ಘಟಪ್ರಭಾ:ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ಪ್ರಮೋದ ಮುತಾಲಿಕ ಬೆಂಬಲ
ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ಪ್ರಮೋದ ಮುತಾಲಿಕ ಬೆಂಬಲ
ಘಟಪ್ರಭಾ ಮೇ 3 : ಶ್ರೀರಾಮ ಸೇನೆ ಹಾಗೂ ಶಿವಸೇನೆಯ ಸಂಪೂರ್ಣ ಬೆಂಬಲ ಗೋಕಾಕ ವಿಧಾನ ಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ಇದೆ ಎಂದು ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ ಮುತಾಲಿಕ ಹೇಳಿದರು.
ಅವರು ಬುಧವಾರ ಸಂಜೆ ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಬಿಜೆಪಿಯವರು ಅವಕಾಶವಾದಿಗಳು ಅವರಿಗೆ ತಮ್ಮ ನಿಷ್ಠಾವಂತ ಕಾರ್ಯಕರ್ತರ ಭಾವನೆಗಳಿಗಿಂತ ತಮ್ಮ ಸ್ವಾರ್ಥ ಮುಖ್ಯ ಎಂದು ಕಿಡಿಕಾರಿದ ಅವರು. ಬಿಜೆಪಿಯವರು ಹಿಂದೂ ಡೊಂಗಿವಾದಿಗಳು ಅವರ ಈ ಆಟ ಇನ್ನೂ ನಡೆಯುವದಿಲ್ಲ. ಮತದಾರರು ಜಾಣರಾಗಿದ್ದಾರೆ. ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಹಿಂದೂ ಡೋಂಗಿತನ ಮಾಡಿ ಮತ ಗಿಟ್ಟಿಸಲು ನೋಡುತ್ತಿದ್ದಾರೆ ಅದು ಸಾದ್ಯವಾಗುವದಿಲ್ಲ. ಅವರಿಗೆ ವಿಧಾನ ಸಭೆ ಚುನಾವಣೆಯಲ್ಲಿ ಹಿಂದೂಗಳೆ ಪಾಠ ಕಲಿಸಲಿದ್ದಾರೆ ಎಂದರು.
ಈಗಾಗಲೆ 40 ಕ್ಷೇತ್ರಗಳಲ್ಲಿ ಶಿವಸೇನಾ ಕಾರ್ಯಕರ್ತರು ಚುನಾವಣೆ ಕಣದಲ್ಲಿದ್ದಾರೆ. ಅವರ ಪ್ರಚಾರದ ಜೊತೆಗೆ ಪಾಟೀಲರ ಪ್ರಚಾರಕ್ಕಾಗಿ ಸಮಯ ಕೊಡುತ್ತೇನೆ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಡೊಂಗಿಗಳ ಹಾಗೂ ಸ್ವಜನ ಪಕ್ಷಪಾತ ಮಾಡುವವರ ಕೈಯಲ್ಲಿ ಸಿಲುಕಿ ನಲಗುತ್ತಿದೆ. ಇದರ ಕಡೆಗೆ ರಾಷ್ಟ್ರ ನಾಯಕರು ಗಮನ ಕೂಡದೇ ಹೋದಲ್ಲಿ ಬಿಜೆಪಿ ಪಕ್ಷವನ್ನು ಹಾಳು ಮಾಡುತ್ತಾರೆ. ಪಕ್ಷದ ದ್ವಿಮುಖ ನೀತಿಗೆ ಸಿಡೆದೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಷ್ಠಾವಂತ ಕಾರ್ಯಕರ್ತರಾದ ಸುರೇಶ ಪಾಟೀಲರಿಗೆ ನನ್ನ ವೈಯಕ್ತಿಕ ಹಾಗೂ ಶ್ರೀರಾಮಸೇನಾ ಮತ್ತು ಶಿವಸೇನೆಯ ಕಾರ್ಯಕರ್ತರ ಸಂಪೂರ್ಣ ಬೆಂಬಲಿವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೋಕಾಕ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ, ಹಿರಿಯರಾದ ಲಕ್ಷ್ಮಣ ತಪಸಿ, ಜಿ.ಎಸ್.ರಜಪೂತ, ಚಿರಾಕಲಿಶಾ ಮಕಾನದಾರ, ಗುರುಪ್ರಸಾದ ಪಾಟೀಲ, ಬಾಳಪ್ಪಾ ಮುಂಜೋಜಿ, ಸುಭಾಸ ಗಾಯಕವಾಡ, ಖಾನಗೌಡರ ಸೇರಿದಂತೆ ಅನೇಕರು ಇದ್ದರು.