ಲರ ಸಹಕಾರ ಸದಾ ಇರಲಿ. ಆತ್ಮೀಯವಾಗಿ ನನ್ನನ್ನು ಸನ್ಮಾನಿಸಿ ಆಶೀರ್ವದಿಸುತ್ತಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಚಂದ್ರವ್ವಾ ಜಮಖಂಡಿ ಅವರ ಪುತ್ರ ವಾರ್ಡನ ಜನರ ಸಮಸ್ಯೆಗೆ ಪ್ರೀತಿಯಿಂದ ಸ್ಪಂದಿಸುತ್ತಿರುವ ಮುತ್ತುರಾಜ ಜಮಖಂಡಿ ಅವರನ್ನೂ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಈರಯ್ಯಾ ಹಿರೇಮಠ, ಈಶ್ವರಪ್ಪ ಮಟ್ಟಿಕಲ್ಲಿ, ಮಲ್ಲಿಕಾರ್ಜುನ ಆಲತಗಿ, ಕಲ್ಲಪ್ಪ ಭೂಮನ್ನವರ, ಬಸವರಾಜ ದೇವರಮನಿ, ಯಲ್ಲಪ್ಪ ಮಕ್ಕಳಗೇರಿ, ಅಮೀತ ಆಲತಗಿ, ಸಿದ್ದಪ್ಪ ಖಾನಪ್ಪನವರ, ಸಣ್ಣಪ್ಪಾ ಮಟ್ಟಿಕಲ್ಲಿ, ಸುನೀಲ ದೇಶನೂರ, ರಾಜು ಗೋಸಾವಿ ಸೇರಿದಂತೆ ವಾರ್ಡನ ಅನೇಕ ಮತದಾರರು ಇದ್ದರು.