ಗೋಕಾಕ:ಪೊಲೀಸ ಪೇದೆಯ ಅಮಾನತಿಗೆ ಆಗ್ರಹಿಸಿ ಮುಂದುವರೆದ ವಕೀಲರ ಪ್ರತಿಭಟನೆ : ಸಂಸದ , ಶಾಸಕರ ಸಾಥ್
ಪೊಲೀಸ ಪೇದೆಯ ಅಮಾನತಿಗೆ ಆಗ್ರಹಿಸಿ ಮುಂದುವರೆದ ವಕೀಲರ ಪ್ರತಿಭಟನೆ : ಸಂಸದ , ಶಾಸಕರ ಸಾಥ್
ಗೋಕಾಕ ಮಾ 20 : ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಪೊಲೀಸ ಪೇದೆಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ವಕೀಲರ ಸಂಘದ ಸದಸ್ಯರು ಡಿವಾಯ್ಎಸಪಿ ಕಛೇರಿ ಎದುರು ಧರಣಿ ಸತ್ಯಾಗ್ರಹ ಮುಂದುವರೆಸಿದ್ದಾರೆ
ಮಂಗಳವಾರದಂದು ಮುಂಜಾನೆ ನ್ಯಾಯಾಲಯದ ಆವರಣದಲ್ಲಿ ಸೇರಿದ ಸಂಘದ ಸದಸ್ಯರು ಪೊಲೀಸರ ವಿರುದ್ಧ ಘೋಷಣೆಗಳನ್ನು ತಮ್ಮ ಆಕ್ರೋಶ ವ್ಯಕ್ತಪಡಿಸಿ ನಗರದ ಡಿವಾಯ್ಎಸಪಿ ಕಛೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕಛೇರಿ ಎದುರು ತಪ್ಪಿಸ್ಥ ಪೊಲೀಸರ ಮೇಲೆ ಕ್ರಮ ಜರುಗಿಸುವವರೆಗೆ ಧರಣಿ ಸತ್ಯಾಗ್ರಹ ಮುಂದುವರೆಸಿದ್ದಾರೆ
ನಗರದಲ್ಲಿ ಇಂದು ನಡೆದ ಬಿಜೆಪಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂಸದ ಸುರೇಶ ಅಂಗಡಿ ಮತ್ತು ವಿಧಾನ ಪರಿಷತ್ ಸದಸ್ಯ ಮಂಹಾತೇಶ ಕವಟಗಿಮಠ ಅವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ವಕೀಲರಿಗೆ ಬೆಂಬಲ ಸೂಚಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ ಯಾರ ಒತ್ತಡಕ್ಕೆ ಒಳಗಾಗದೆ ತಪ್ಪಿಸ್ಥರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ಹೇಳಿದರು
ಧರಣಿ ಸತ್ಯಾಗ್ರಹದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ , ವಿಷ್ಣು ಲಾತೂರ , ಗುರು ಪೂಜೇರಿ , ಆನಂದ ಪಾಟೀಲ , ಶಫೀ ಜಮಾದಾರ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು