RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ: ಎಂಇಎಸ ನಾಯಕರ ಮನೆಗಳಿಗೆ ಬೆಂಕಿ : ನಾಡವಿರೋಧಿ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕನ್ನಡದ ಹುಲಿಗಳು

ಗೋಕಾಕ: ಎಂಇಎಸ ನಾಯಕರ ಮನೆಗಳಿಗೆ ಬೆಂಕಿ : ನಾಡವಿರೋಧಿ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕನ್ನಡದ ಹುಲಿಗಳು 

ಎಂಇಎಸ್ ನಾಯಕರ ಮನೆಗಳಿಗೆ ಬೆಂಕಿ : ಗೋಕಾಕಿನಲ್ಲಿ ನಾಡವಿರೋಧಿ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕನ್ನಡದ ಹುಲಿಗಳು 

 

ಗೋಕಾಕ ಮೇ 25 : ಮರಾಠಿ ಭಾಷೆಯಲ್ಲಿ ದಾಖಲಾತಿಗಳನ್ನು ನೀಡಬೇಕೆಂದು ನಾಡವಿರೋಧಿ ಎಮ್.ಇ.ಎಸ್.ಸಂಘಟನೆ ಹಮ್ಮಿಕೊಂಡ ರ್ಯಾಲಿಯನ್ನು ಮತ್ತು ಶಾಸಕ ಸಂಭಾಜಿ ಮತ್ತು ಅರವಿಂದ ಜೈ ಮಹಾರಾಷ್ಟ್ರ ಎಂದು ಘೊಷಣೆ ಕೂಗಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿಸಿದರು.
ನಗರದ ವಾಲ್ಮೀಕಿ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ನಾಡವಿರೋಧಿ ಎಮ್.ಇ.ಎಸ್.ವಿರುದ್ಧ ಘೋಷಣೆ ಕೂಗಿ ಸಂಬಾಜಿ ಮತ್ತು ಅರವಿಂದ ಪಾಟೀಲರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಎಮ್.ಇ.ಎಸ್.ನಾಯಕರನ್ನು ನಿಯಂತ್ರಿಸಲು ಸರಕಾರ ದಿಟ್ಟ ಕ್ರಮ ಕೈಗೊಂಡು ಅಧಿಕೃತವಲ್ಲದ ಎಮ್.ಇ.ಎಸ್.ಸಂಘಟನೆಗೆ ಯಾವುದೇ ಮುಲಾಜಿಲ್ಲದೆ ನಿರ್ಬಂದನ ಹೇರಬೇಕು. ಪದೇ ಪದೇ ಎಮ್.ಇ.ಎಸ್.ತಂಟೆಯಿಂದ ಕನ್ನಡಿಗರು ರೋಚಿಗೆದ್ದಿದ್ದಾರೆ ಇನ್ನು ಮುಂದೆ ಎಮ್.ಇ.ಎಸ್. ಕ್ಯಾತೆ ಸಹಿಸಲು ಸಾಧ್ಯವಿಲ್ಲ. ಆದಷ್ಟು ಬೇಗ ಜಿಲ್ಲಾಡಳಿತ ಎಂಇಎಸ ಸಂಘಟನೆಗೆ ಮೂಗುದಾರ ಹಾಕಬೇಕು. ಇಲ್ಲದಿದ್ದರೆ ಎಮ್.ಇ.ಎಸ್.ನಾಯಕರ ಮನೆಗಳಿಗೆ ಬೆಂಕಿ ಹಚ್ಚಲಾಗುವುದೆಂದು ಖಾನಪ್ಪನವರ ಖಾರವಾಗಿ ಮಾತನಾಡಿದ್ದಾರೆ.

ನಾಡವಿರೋಧಿಗಳ ಪ್ರತಿಕೃತಿ ಎಳೆದ್ದೋಯುತ್ತಿರುವುದು

ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದ ಸಂಭಾಜಿ ಪಾಟೀಲ, ಅರವಿಂದ ಪಾಟೀಲ ಹಾಗೂ ಮಾಜಿ ಮೇಯರ ಸರಿತಾ ಪಾಟೀಲ, ಜಿ.ಪಂ.ಸದಸ್ಯೆ ಸರಸ್ವತಿ ಪಾಟೀಲ ರವರು ಕರ್ನಾಟಕದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ನಾಡದ್ರೋಹವನ್ನು ವೆಸಗಿದ್ದಾರೆ. ಸರ್ಕಾರ ಈ ಕೂಡಲೇ ಇವರ ಮೇಲೆ ನಾಡವಿರೊಧಿ ಪ್ರಕರಣ ದಾಖಲಿಸಿ ಇವರ ಸದಸ್ಯತ್ವ ವಜಾ ಮಾಡಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರವೇ ಅಧ್ಯಕ್ಷ ಬಸವರಾಜ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಸಂಚಾಲಕ ಕೃಷ್ಣಾ ಖಾನಪ್ಪನವರ ಉಪಾಧ್ಯಕ್ಷರಾದ ದೀಪಕ ಹಂಜಿ ಬಸವರಾಜ ಬೇಡರಟ್ಟಿ, ತಾ. ಸಂಚಾಲಕರಾದ ಹನೀಪಸಾಬ ಸನದಿ, ರೆಹಮಾನ ಮೊಕಾಶಿ, ರಮೇಶ ಕಮತಿ ಅರಭಾಂವಿ ಬ್ಲಾಕ್ ಉಪಾಧ್ಯಕ್ಷ ಮಹಾದೇವ ಮಕ್ಕಳಗೇರಿ, ಶೆಟ್ಟೆಪ್ಪಾ ಗಾಡಿವಡ್ಡರ, ಲಕ್ಷ್ಮಣ ಗೊರಗುದ್ದಿ, ಕೆಂಪಣ್ಣಾ ಕಡಕೋಳ, ಮಲ್ಲಪ್ಪ ತಲೆಪ್ಪಗೋಳ, ಶಂಕರ ಹಾಲವ್ವಗೋಳ, ಮಲ್ಲು ಸಂಪಗಾರ, ಶಾನೂಲ ದೇಸಾಯಿ, ಪ್ರವೀಣ ಗುಡ್ಡಾಕಾಯು, ಬಸು ಗಾಡಿವಡ್ಡರ, ಅಜಿತ ಮಲ್ಲಾಪೂರೆ, ಸಂಜು ಗಾಡಿವಡ್ಡರ, ಲಕ್ಕಪ್ಪ ನಂದಿ, ಅಪ್ಪುಜಿ ನಾಯಕ, ರಮೇಶ ಮೇಸ್ತ್ರಿ, ಫಕೀರಪ್ಪ ಗಣಾಚಾರಿ, ಮುತ್ತೆಪ್ಪ ಘೋಡಗೇರಿ, ರಾಮ ಪಿಡಾಯಿ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: