RNI NO. KARKAN/2006/27779|Thursday, December 12, 2024
You are here: Home » breaking news » ಮೂಡಲಗಿ:ಪ್ರೋತ್ಸಾಹ , ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ , ಕ್ರೀಡಾಪಟ್ಟುಗಳನ್ನು ಬೆಳೆಸಬೇಕು : ಡಾ: ಎಸ್.ಬಿ.ಮಟೋಳಿ

ಮೂಡಲಗಿ:ಪ್ರೋತ್ಸಾಹ , ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ , ಕ್ರೀಡಾಪಟ್ಟುಗಳನ್ನು ಬೆಳೆಸಬೇಕು : ಡಾ: ಎಸ್.ಬಿ.ಮಟೋಳಿ 

ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸೋಮವಾರ ಜರುಗಿದ ಪುರುಷರ ಪ್ರೋ.ಕಬಡ್ಡಿ ಟೂರ್ನಿ ಹಾಗೂ ರಾಣಿ ಚನ್ನಮ್ಮ ವಿವಿಯ ಏಕವಲಯ ಪುರುಷ ಮತ್ತು ಮಹಿಳಾ ಟೆನ್ನಿಕಾಯ್ಟ್ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸೋನವಾಲ್ಕರ ಮತ್ತು ಅತಿಥಿ ಡಾ: ಎಸ್.ಬಿ.ಮಟೋಳಿ ಉದ್ಘಾಟಿಸಿದರು.

ಪ್ರೋತ್ಸಾಹ , ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ , ಕ್ರೀಡಾಪಟ್ಟುಗಳನ್ನು ಬೆಳೆಸಬೇಕು : ಡಾ: ಎಸ್.ಬಿ.ಮಟೋಳಿ

