ಗೋಕಾಕ:ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ
ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ
ಗೋಕಾಕ (ಬೆಟಗೇರಿ) ಮಾ 27 : ಹಲವಾರು ಶತಮಾನಗಳಿಂದಲೂ ಪ್ರತಿ ಮುನುಷ್ಯನೂ ವಿವಿಧ ದೇವರ ಮೇಲೆ ಭಯ, ಭಕ್ತಿ ಆರಾಧನೆಯಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಿದ್ಧಾರೂಢ ನಗರದಲ್ಲಿ ಶ್ರೀ ಲಕ್ಷ್ಮೀ ದೇವಿ ದೇವರ ನೂತನ ದೇವಸ್ಥಾನ ನಿರ್ಮಾಣಕ್ಕೆ ಮಂಗಳವಾರ ಮಾರ್ಚ್.27 ರಂದು ನಡೆದ ಅಡಿಗಲ್ಲು ಸಮಾರಂಭದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ತಮಗೆ ಸಾಧ್ಯವಾದಷ್ಟು ಸಹಾಯ ಸಹಕಾರ ನೀಡಬೇಕೆಂದರು.
ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿವಲಿಂಗಪ್ಪ ಬಿರಾದರಪಾಟೀಲ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಲ್ಲಪ್ಪ ಪಣದಿ, ಶ್ರೀಧರ ದೇಯನ್ನವರ, ಹಣಮಂತ ವಗ್ಗರ, ರಾಮಣ್ಣ ಕತ್ತಿ, ರಾಮಣ್ಣ ನೀಲಣ್ಣವರ, ಅಶೋಕ ಮಾಕಾಳಿ, ಹಣಮಂತ ಆನೆಗುಂದಿ, ಮಂಜು ವಗ್ಗರ, ಭೀಮಶೆಪ್ಪ ಹೊರಟ್ಟಿ, ನಾಗಪ್ಪ ವಗ್ಗರ, ಗುರಪ್ಪ ಮಾಕಾಳಿ, ಗ್ರಾಮದ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಇಲ್ಲಿಯ ಸಿದ್ಧಾರೂಢ ನಗರದ ಲಕ್ಷ್ಮೀ ದೇವಿ ದೇವರ ನೂತನ ದೇವಸ್ಥಾನ ನಿರ್ಮಾಣ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು, ಇತರರು ಇದ್ದರು.
ವೀರನಾಯ್ಕ ನಾಯ್ಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಾಲಪ್ಪ ಕೋಣಿ ಕೊನೆಗೆ ವಂದಿಸಿದರು.