ಗೋಕಾಕ:ಕೊನೆಯ ದಿನ ಸಿಂಪಲಾಗಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಭ್ಯರ್ಥಿ ಶಾಸಕ ಬಾಲಚಂದ್ರ
ಕೊನೆಯ ದಿನ ಸಿಂಪಲಾಗಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಭ್ಯರ್ಥಿ ಶಾಸಕ ಬಾಲಚಂದ್ರ
ಗೋಕಾಕ ಏ 24 : ವಿಧಾನ ಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿದ್ಧು , ಅರಬಾಂವಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೇವಲ ಐದು ಜನ ಆಪ್ತ ರೊಂದಿಗೆ ಸಿಂಪಲಾಗಿ ಇಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು .
ನಗರದ ಲಕ್ಷೀ ಗುಡಿಯಲ್ಲಿ ಪೂಜೆ ಸಲ್ಲಿಸಿ ನೇರವಾಗಿ ತಾಲೂಕಾ ದಂಡಾಧಿಕಾರಿಗಳ ಕಛೇರಿಗೆ ಆಗಮಿಸಿದ ಪೂಜಾರಿ ಚುನಾವಣಾಧಿಕಾರಿ ಶ್ರೀ ಶರಣಬಸಪ್ಪ ಕೊಟ್ಟೆಪಗೋಳ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು .
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅರಬಾಂವಿ ಕ್ಷೇತ್ರದಲ್ಲಿ ನಮ್ಮ ವಿರೋಧಿಗಳ ನನ ಗೆಲುವಿನ ಅಂತರ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಆದರೆ ಈ ಬಾರಿ 75 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ರಾಜ್ಯದಲ್ಲೇ ಅರಬಾಂವಿ ಮತಕ್ಷೇತ್ರದ ಕೀರ್ತಿ ಹೆಚ್ಚಿಸಲಾಗುವುದು . ಜಿಲ್ಲೆಯಲ್ಲಿ ಸಂಸಂದರಾದ ಸುರೇಶ ಅಂಗಡಿ , ಪ್ರಭಾಕರ ಕೋರೆ ಮತ್ತು ಎಲ್ಲ ನಾಯಕರು ಒಂದಾಗಿ 12 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿಗೆ ಶ್ರಮಿಸಲಾಗುವುದು . ಟಿಕೆಟ್ ಕೈತಪ್ಪಿದರಿಂದ ಸಹಜವಾಗಿ ಬಿನ್ನಾಬಿಪ್ರಾಯಗಳು ಹುಟ್ಟಿಕೊಂಡಿವೆ ಅವುಗಳನ್ನು ಶಮನಗೊಳಿಸಿ ಪಕ್ಷದ ಗೆಲುವಿಗಾಗಿ ಎಲ್ಲರನ್ನು ಒಗ್ಗೂಡಿಸಲಾಗುವುದೆಂದು ಶಾಸಕ ಬಾಲಚಂದ್ರ ಹೇಳಿದರು
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬಸಗೌಡ ಪಾಟೀಲ (ನಾಗನೂರ) , ಶಂಕರ ಬಿಲಕುಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು .
ಬಾಲಚಂದ್ರ ಅವರಿಗೆ ಹಸ್ತಲಾಘವ ಮಾಡಿದ ಸಂಸಂದ ಅಂಗಡಿಗೆ : ಕಳೆದ ಹಲವು ತಿಂಗಳಿನಿಂದ ಪಕ್ಷದ ಮೂನ್ನಚೂನಿ ನಾಯಕರೊಂದಿಗೆ ಕಾಣಿಸಿಕೊಳ್ಳದ ಶಾಸಕ ಬಾಲಚಂದ್ರ ಇಂದು ಸಂಸಂದ ಸುರೇಶ ಅಂಗಡಿ ಅವರೊಂದಿಗೆ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸದ ಪ್ರಸಂಗ ನಡೆದಿದೆ . ನಾಮಪತ್ರ ಸಲ್ಲಿಸಲು ತಹಶೀಲ್ದಾರ್ ಕಛೇರಿಗೆ ಆಗಮಿಸಿದ್ದ ಅರಬಾಂವಿ ಶಾಸಕ ಬಾಲಚಂದ್ರ ಅವರು ನಾಮಪತ್ರ ಸಲ್ಲಿಸುವ ಮೊದಲು ಪರ್ತಕರ್ತರೊಂದಿಗೆ ಹರಠೆಯಲ್ಲಿ ತೊಡಗಿದ್ದಾಗ ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿಯೊಂದಿಗೆ ನಾಮಪತ್ರ ಸಲ್ಲಿಸಲು ಕಛೇರಿಗೆ ಆಗಮಿಸಿದ ಸಂಸಂದರು ಶಾಸಕ ಬಾಲಚಂದ್ರ ನಿಂತದ್ದನ್ನು ಗಮನಿಸಿ ಅವರು ಇದ್ದಕಡೆ ಹೋಗಿ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿ ಸ್ವಲ್ಪ ಹೋತ್ತು ಅವರೊಂದಿದೆ ಚರ್ಚಿಸಿ ಅಶೋಕ ಪೂಜಾರಿ ಅವರ ನಾಮಪತ್ರ ಕಾರ್ಯದಲ್ಲಿ ಭಾಗವಹಿಸಿದರು