ಮೂಡಲಗಿ ಎ 9 : ಪ್ರೋತ್ಸಾಹ ಮತ್ತು ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ ಮತ್ತು ಕ್ರೀಡಾಪಟ್ಟುಗಳನ್ನು ಬೆಳೆಸಬೇಕು ಎಂದು ಬನಹಟ್ಟಿ ಎಸ್.ಟಿ.ಸಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಜಮಖಂಡಿಯ ಡಾ: ಎಸ್.ಬಿ.ಮಟೋಳಿ ಹೇಳಿದರು.
ಅವರು ಇಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಬಿಪಿಎಡ್ ಕಾಲೇಜು, ಎಮ್.ಪಿ.ಇಡಿ ಸ್ನಾತಕೋತ್ತರ ಕೇಂದ್ರ ಹಾಗೂ ಕಲಾ ಹಾಗೂ ವಾಣಿಜ್ಯ ಮತ್ತು ಸಂಸ್ಥೆಯ ಶಾಲೆ, ಕಾಲೇಜುಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ ಹೊನಲು ಬೆಳಕಿನ ಪ್ರೋ.ಕಬಡ್ಡಿ ಟೂರ್ನಿ ಹಾಗೂ ರಾಣಿ ಚನ್ನಮ್ಮ ವಿವಿಯ ಏಕವಲಯ ಪುರುಷ ಮತ್ತು ಮಹಿಳಾ ಟೆನ್ನಿಕಾಯ್ಟ್ ಟೂರ್ನಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ಕ್ರೀಡಾಪಟುಗಳನ್ನು ಗೌರವಿಸಿದರೆ ಕ್ರೀಡೆಗಳು ಖಮಡಿತ ಉಳಿಯುತ್ತವೆ ಎಂದರು. ಕ್ರೀಡೆ ಮತ್ತು ಶ್ರೇಷ್ಠ ಕ್ರೀಡಾಪಟುವಿನ ಮೂಲಕ ಗ್ರಾಮಗಳ ಹೆಸರು ಅಜರಾಮವಾಘಿ ಉಳಿಯುತ್ತವೆ. ಊರಿನ ಕೀರ್ತಿ ಬೆಳೆಯುತ್ತವೆ. ಪ್ರಸಕ್ತ ಕಾಮನವೇಲ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಚಿನ್ನಗಳನ್ನು ಬಾಚಿ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ ಎಂದರು.
ಕಬಡ್ಡಿ, ಕುಸ್ತಿ, ಖೋಖೋ, ಅಟ್ಯಾಪಟ್ಯಾದಂತೆ ಕ್ರೀಡೆಗಳು ಉಳಿಯಬೇಕು. ಇಂದು ಪ್ರೋ ಕಬಡ್ಡಿ ಮೂಲಕ ಕಬಡ್ಡಿ ಆಟ್ಟಕ್ಕೆ ಮತ್ತೆ ಜನಪ್ರಿಯತೆಗೊಂಡಿದೆ. ಶ್ರದ್ಧೆ, ಪ್ರಾಮಾಣಿಕತೆಯಿಂದ ಆಡುವ ಆಟವು ಜನಮೆಚ್ಚುಗೆಯಾಗುವುದು ಹೊರತು ಮೋಸದ ಗೆಲವು ಎಂದಿಗೂ ಶಾಸ್ವತ ಅಲ್ಲ ಎಂದರು.
ರಾಣಿ ಚನ್ನಮ್ಮ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಜಗದೀಶ ಗಸ್ತಿ ಮಾತನಾಡಿ, ಕ್ರೀಡಾಪಟುಗಳಿಗೆ ಸರ್ಕಾರಿ ವಿವಿಧ ಇಲಾಖೆಗಳಲ್ಲಿ ಉದ್ಯೋಗಗಳಿಗೆ ಅವಕಾಶವಿದ್ದು, ಅಂಥ ಅವಕಾಶಗಳನ್ನು ಕ್ರೀಡಾಪಟುಗಳು ಪಡೆದುಕೊಳ್ಳಬೇಕು. ಮೂಡಲಗಿ ಶಿಕ್ಷಣ ಸಂಸ್ಥೆಯವರು ಕ್ರೀಡಾ ಉತ್ಸವವನ್ನು ಉತ್ತಮವಾಗಿ ಸಂಘಟಿಸಿದ್ದು ಶ್ಲಾಘನೀಯವಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸೋನವಾಲ್ಕರ ಅಧ್ಯಕ್ಷತೆವಹಿಸಿದ್ದರು. ನಿರ್ಧೇಶಕರಾದ ಆರ್.ಪಿ.ಸೋನವಾಲ್ಕರ, ಬಿ.ಎಸ್.ಸೋನವಾಲ್ಕರ, ಆನಂದ ಗಿರಡ್ಡಿ, ನ್ಯಾಯವಾದಿ ಲಕ್ಷ್ಮಣ ಅಡಿಹುಡಿ, ಪ್ರಾಚಾರ್ಯ ಎಸ್.ಡಿ.ತಳವಾರ, ಉಪಪ್ರಾಚಾರ್ಯ ಯು.ಬಿ.ದಳವಾಯಿ ವೇದಿಕೆಯಲ್ಲಿದ್ದರು.
ಬಿ.ಪಿ.ಇಡಿ ಕಾಲೇಜು ಪ್ರಾಚಾರ್ಯ ಎಮ್.ಕೆ.ಕಂಕಣವಾಡಿ ಪ್ರಾಸ್ತಾವಿಕ ಮಾತನಾಡಿದರು.

ಪ್ರಾಚಾರ್ಯ ಡಾ: ಆರ್.ಎ.ಶಾಸ್ತ್ರೀಮಠ ಸ್ವಾಗತಿಸಿದರು. ಪ್ರೊ.ಸಂಗಮೇಶ ಗುಜಗೊಂಡ ನಿರೂಪಿಸಿದರು. ಬಿ.ಪಿ.ಬಂದಿ ವಂದಿಸಿದರು.

Related posts: