ಮೂಡಲಗಿ:ವಿವಿ ಟೆನ್ನಿಕಾಯ್ಟ್ ಟೂರ್ನಿ ಮೂಡಲಗಿ ಬಿ.ಪಿ.ಇಡಿ ಮತ್ತು ಹುನಗುಂದ ಕಾಲೇಜು ಚಾಂಪಿಯನ್
ವಿವಿ ಟೆನ್ನಿಕಾಯ್ಟ್ ಟೂರ್ನಿ ಮೂಡಲಗಿ ಬಿ.ಪಿ.ಇಡಿ ಮತ್ತು ಹುನಗುಂದ ಕಾಲೇಜು ಚಾಂಪಿಯನ್
ಮೂಡಲಗಿ ಏ 10 : ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಬಿ.ಪಿ.ಇಡಿ ಕಾಲೇಜು ಅತಿಥ್ಯದಲ್ಲಿ ಸೋಮವಾರ ಜರುಗಿದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಏಕವಲಯ ಪುರುಷರ ಮತ್ತು ಮಹಿಳೆಯರ ಟೆನ್ನಿಕಾಯ್ಟ್ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಆತಿಥ್ಯ ಮೂಡಲಗಿ ಬಿ.ಪಿ.ಇಡಿ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಹುನಗುಂದ ವಸ್ತ್ರದ ಕಾಲೇಜು ತಂಡ ಚಾಂಪಿಯನ್‍ಗಳಾದವು. ಪುರುಷರ ವಿಭಾಗದಲ್ಲಿ ಆತಿಥ್ಯವಹಿಸಿದ್ದ ಮೂಡಲಗಿ ಬಿ.ಪಿ.ಇಡಿ ಕಾಲೇಜು ಗೋಕಾಕ ಜೆಎಸ್‍ಎಸ್ ಕಾಲೇಜು ವಿರುದ್ದ 25-17, 15-22 ನೇರ ಸೆಟ್ಗಳಿಂದ ವಿಜಯ ಸಾಧಿಸಿದರೆ, ಮಹಿಳಾ ವಿಭಾಗದಲ್ಲಿ ಕಳೆದ ವರ್ಷದ ಚಾಂಪಿಯನ್ ತಂಡ ಹುನಗುಂದ ಕಾಲೇಜು ಮೊದಲ ಸೆಟ್ವನ್ನು 25-21 ಮತ್ತು ಕೊನೆಯ ಸೆಟ್‍ವನ್ನು 25-19 ಅಂಕಗಳ ಅಂತರದಿಂದ ಎಂ.ಇ.ಎಸ್. ಬಿ.ಪಿ.ಇಡಿ ತಂಡವನ್ನು ಪರಾಭವಗೊಳಿಸಿತು. ಪುರುಷರ ವಿಭಾಗದಲ್ಲಿ ಗೋಕಾಕ ಜೆಎಸ್.ಎಸ್ ಕಾಲೇಜು ಮತ್ತು ಮಹಿಳಾ ಬಿಭಾಗದಲ್ಲಿ ಮೂಡಲಗಿ ಬಿ.ಪಿ.ಇಡಿ ಕಾಲೇಜು ಎರಡನೇ ಸ್ಥಾನಗಳಿಸಿದವು.
ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯ ವಿವಿಧ ಕಾಲೇಜು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ಧವು.
ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಾರ್ಚಾರ್ಯರಾದ ಪ್ರೊ.ಎಸ್.ಡಿ.ತಳವಾರ, ಪದವಿ ಕಾಲೇಜು ಪ್ರಭಾರಿ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ, ಡಾ.ವಿ.ಆರ್.ದೇವರಡ್ಡಿ, ಪ್ರೊ.ಎಸ್.ಬಿ.ಖೋತ, ಬಿ.ಪಿ.ಇಡಿ ಕಾಲೇಜು ಪ್ರಾಚಾರ್ಯ ಎಂ.ಕೆ.ಕಂಕಣವಾಡಿ, ಡಾ:ರವಿ ಗಡದನ್ನವರ, ಬಿ.ಕೆ.ಬಡಗನ್ನವರ, ಎಲ್.ಬಿ.ಮನ್ನಾಪೂರ, ವೈಎಸ್.ಬರಮನ್ನವರ, ಐ.ಎಮ್.ಗಸ್ತಿ, ಬಾಳೇಶ ಕಂಬಾರ ಇದ್ದರು.