ಗೋಕಾಕ:ಡೆಂಗ್ಯೂ ಮತ್ತು ಚಿಕನ್ ಗುನ್ಯ ರೋಗ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳಿ: ಡಾ: ಶಿಲ್ಪಾ ಕುರೇರ ಮನವಿ
ಡೆಂಗ್ಯೂ ಮತ್ತು ಚಿಕನ್ ಗುನ್ಯ ರೋಗ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳಿ: ಡಾ: ಶಿಲ್ಪಾ ಕುರೇರ ಮನವಿ
ಗೋಕಾಕ ಏ 16 : ನಗರದಲ್ಲಿ ಹರಡುತ್ತಿರುವ ಡೆಂಗ್ಯೂ ಮತ್ತು ಚಿಕನ್ ಗುನ್ಯ ರೋಗ ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಡಾ: ಶಿಲ್ಪಾ ಕುರೇರ ಮನವಿ ಮಾಡಿಕೊಂಡರು.
ಅವರು ನಗರದ ಎಪಿಎಂಸಿಯ ಕರೆಮ್ಮನ ದೇವಸ್ಥಾನದಲ್ಲಿ ತಿಳುವಳಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಗರದಲ್ಲಿ ಮಹಾಮಾರಿ ಡೆಂಗ್ಯೂ ಜ್ವರ ವಿಪರೀತವಾಗಿ ಹರಡಿದ್ದು ಇದಕ್ಕೆ ಹಲವು ಜನ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ನಗರಾದ್ಯಂತ ಸಾರ್ವಜನಿಕರಲ್ಲಿ ಡೆಂಗ್ಯೂ ರೋಗದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮುಂಜಾಗ್ರತ ಕ್ರಮವಾಗಿ ನಗರಾಧ್ಯಂತ ಸೊಳ್ಳೆ ಹರಡದಂತೆ ದ್ರವಗಳನ್ನು ಸಿಂಪಡಿಸಿ ಡೆಂಗ್ಯೂ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮೇಲ್ಚಿಚಾರಕ ಶಂಕರ ಅಂಗಡಿ ಮಾತನಾಡಿ ಡೆಂಗ್ಯೂ ಒಂದು ವೈರಾಣುವಿನಿಂದ ಹರಡುವ ರೋಗವಾಗಿದ್ದು ಸೊಂಕಿತ ಸೊಳ್ಳೆ ಕಡಿತದಿಂದ ಹರಡುತ್ತದೆ ಸತತ 3ದಿನ ಜ್ವರ ಕಾಣಿಸಿಕೊಂಡರೇ ತಕ್ಷಣ ಆಸ್ಪತ್ರೆ ಭೇಟಿ ರಕ್ತ ತಪಾಸಣೆ ಮಾಡಿಕೊಳ್ಳಬೇಕೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ವ ಸಹಾಯ ಸಂಘದ ಅಧ್ಯಕ್ಷೆ ಭಾರತಿ ಕುಡಚಿ, ಆರೋಗ್ಯ ಇಲಾಖೆಯ ಮಾಲಾ ಸುಲಧಾಳ, ಆರ್.ಎಂ.ನಿಂಗನ್ನವರ, ಆರ್.ಎನ್.ಅಮ್ಮಣಗಿ, ಜೆ.ಸಪ್ತಸಾಗರ, ಎಸ್.ಎನ್.ಪೂಜೇರಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.