RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ಅವಮಾನ :ಮೌರ್ಯ ಕಿಡಿ

ಗೋಕಾಕ:ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ಅವಮಾನ :ಮೌರ್ಯ ಕಿಡಿ 

ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ಅವಮಾನ :ಮೌರ್ಯ ಕಿಡಿ
ಗೋಕಾಕ ಎ 9: ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ತಾನು ಸಹಾಯ ಮಾಡದೇ ಹೋಗಿದ್ದಿದ್ದರೆ
ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗರ ಹೆಂಡತಿ ಮೈಮಾರಿಕೊಂಡು ಜೀವನ ನಡೆಸಬೇಕಾದ ಸ್ಥಿತಿ ಬರುತ್ತಿತ್ತು. ಎಂಬ ಮಾತನ್ನು ಹೇಳಿದ್ದಾರೆ. ನಾಚಿಕೆಯಾಗಬೇಕು ಇವರಿಗೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡದವರು ಇವರೆಲ್ಲಾ
ರಾಜ್ಯವನ್ನಾಳಲು ಹೊರಟಿದ್ದಾರೆ. ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕರಾದ ಮಾರುತಿ ಮರಡಿ ಮೌರ್ಯ ಆಕ್ರೋಶ ವಕ್ತ ಪಡಿಸಿದ್ದಾರೆ.ಕುರುಬ ಸಮಾಜದ ಮೇಲೆ ಪದೇ ಪದೇ ಮಾತಿನ ದಾಳಿಗಳು, ಗೃಹ ಇಲಾಖೆಯ ಸಲಹೆಗಾರ ಐ.ಪಿ.ಎಸ್.
ಕೆಂಪಯ್ಯನವರ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಕುರುಬ ಸಮಾಜದ ಒಬ್ಬ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆಯ ಐದು ವರ್ಷಗಳ ಆಡಳಿತ ನಡೆಸುತ್ತಿದ್ದರೂ
ಒಬ್ಬ ಹಿಂದುಳಿದ ವರ್ಗಗಳ ವ್ಯಕ್ತಿಯ ಆಡಳಿತವನ್ನು ಸಹಿಸಿಕೊಳ್ಳದೇ ನಿರಂತರವಾಗಿ ವಾಗ್ದಾಳಿಯನ್ನು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ.

ಕುರುಬರ ಮೇಲೆ ಯಾಕೆ ಇಷ್ಟೊಂದು ದ್ವೇಷ ?? ಸಂಘಪರಿವಾರ, ಬಜರಂಗದಳದ ಪ್ರವೀಣ್ ಖಾಂಡ್ಯ ಎಂಬ ಸ್ವಾರ್ಥಿಯ ಕುತಂತ್ರಕ್ಕೆ ಮಾಧ್ಯಮಗಳ “ಬ್ರೇಕಿಂಗ್ ನ್ಯೂಸ್”ಗಳ ಆಟಕ್ಕೆ ಬಲಿಯಾಗಿ ಮರ್ಯಾದೆಗೆ ಅಂಜಿ, ಅಮಾಯಕ, ಪ್ರಾಮಾಣಿಕ ಡಿವೈಎಸ್‍ಪಿ. ಕಲ್ಲಪ್ಪ ಹಂಡಿಭಾಗ್‍ರವರು
ಆತ್ಮಹತ್ಯೆ ಮಾಡಿಕೊಂಡರು. ಅಂತಹ ವ್ಯಕ್ತಿಯ ಬಗ್ಗೆ ರಾಜಕಾರಣಿಗಳ ಬಾಯಿ ಚಪಲಕ್ಕೆ ದಿವಂಗತ ಕಲ್ಲಪ್ಪ ಹಂಡಿಭಾಗ್‍ರವರ ಧರ್ಮಪತ್ನಿಯವರ ಬಗ್ಗೆ ಅವಹೇಳನವಾಗಿ ಮಾತನಾಡಿ, ಸ್ತ್ರೀಕುಲಕ್ಕೆ ಅವಮಾನ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಷ್ಟು ಕೊಳಕು ಮನಸ್ಥಿತಿ ಎಂದು ಈಗಲೇ ತಿಳಿದಿದ್ದು, ಕಲ್ಲಪ್ಪ ಹಂಡಿಭಾಗ ಅವರ ಪತ್ನಿಯ ಕುರಿತು ಮಾತನಾಡುವ ಬದಲಾಗಿ ನಟಿ ರಾಧಿಕಾ ಬಗ್ಗೆ ಮಾತನಾಡಲಿ ಎಂದು ಮಾರುತಿ ಮರಡಿ ಮೌರ್ಯ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ 30 ಜಿಲ್ಲೆಯಲ್ಲಿ ಹರಡಿಕೊಂಡಿರುವ ಮುಗ್ಧ ಮನಸ್ಸಿನ ಕುರುಬರು ಯಾರಿಗೂ ತೊಂದರೆ ಕೊಡುವವರಲ್ಲ.
ಕುರುಬರು ನಿಸ್ಸಹಾಯಕರಲ್ಲ. ಸಿಡಿದೇಳುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಇನ್ನು ಮುಂದಾದರೂ ಯಾವುದೇ ರಾಜಕಾರಣಿ ಕುರುಬ ಸಮಾಜದ ಬಗ್ಗೆ ಮಾತನಾಡುವಾಗ ಎಚ್ಚರವಹಿಸಲಿ. ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರು
ಕೂಡಲೇ ಕ್ಷಮೆಯಾಚಿಸಬೇಕು ಎಂದು ಹಾಲುಮತ ಮಹಾಸಭಾ ಎಚ್ಚರಿಸುತ್ತಿದೆ ಎಂದು ಮೌರ್ಯ  ನಮ್ಮ ಬೆಳಗಾವಿ ಪತ್ರಿಕೆಗೆ  ತಿಳಿಸಿದ್ದಾರೆ

Related posts: