ಘಟಪ್ರಭಾ:ಸಮತಾ ಸೈನಿಕದಳ (ಎಸ್.ಎಸ್.ಡಿ) ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ
ಸಮತಾ ಸೈನಿಕದಳ (ಎಸ್.ಎಸ್.ಡಿ) ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ
ಘಟಪ್ರಭಾ ಏ 17: ಸ್ಥಳೀಯ ಸಮತಾ ಸೈನಿಕದಳ (ಎಸ್.ಎಸ್.ಡಿ) ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.
ಮುಂಜಾನೆ 10 ಗಂಟೆಗೆ ಮೃತ್ಯುಂಜಯ ವೃತ್ತದಲ್ಲಿರುವ ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲಯದಿಂದ ಹೊರಟ ಬೈಕ್ ರ್ಯಾಲಿಗೆ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ ಚಾಲನೆ ನೀಡಿದರು. ರ್ಯಾಲಿಯು ಜನತಾಪ್ಲಾಟ್, ಅಂಬೇಡ್ಕರ ಭವನ, ದನಗಳ ಪೇಠೆ, ಎಸ್.ಸಿ ಕ್ವಾಲನಿ, ಶ್ರೀ ದುರ್ಗಾ ದೇವಿ ಗುಡಿಯ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರೋಪಗೊಂಡಿತು.
ಸಂಜೆ 4 ಗಂಟೆಗೆ ಅಂಬೇಡ್ಕರರ ಭಾವಚಿತ್ರದ ಭವ್ಯ ಮೆರವಣಿಗೆ ಶ್ರೀ ಮಾತಂಗ ಆಶ್ರಮ ಹಂಪಿ (ಹೊಸಪೇಠ)ದ ಮಾದಿಗ ಸಮಾಜದ ಪೀಠಾಧಿಕಾರಿ ಶ್ರೀ ಮಾತಂಗಮುನಿ ಸ್ವಾಮೀಜಿಗಳು ಹಾಗೂ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಚಾಲನೆ ನೀಡಿದರು.
ಮುಖಂಡರಾದ ವೀರಭದ್ರ ಗಂಡವ್ವಗೋಳ, ರಮೇಶ ಗಂಡವ್ವಗೋಳ, ಕೃಷ್ಣಾ ಗಂಡವ್ವಗೋಳ, ಪರಸರಾಮ ಗೋಕಾಕ, ಡಿ.ಎಂ.ದಳವಾಯಿ, ಸುಲ್ತಾನಸಾಬ ಕಬ್ಬೂರ, ಸುರೇಶ ಪೂಜಾರಿ, ಸುಧೀರ ಜೋಡಟ್ಟಿ, ರಾಜು ದೊಡಮನಿ, ಅಮೃತ ಧರ್ಮಟ್ಟಿ, ಶಂಕರ ಪರವಗೋಳ, ಶಂಕರ ಯ.ಹಂಚಿನಾಳ, ಹಂಮಂತ ಕರೆವ್ವಗೋಳ, ದಯಾನಂದ ಗುಡಾಜ, ಬಸು ಚಿಂಚಲಿ, ರಿಯಾಜ ಕೆ.ಮುಲ್ಲಾ, ಶಂಕರ ಸಣ್ಣಕ್ಕಿ, ಮುನ್ನಾ ಪಾಶ್ಚಾಪೂರೆ, ಎಸ್.ಎಚ್.ಸರವನ್ನವರ, ಬಸವಣ್ಣಿ ಜೋಡಟ್ಟಿ, ಮಾರುತಿ ಗು.ಗಂಡವ್ವಗೊಳ, ವಿಠ್ಠಲ ಗೊರಜಪ್ಪಗೋಳ, ರಮೇಶ ಮೇತ್ರಿ, ಕೆಂಪಣ್ಣಾ ನಡವಿನಮನಿ, ಕೆಂಪ್ಪಣ್ಣಾ ಸಿ.ಗಂಡವ್ವಗೋಳ ಸೇರಿದಂತೆ ಅನೇಕ ದಲಿತ ಸಮುದಾಯದ ಮುಖಂಡರು. ಯುವಕರು. ಹಾಗೂ ಗ್ರಾಮದ ಹಿರಿಯರು ಇದ್ದರು.