ಗೋಕಾಕ : ಅರಬಾಂವಿ ಕ್ಷೇತಕ್ಕೆ ಜೆಡಿಎಸ್ ನಿಂದ ಗಡಾದ , ಕಾಂಗ್ರೆಸ್ ದಿಂದ ದಳವಾಯಿ ನಾಮಪತ್ರ ಸಲ್ಲಿಕೆ
ಅರಬಾಂವಿ ಕ್ಷೇತಕ್ಕೆ ಜೆಡಿಎಸ್ ನಿಂದ ಗಡಾದ , ಕಾಂಗ್ರೆಸ್ ದಿಂದ ದಳವಾಯಿ ನಾಮಪತ್ರ ಸಲ್ಲಿಕೆ
ಗೋಕಾಕ ಏ 23 : ದಿನದಿಂದ ದಿನಕ್ಕೆ ಚುನಾವಣಾ ಕಾವು ರಂಗೆರುತ್ತಿದೆ ಇಂದು ಗೋಕಾಕದಲ್ಲಿಯೂ ಸಹ ಅಭ್ಯರ್ಥಿಗಳು ಸಾಲು ಸಾಲಾಗಿ ಬಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ
ಅರಬಾಂವಿ ಸಾಮಾನ್ಯ ಮತಕ್ಷೇತ್ರದಿಂದ ಇಂದು ಕಾಂಗ್ರೆಸ್ ದಿಂದ ಅರವಿಂದ ದಳವಾಯಿ ಮತ್ತು ಜೆಡಿಎಸ್ ದಿಂದ ಭಿಮಪ್ಪ ಗಡಾದ ತಮ್ಮ ಬೆಂಬಲಿಗರೊಂದಿಗೆ ಮಿನಿ ವಿಧಾನಸೌದಕ್ಕೆ ಬಂದು ಚುನಾವಣಾಧಿಕಾರಿ ಶರಣಬಸಪ್ಪ ಕೊಟ್ಟೆಪಗೋಳ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ .
ಬೀಮಪ್ಪ ಗಡಾದ ಅವರು ಪಕ್ಷೇತರವಾಗಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಒಟ್ಟು ಎರೆಡು ಅಫೀಡ್ಯೂಟ್ ಸಲ್ಲಿಸಿದ್ದಾರೆ . ನಾಮಪತ್ರ ಪರಿಶೀಲನೆ ಮತ್ತು ಹಿಂಪಡೆಯುವ ಕೊನೆಯ ದಿನದಂದು ಜೆಡಿಎಸ್ ಪಕ್ಷದ ಭೀ ಫಾರಂ ನಾಮಪತ್ರಕ್ಕೆ ಹಚ್ಚಿದರೆ ಅಧಿಕೃತವಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲ್ಲಿದ್ದಾರೆಂದು ತಿಳಿದುಬಂದಿದೆ
ಗೋಕಾಕ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಾಬು ಮಿಟ್ಟುಸಾಬ ಫನಿಬಂದ ಎಂಬುವವರು ನಾಮಪತ್ರವನ್ನು ಸಲ್ಲಿಸಿದ್ದಾರೆ
ಇಲ್ಲಿಯವರೆಗೆ ಅರಬಾಂವಿ ಮತಕ್ಷೇತ್ರದಿಂದ 4 ಮತ್ತು ಗೋಕಾಕ ಮತಕ್ಷೇತ್ರದಿಂದ 2 ನಾಮಪತ್ರ ಸಲ್ಲಿಕೆಯಾಗಿವೆ