RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಕಲಿತ ವಿದ್ಯೆಯ ಸದುಪಯೋಗ ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳುಬೇಕು : ಮಹೇಶ ಕಂಬಾರ

ಗೋಕಾಕ:ವಿದ್ಯಾರ್ಥಿಗಳು ಕಲಿತ ವಿದ್ಯೆಯ ಸದುಪಯೋಗ ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳುಬೇಕು : ಮಹೇಶ ಕಂಬಾರ 

ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೂಡುವ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉಪನ್ಯಾಸಕ ಮಹೇಶ ಕಂಬಾರ ಉದ್ಘಾಟಿಸುತ್ತಿರುವುದು.

ವಿದ್ಯಾರ್ಥಿಗಳು ಕಲಿತ ವಿದ್ಯೆಯ ಸದುಪಯೋಗ ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳುಬೇಕು : ಮಹೇಶ ಕಂಬಾರ

ಗೋಕಾಕ ಏ 21 : ವಿದ್ಯಾರ್ಥಿಗಳು ಯೋಜನಾ ಬದ್ಧರಾಗಿ ತಾವು ಕಲಿತ ವಿದ್ಯೆಯ ಸದುಪಯೋಗದೊಂದಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಇಲ್ಲಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಮಹೇಶ ಕಂಬಾರ ಹೇಳಿದರು.
ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೂಡುವ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ತಮ್ಮಗಿರುವ ಆಸಕ್ತಿ ಕ್ಷೇತ್ರಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾರದರ್ಶಕ ಆಯ್ಕೆಯೊಂದಿಗೆ ಪ್ರತಿಭಾನ್ವಿತರಿಗೆ ಉನ್ನತ ಹುದ್ದೆಗಳ ಅವಕಾಶಗಳಿವೆ. ತಾವು ಕಠಿಣ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಿರ್ಣರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ, ವಿದ್ಯಾಲಯದ ವಿವಿಧ ವಿಭಾಗಗಳ ಮುಖಸ್ಥರಾದ ಆಯ್.ಎಸ್.ಪವಾರ, ಎನ್.ಎಮ್.ತೋಟಗಿ, ಬಿ.ಬಿ.ತಳವಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಶಿವಾನಂದ ಚಿಕ್ಕೋಡಿ, ಪ್ರಿಯಾಂಕ ಬೆಣಚಿನಮರಡಿ, ಸಾಗರ ಕಮ್ಮಾರ ಇದ್ದರು.
ತೇಜಸ್ವಿನಿ ಬಡಿಗೇರ ಸ್ವಾಗತಿಸಿದರು, ಮಹಾದೇವಿ ಪರನ್ನವರ, ಪ್ರೀತಿ ಮೂರ್ತೆಲಿ ನಿರೂಪಿಸಿದರು, ದುಂಡಪ್ಪ ಹಡಗಿನಾಳ ವಂದಿಸಿದರು.

Related posts: