RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಎ.ಆರ್.ಟಿ.ಓ ಕಛೇರಿ ಸ್ಥಳಾಂತರಕ್ಕೆ ವಿರೋಧ: ರೈತ ಸಂಘದಿಂದ ಪ್ರತಿಭಟನೆ

ಗೋಕಾಕ:ಎ.ಆರ್.ಟಿ.ಓ ಕಛೇರಿ ಸ್ಥಳಾಂತರಕ್ಕೆ ವಿರೋಧ: ರೈತ ಸಂಘದಿಂದ ಪ್ರತಿಭಟನೆ 

ಎಆರ್‍ಟಿಓ ಕಛೇರಿಯನ್ನು ಬೇರೆಡೆ ಸ್ಥಳಾಂತರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ಮಾಕ್ಸಿಕ್ಯಾಬ್ ಮಾಲಕರ ಹಾಗೂ ಚಾಲಕರ ಸಂಘದ ವತಿಯಿಂದ ಪ್ರತಿಭಟಿಸಿ ಸಾರಿಗೆ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದರು.

 ಎ.ಆರ್.ಟಿ.ಓ   ಕಛೇರಿ ಸ್ಥಳಾಂತರಕ್ಕೆ ವಿರೋಧ: ರೈತ ಸಂಘದಿಂದ ಪ್ರತಿಭಟನೆ

ಗೋಕಾಕ ಮಾ 23 : ಎಆರ್‍ಟಿಓ ಕಛೇರಿಯನ್ನು ಬೇರೆಡೆ ಸ್ಥಳಾಂತರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ಮಾಕ್ಸಿಕ್ಯಾಬ್ ಮಾಲಕರ ಹಾಗೂ ಚಾಲಕರ ಸಂಘದ ವತಿಯಿಂದ ಪ್ರತಿಭಟಿಸಿ ಸಾರಿಗೆ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಗುರುವಾರದಂದು ಎಆರ್‍ಟಿಒ ಕಛೇರಿ ಮುಂದೆ ಸೇರಿದ ರೈತ ಸಂಘದ ಕಾರ್ಯಕರ್ತರು ಹಾಗೂ ಮಾಕ್ಸಿಕ್ಯಾಬ್ ಮಾಲಕರು ಹಾಗೂ ಚಾಲಕರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈಗಿರುವ ಎಆರ್‍ಟಿಓ ಕಛೇರಿ ನಗರಕ್ಕೆ ಸಮೀಪದಲ್ಲಿದೆ. ಒಳ್ಳೆಯ ಮೈದಾನವನ್ನು ಹೊಂದಿದೆಯಲ್ಲದೇ ಆರ್‍ಸಿಸಿ ಕಟ್ಟಡವನ್ನು ಹೊಂದಿದ್ದು, ಕಛೇರಿ ಸುತ್ತಮುತ್ತ ಸುಸಜ್ಜಿತ ಅಂಗಡಿಗಳಿವೆ. ತಾಲೂಕಿನ ಎಲ್ಲ ಹಳ್ಳಿಯ ಜನತೆಗೆ ಹೋಗಿ ಬರಲು ವಾಹನಗಳ ಸೌಕರ್ಯವು ಕೂಡಾ ಸಮೀಪದಲ್ಲಿಯೇ ಇದ್ದು ರೈತರಿಗೆ ಅನುಕೂಲಕರವಾಗಿದೆ. ಇಂತಹ ವ್ಯವಸ್ಥಿತವಾದ ಪ್ರದೇಶವನ್ನು ಬಿಟ್ಟು ಎಆರಟಿಒ ಅಧಿಕಾರಿ ಯಾವುದೇ ಲಾಬಿಗೆ ಮಣಿದು ಕಛೇರಿಯನ್ನು ಸ್ಥಳಾಂತರಿಸುತ್ತಿರುವುದು ಯೋಗ್ಯವಲ್ಲ. ಒಂದು ವೇಳೆ ಸ್ಥಳಾಂತರಿಸಿದರೇ ರೈತ ಸಂಘದಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ, ಹಸಿರು ಸೇನೆ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ, ಮುತ್ತೆಪ್ಪ ಬಾಗನ್ನವರ, ಮಂಜುನಾಥ ಪೂಜೇರಿ, ಸಿದ್ದಪ್ಪ ತಪಸಿ, ಬಸಪ್ಪ ನಾಯಿಕ, ಸಿದ್ದಲಿಂಗ ಪೂಜೇರಿ, ಗೋಪಾಲ ಕುಕನೂರ, ಜಗದೀಶ ಅಗಸರ, ಶಬ್ಬೀರ ಹೊರಕೇರಿ, ಮಲ್ಲಿಕಾರ್ಜುನ ಈಳಿಗೇರ, ವಿಜಯ ಕೋಳಿ, ಶಿವಾನಂದ ಈಳಿಗೇರ, ಗುರುಸಿದ್ದಪ್ಪ ದುರ್ಗಿ, ಯಲ್ಲಪ್ಪ ಅರಭಾಂವಿ, ಮಲ್ಲು ಈಳಿಗೇರ ಸೇರಿದಂತೆ ಅನೇಕರು ಇದ್ದರು.

Related posts: