RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲು ಶ್ರಮಿಸಿ : ಮುಖಂಡರಿಗೆ ಸಂಸದ ಸಿ.ಆರ್.ಪಾಟೀಲ ಕರೆ

ಗೋಕಾಕ:ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲು ಶ್ರಮಿಸಿ : ಮುಖಂಡರಿಗೆ ಸಂಸದ ಸಿ.ಆರ್.ಪಾಟೀಲ ಕರೆ 

ನಗರದ ‘ಜ್ಞಾನಮಂದಿರ’ ಆಧ್ಯಾತ್ಮ ಕೇಂದ್ರದ ಸಭಾಂಗಣದಲ್ಲಿ ಬಿ.ಜೆ.ಪಿ. ಪಕ್ಷದ ಬೂತ್ ಸಮೀತಿಯ ಅಧ್ಯಕ್ಷರು, ನವಶಕ್ತಿ ಸಂಘಟನೆಯ ಪ್ರಮುಖರು ಮತ್ತು ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ಚುನಾವಣಾ ಸಂಘಟನೆಯ ಕುರಿತು ವಿಸ್ತಂತವಾಗಿ ಚರ್ಚಿಸುತ್ತಿರುವುದು

ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲು ಶ್ರಮಿಸಿ : ಮುಖಂಡರಿಗೆ ಸಂಸದ ಸಿ.ಆರ್.ಪಾಟೀಲ ಕರೆ

ಗೋಕಾಕ ಮಾ, 20 :- ಬಿ.ಜೆ.ಪಿ. ಪಕ್ಷದ ಸಂಘಟನೆಯ ಸ್ವರೂಪಕ್ಕೆ ಪೂರಕವಾಗಿ ಬೂತ್‍ಮಟ್ಟದಲ್ಲಿ ಕಾರ್ಯ ಮಾಡುವ ಮೂಲಕ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸುವಂತೆ ಮಾಡಲು ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರಿಗೆ ಬಿ.ಜೆ.ಪಿ. ಪಕ್ಷದ ಗೋಕಾಕ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಗುಜರಾತ ರಾಜ್ಯದ ಲೋಕಸಭಾ ಸದಸ್ಯ ಸಿ.ಆರ್.ಪಾಟೀಲ ಕರೆ ನೀಡಿದರು.
ನಗರದ ‘ಜ್ಞಾನಮಂದಿರ’ ಆಧ್ಯಾತ್ಮ ಕೇಂದ್ರದ ಸಭಾಂಗಣದಲ್ಲಿ ಬಿ.ಜೆ.ಪಿ. ಪಕ್ಷದ ಬೂತ್ ಸಮೀತಿಯ ಅಧ್ಯಕ್ಷರು, ನವಶಕ್ತಿ ಸಂಘಟನೆಯ ಪ್ರಮುಖರು ಮತ್ತು ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ಚುನಾವಣಾ ಸಂಘಟನೆಯ ಕುರಿತು ವಿಸ್ತøತವಾಗಿ ಚರ್ಚಿಸಿದ ಅವರು ಮತದಾರರನ್ನು ಸೆಳೆಯಲು ಅನೇಕ ಹೊಸ ಕಾರ್ಯತಂತ್ರಗಳನ್ನು ತಿಳಿಸಿ ಅದಕ್ಕೆ ಪೂರಕವಾಗಿ ಕೈಕೊಳ್ಳಬೇಕಾದ ಕ್ರಮಗಳನ್ನು ಸವಿಸ್ತಾರವಾಗಿ ಹೇಳಿದರು.
ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಮಾತನಾಡಿ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಭಾವನೆ ಬದಲಾವಣೆಗೆ ಪೂರಕವಾಗಿದ್ದು ಕಾರ್ಯಕರ್ತರು ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಿಂದ ಸ್ವೀಕರಿಸಿ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ಚುನಾವಣೆಯಲ್ಲಿ ಗೆಲ್ಲಲು ಚುನಾವಣಾ ಉಸ್ತುವಾರಿ ಲೋಕಸಭಾ ಸದಸ್ಯ ಸಿ. ಆರ್. ಪಾಟೀಲರವರು ನೀಡಿರುವ ಮಾರ್ಗಸೂಚಿಗಳು ನಿರೀಕ್ಷಿತ ಪರಿಣಾಮವನ್ನು ನೀಡುವಲ್ಲಿ ಎರಡು ಮಾತಿಲ್ಲ ಎಂದು ಆತ್ಮವಿಶ್ವಾಸದಿಂದ ಮಾತನಾಡಿದರು.
ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಮಾತನಾಡಿ ಈ ಹಿಂದೆ ಜರುಗಿರುವ ಬಹುತೇಕ ಗೋಕಾಕ ವಿಧಾನಸಭಾ ಕ್ಷೇತ್ರದ ಚುನಾವಣೆಗಳು ಹಣ ಮತ್ತು ತೋಳ್ಬಲಕ್ಕೆ ಶರಣಾಗಿದ್ದು, ನ್ಯಾಯಸಮ್ಮತ ಚುನಾವಣೆಗಳು ಜರುಗಿಲ್ಲ. ಪಕ್ಷದ ಎಲ್ಲೆಯನ್ನು ಮೀರಿ ತಾಲ್ಲೂಕಿನಲ್ಲಿ ಕುಟುಂಬ ಹೊಂದಾಣಿಕೆಯ ರಾಜಕಾರಣದಿಂದ ಚುನಾವಣೆಗಳನ್ನು ಗೆಲ್ಲಲಾಗುತ್ತಿದೆ. ಇಂತಹ ವ್ಯವಸ್ಥೆಯನ್ನು ನಿಗ್ರಹಿಸುವುದರ ಜೊತೆಗೆ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಜರುಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಮತ್ತು ಸರ್ಕಾರವನ್ನು ಒತ್ತಾಯಪೂರಕವಾಗಿ ಕೋರಲಾಗಿದೆ. ಇದಕ್ಕೆ ಚುನಾವಣಾ ಆಯೋಗ ಸಹ ಸಹಮತ ವ್ಯಕ್ತಪಡಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ಗೂಳಪ್ಪಾ ಹೊಸಮನಿ, ಚುನಾವಣಾ ಸಹ-ಉಸ್ತುವಾರಿ ಎಸ್.ಆರ್.ಮುತಾಲಿಕ, ಗ್ರಾಮೀಣ ಅಧ್ಯಕ್ಷ ವಿರುಪಾಕ್ಷ ಯಲಿಗಾರ, ಜಿಲ್ಲಾ ಪದಾಧಿಕಾರಿಗಳಾದ ಉಮೇಶ ನಿರ್ವಾಣಿ, ವಾಸುದೇವ ಸವತಿಕಾಯ, ಶ್ರೀದೇವಿ ತಡಕೋಡ, ಅಡಿವೆಪ್ಪ ಮರೆಲಿಂಗಣ್ಣವರ, ಈರಣ್ಣಾ ಅಂಗಡಿ, ಬಸವರಾಜ ಹಿರೇಮಠ, ಸುರೇಶ ಅಕ್ಕಿ, ನಾಗಲಿಂಗ ಪೋತದಾರ, ಲಕ್ಕಪ್ಪ ತಶೀಲದಾರ, ಬಸವರಾಜ ಹುಳ್ಳೇರ, ರಾಮಪ್ಪಾ ದೇಮಣ್ಣವರ, ಪ್ರಕಾಶ ಬಾಗೋಜಿ, ಯಲ್ಲಪ್ಪಾ ಹುಕ್ಕೇರಿ, ರಾಜುಗೌಡಾ ನಿರ್ವಾಣಿ, ರಾಜು ಪಾಟೀಲ, ಶಿವಪ್ಪಾ ದಳವಾಯಿ, ಮಹಾಂತೇಶ ಜನಮಟ್ಟಿ, ಪ್ರೇಮಾ ಚಿಕ್ಕೋಡಿ, ಶಕೀಲ ದಾರವಾಡಕರ, ಚಿದಾನಂದ ದೇಮಶೆಟ್ಟಿ, ಸುಭಾಷ ಕವಲಗಿ, ಮಲ್ಲಪ್ಪಾ ಕೌಜಲಗಿ ಮುಂತಾದ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಭಾಸ ಕವಲಗಿ, ಚನ್ನಬಸು ರುದ್ರಾಪೂರ, ಮಹೇಶಗೌಡ ಪಾಟೀಲ, ಯಲ್ಲಪ್ಪ ಹುಕ್ಕೇರಿ, ನಿಂಗಪ್ಪ ಅಮ್ಮಿನಭಾಂವಿ, ಅಡಿವೆಪ್ಪಾ ಪಾಟೀಲ, ಬಸಗೊಂಡ ಶಿರಗಾಂವಿ, ಹಾಲಪ್ಪಾP ಕರಿಗಾರ, ಸದಾಶಿವ ಆಲೋಶಿ, ಉಳವೇಶ ಗಿಗ್ಗಿ, ಬಸಪ್ಪಾ ವಣ್ಣೂರ, ಶೇಖರ ಹೊಸೂರ, ಮಾರುತಿ ಬೆಳವಿ, ಚಂಧ್ರಗೌಡ ಪಾಟೀಲ, ಮಲ್ಲಿಕಾರ್ಜುನ ತಿಮ್ಮವ್ವಗೋಳ, ಕಾಡಯ್ಯ ಮಠಪತಿ, ಬಸಲಿಂಗ ಕೊಳದೂರ, ಶಿವಪ್ಪಾ ದಳವಾಯಿ, ಸುಕಾನಂದ ಹುಚ್ಚನಟ್ಟಿ, ಲಕ್ಷ್ಮಣ ನಾರಿ, ಬಸವರಾಜ ಹೊಸಮನಿ, ಸಿದ್ದಪ್ಪ ಡೊಳ್ಳಪ್ಪಗೊಳ, ಬಸವರಾಜ ಆಶಿ ಮುಂತಾದವರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: