RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಲಕ್ಷ್ಮೀ ವಡೇಯರ ಅವರಿಗೆ ಕರುನಾಡು ಕಲ್ಪವೃಕ್ಷ ಪ್ರಶಸ್ತಿ

ಗೋಕಾಕ:ಲಕ್ಷ್ಮೀ ವಡೇಯರ ಅವರಿಗೆ ಕರುನಾಡು ಕಲ್ಪವೃಕ್ಷ ಪ್ರಶಸ್ತಿ 

ಧುಳಗನವಾಡಿ ರಂಗಕಲಾ ಶ್ರೀ ಗ್ರಾಮೀಣ ಸೇವಾ ಸಂಘದವರು ಕೊಡಮಾಡುವ ಪ್ರಸಕ್ತ ಸಾಲಿನ ಕರುನಾಡು ಕಲ್ಪವೃಕ್ಷ ಗೌರವ ಪ್ರಶಸ್ತಿಯನ್ನು ಗೋಕಾಕ ತಾಲೂಕಿನ ಮಮದಾಪೂರದ ನಾಟ್ಯಾಂಜಲಿ ಕಲಾ ಕೇಂದ್ರದ ಅಧ್ಯಕ್ಷೆ ಲಕ್ಷ್ಮೀ ಸುರೇಶ ವಡೇಯರ ಇವರಿಗೆ ನೀಡಿ ಗೌರವಿಸುತ್ತಿರುವದು.

ಲಕ್ಷ್ಮೀ ವಡೇಯರ ಅವರಿಗೆ ಕರುನಾಡು ಕಲ್ಪವೃಕ್ಷ ಪ್ರಶಸ್ತಿ

ಗೋಕಾಕ:(ಬೆಟಗೇರಿ )ಮಾ 22 : ಭಾರತ ಸರ್ಕಾರದಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಸಂಘ ಪ್ರಶಸ್ತಿ ಪಡೆದ ಚಿಕ್ಕೋಡಿ ತಾಲೂಕಿನ ಧುಳಗನವಾಡಿ ರಂಗಕಲಾ ಶ್ರೀ ಗ್ರಾಮೀಣ ಸೇವಾ ಸಂಘ ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕಂತಿ ನಿರ್ದೇಶನಾಲಯ ಇವರ ಸಹಯೋಗದಲ್ಲಿ ಇತ್ತೀಚಿಗೆ ಕಮತೇನಟ್ಟಿ ಗ್ರಾಮದಲ್ಲಿ ನಡೆದ ಯುಗಾದಿ ಜನಪದ ಕಲಾ ಸಂಭ್ರಮ ಸಮಾರಂಭದಲ್ಲಿ ಧುಳಗನವಾಡಿ ರಂಗಕಲಾ ಶ್ರೀ ಗ್ರಾಮೀಣ ಸೇವಾ ಸಂಘದವರು ಕೊಡಮಾಡುವ ಪ್ರಸಕ್ತ ಸಾಲಿನ ಕರುನಾಡು ಕಲ್ಪವೃಕ್ಷ ಗೌರವ ಪ್ರಶಸ್ತಿಯನ್ನು ಗೋಕಾಕ ತಾಲೂಕಿನ ಮಮದಾಪೂರದ ನಾಟ್ಯಾಂಜಲಿ ಕಲಾ ಕೇಂದ್ರದ ಅಧ್ಯಕ್ಷೆ ಲಕ್ಷ್ಮೀ ಸುರೇಶ ವಡೇಯರ ಇವರಿಗೆ ನೀಡಿ ಗೌರವಿಸಿದ್ದಾರೆ.
ಧುಳಗನವಾಡಿ ರಂಗಕಲಾ ಶ್ರೀ ಗ್ರಾಮೀಣ ಸೇವಾ ಸಂಘದ ಅಧ್ಯಕ್ಷೆ ಸುಜಾತಾ ಮಗದುಮ್ಮ, ಕಮತೇನಟ್ಟಿ ಶ್ರೀ ಪ್ರಭುಲಿಂಗೇಶ್ವರ ಸಂಸ್ಥಾನಮಠದ ಗುರುದೇವ ದೇವರು, ಬೆಳಗಾವಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಸೇರಿದಂತೆ ಗಣ್ಯರು, ಕಲಾ ವಿದ್ವಾಂಸರು, ಮತ್ತೀತರರು ಉಪಸ್ಥಿತರಿದ್ದರು.

ಲಕ್ಷ್ಮೀಯ ಅವಿರತ ನೃತ್ಯ ಸೇವೆ: ಕನ್ನಡ ನಾಡಿನ ನಾಡು, ನುಡಿ ಸೇವೆಯ ಜೋತೆಗೆ ಭರತನಾಟ್ಯ (ಶಾಸ್ತ್ರೀಯ) ನೃತ್ಯ ಕಲಾ ಕ್ಷೇತ್ರದಲ್ಲಿ ಸುಮಾರು ಒಂದು ದಶಕ ಕಾಲ ತಮ್ಮನ್ನು ತಾವು ತೋಡಗಿಸಿಕೊಂಡು, ಕಲಾ ಸಂಸ್ಕøತಿ ಉಳಿಸಲು ಹಾಗೂ ತಮ್ಮಲ್ಲಿರುವ ನೃತ್ಯ ಕಲಾ ಸುಪ್ತ ಪ್ರತಿಭೆಯನ್ನು ಇಂದಿನ ಯುವ ಪೀಳಿಗಿಗೆ ಧಾರೆ ಎರೆಯುತ್ತಾ ಅವಿರತ ಸೇವೆ ಸಲ್ಲಿಸುತ್ತೀರುವ ಲಕ್ಷ್ಮೀ ವಡೇಯರ ಅವರು ಗೋಕಾಕ ಮತ್ತು ಮಮದಾಪೂರದಲ್ಲಿ ಭರತನಾಟ್ಯ ಶಾಲೆ ತೆರೆದು ಮಕ್ಕಳಿಗೆ ನೃತ್ಯ ಕಲಾ ಪ್ರಕಾರ ಸಲೀಸಾಗಿ ಹೇಳಿ ಕೊಡುವ ಅವರು ಸ್ವಂತ ಅವರೇ ವಿವಿಧ ಪ್ರಕಾರದ ಭರತ ನೃತ್ಯ ಮಾಡುತ್ತಿದ್ದರೆ ನೊಡುಗರು ಹುಬ್ಬೆರೆಸುವಂತೆ ಮನರಂಜಿಸುತ್ತಾರೆ.
ಅವರ ಕಲಾ ಸಾಧನೆ ಪರಿಗಣಿಸಿ ರಾಜ್ಯ ಮಟ್ಟದ ಭಾವೈಕತಾ ಪ್ರಶಸ್ತಿ, ಸತೀಶ ಶುಗರ್ಸ್ ಸಾಧನಾ ಪುರಸ್ಕಾರ, ಭರತನಾಟ್ಯ ಪ್ರವೀಣೆ, ಕಲಾಶ್ರೀ, ನಾಟ್ಯ ಮಯೂರಿ, ಕಲಾ ರತ್ನ, ಸೇರಿದಂತೆ ರಾಜ್ಯ, ಜಿಲ್ಲಾ, ತಾಲೂಕು, ವಲಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರ ಭರತನಾಟ್ಯ ಕಲಾ ಪ್ರಕಾರದ ಪ್ರತಿಭೆ, ಪಡೆದ ಪ್ರಶಸ್ತಿಗಳ ಸಾಧನೆಯನ್ನು ಹುಟ್ಟೂರು ಗೋಕಾಕ ತಾಲೂಕಿನ ಮಮದಾಪೂರ ಸೇರಿದಂತೆ ಗೋಕಾಕ ತಾಲೂಕಿನ ಭರತನಾಟ್ಯ ಪಾರಂಗತರು ಶ್ಲಾಘನೆ ಮಾಡಿ, ಇವರ ನೃತ್ಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts: