ಬೆಳಗಾವಿ:ಇನಾಮದಾರಗೆ ಕೈ ಟಿಕೆಟ್ ಪೈನಲ್ : ಶಾಸಕ ಸ್ಥಾನದ ಗದ್ದುಗೆಗೆ ಮಾವ-ಅಳಿಯನ ನಡುವೆ ಬೀಗ್ ಫೈಟ್ ಗೆ ಅಖಾಡಾ ಸಿದ್ಧ
ಇನಾಮದಾರಗೆ ಕೈ ಟಿಕೆಟ್ ಪೈನಲ್ : ಶಾಸಕ ಸ್ಥಾನದ ಗದ್ದುಗೆಗೆ ಮಾವ-ಅಳಿಯನ ನಡುವೆ ಬೀಗ್ ಫೈಟ್ ಗೆ ಅಖಾಡಾ ಸಿದ್ಧ
ಬೆಳಗಾವಿ ಏ 22 : ಬೆಳಗಾವಿ ಜಿಲ್ಲೆಯ ಕಿತ್ತೂರ ಮತಕ್ಷೇತ್ರದಿಂದ ಕಾಂಗ್ರೇಸ ಟಿಕೆಟ್ ಸಿಗದಿದ್ದಕ್ಕೆ ತುಂಬಾ ಮುಜಗರಕ್ಕೆ ಒಳಗಾಗಿರುವ ಬಾಬಾಸಾಹೇಬ ಪಾಟೀಲ ಜೆಡಿಎಸ್ ಸೆರ್ಪಡೆಗೆ ಸಿದ್ದವಾಗಿದ್ದಾರೆ ಎಂದು ತಿಳಿದುಬಂದಿದೆ .
ಜೆಡಿಎಸ್ ವರಿಷ್ಠರ ಜೊತೆಗೆ ಬಾಬಾಸಾಹೇಬ್ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಪಕ್ಷ ಸೇರ್ಪಡೆಗೆ ಜೆಡಿಎಸ್ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತ ಪಡಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಬಾಸಾಹೇಬ್ ಪಾಟೀಲ್, ಜೆಡಿಎಸ್ ಸೇರಲು ನಿರ್ಧಾರ ಮಾಡಿದ್ದೇನೆ. ವರಿಷ್ಠರಿಗೂ ಭೇಟಿಯಾಗಿದ್ದು, ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಕಿತ್ತೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡುವುದಾಗಿ ಜೆಡಿಎಸ್ ವರಿಷ್ಠರು ಭರವಸೆ ನೀಡಿದ್ದು, ಮಂಗಳವಾರ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಕಿತ್ತೂರು ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆಬಿದ್ದಂತಾಗಿದ್ದು, ಹಾಲಿ ಶಾಸಕ ಡಿ.ಬಿ.ಇನಾಮದಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕನ್ಫರ್ಮ್ ಮಾಡಿರುವುದು ಖಾತ್ರಿಯಾಗಿದೆ. ಇದೀಗ ಕಿತ್ತೂರು ಶಾಸಕ ಸ್ಥಾನದ ಗದ್ದುಗೆಗೆ ಮಾವ-ಅಳಿಯನ ನಡುವೆ ಫೈಟ್ ನಡೆಯಲಿದ್ದು, ಅಖಾಡ ರಂಗೇರಲಿದೆ.