ಗೋಕಾಕ:ಮುಖ್ಯಮಂತ್ರಿ ಮಾಡಿದರು ಬಿಜೆಪಿ ಸೇರಲ್ಲ : ಲಖನ್ ಜಾರಕಿಹೊಳಿ ಯೂಟರ್ನ
ಮುಖ್ಯಮಂತ್ರಿ ಮಾಡಿದರು ಬಿಜೆಪಿ ಸೇರಲ್ಲ : ಲಖನ್ ಜಾರಕಿಹೊಳಿ ಯೂಟರ್ನ
ಗೋಕಾಕ ಏ 4: ಕಳೆದ ಹಲವು ದಿನಗಳಿಂದ ಬಹು ಚರ್ಚಿತವಾಗಿ ಜಿಲ್ಲೆಯಲ್ಲಿ ಸುದ್ದಿಯಾಗಿದ ಜಾರಕಿಹೊಳಿ ಕುಟುಂಬದ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರು ಬಿಜೆಪಿ ಸೇರ್ಪಡೆಯ ವಿಚಾರದಿಂದ ಹಿಂದೆ ಸರಿದಿದ್ದಾರೆ . ಬುಧವಾರದಂದು ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಧೀಡಿರ ಪ್ರತ್ಯೇಕ್ಷವಾಗಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಲಖನ್ ಜಾರಕಿಹೊಳಿ ಬಿಜಿಪಿ ಸೇರುವ ವಿಚಾರದಿಂದ ಹಿಂದೆ ಸರಿದಿದ್ದು ಬಿಜೆಪಿ ಪಕ್ಷ ನನಗೆ ಮುಖ್ಯಮಂತ್ರಿ ಮಾಡಿದರು ಆ ಪಕ್ಷ ಸೇರುವುದಿಲ್ಲಾ ಕಾರ್ಯಕರ್ತರು ಯಾವುದೆ ಗೊಂದಲಕ್ಕೆ ಸಿಲುಕದೆ ಬರುವ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರಿಗೆ ಬೆಂಬಲಿಸಿ ಕನಿಷ್ಠ 55 ಸಾವಿರಕ್ಕೂ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಜಿ.ಎಸ್.ಟಿ ಪಕ್ಷಕ್ಕೆ ಮರಳಾಗಬೇಡಿ : ಬಿಜಿಪಿ ಬರೀ ಜಿ.ಎಸ್.ಟಿ ಪಕ್ಷ ಖಾಲಿ ಕಿಸೆಯಿಂದ ಬಂದು ಕಿಸೆ ತುಂಬಿಸಕೊಂಡು ಹೋಗುತ್ತಿದ್ದಾರೆ ಅಂತಹವರ ಮಾತಿಗೆ ಮರಳಾಗದೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಮತ್ತೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ರಮೇಶ ಜಾರಕಿಹೊಳಿ ಅವರನ್ನು ಮತ್ತೋಮ್ಮೆ ಸಚಿವರನ್ನಾಗಿ ಮಾಡಬೇಕೆಂದು ಕರೆ ನೀಡಿದರು .
ತಂದೆ ತಾಯಿ ಕಟ್ಟಿದ ಸಾಮ್ರಾಜ್ಯದಲ್ಲಿ ನಾವು ಮುನ್ನಡೆಯುತ್ತಿದ್ದೆವೆ : ಕಳೆದ ಎರೆಡು ದಶಕಗಳಿಂದ ನಮ್ಮ ತಂದೆ ತಾಯಿ ಕಟ್ಟಿದ ಸಾಮ್ರಾಜ್ಯದಲ್ಲಿ ಇಂದು ನಾವೇಲ್ಲ ಸಹೋದರರು ಮತದಾರರ ಆಶೀರ್ವಾದದಿಂದ ಅಧಿಕಾರ ನಡೆಸುತ್ತಿದ್ದೆವೆ ಮುಂದೆಯೂ ತಾಲೂಕಿನ ಎಲ್ಲ ಜನರು ಜಾರಕಿಹೊಳಿ ಸಹೋದರರ ಮೇಲೆ ಇಟ್ಟ ಪ್ರೀತಿ, ವಿಶ್ವಾಸ ಎಂದು ಮರೆಯಲ್ಲಾಗದು ಮುಂದೆಯು ನಮ್ಮ ಕುಟುಂಬವನ್ನು ಬೆಂಬಲಿಸಿ ಮತ್ತಷ್ಟು ಹೆಚ್ಚಿನ ಜನ ಸೇವೆಯನ್ನು ಮಾಡಲು ರಮೇಶ ಜಾರಕಿಹೊಳಿ ಅವರನ್ನು ಸೂಮಾರು 55 ಸಾವಿರಕ್ಕೂ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು